ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಆಶಾಕಿರಣ ಎಸ್‍ಎಸ್‍ಆರ್ ಪಾಲಿಟೆಕ್ನಿಕ್

ಕಲಬುರಗಿ:ಜೂ.15:ತೊಗರಿಯ ನಾಡು ಎಂದು ಹೆಸರು ಮಾಡಿರುವ ಕಲಬುರಗಿ ಜಿಲ್ಲೆಯೂ ಶೈಕ್ಷಣಿಕವಾಗಿಯೂ ಪ್ರಸಿದ್ದಿ ಪಡೆದಿರುವಂತೆ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ್ಯ ನೀಡುವ ನಿಟ್ಟಿನಲ್ಲಿ ಜೇವರ್ಗಿಯ ಎಸ್‍ಎಸ್‍ಆರ್ ಪಾಲಿಟೆಕ್ನಿಕ್ ಕಾಲೇಜು ಸಹ ಹೆಸರು ಮಾಡಿದೆ. 1985ರಲ್ಲಿ ಲಿಂಗೈಕ್ಯ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಪ್ರಾರಂಭವಾದ ಈ ಕಾಲೇಜು ಈಗಿನ ಪೀಠಾಧಿಪತಿಗಳಾದ ಡಾ. ತೋಂಟದ ಸಿದ್ದರಾಮ ಶ್ರೀಗಳ ಕೃಪಾಶೀರ್ವಾದ ಪ್ರೇರಣೆಯಿಂದ ಸತತವಾಗಿ ಟೆಕ್ನಿಕಲ್ ಎಜುಕೇಷನ್‍ನಲ್ಲಿ ಸೇವೆ ಮಾಡಿಕೊಂಡು ಬರುತ್ತಿದೆ. ಬಡ ವಿದ್ಯಾರ್ಥಿಗಳಿಗೆ ತಾಂತ್ರಿಕ ವೃತ್ತಿಯಲ್ಲಿ ಉದ್ಯೋಗ ಪಡೆಯಲು ಆಶಾಕಿರಣವಾಗಿದೆ. ಇಲ್ಲಿ ವ್ಯಾಸಂಗ ಪಡೆದ ಅನೇಕ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ. 1985 ಪಾಲಿಟೆಕ್ನಿಕ್ ಪ್ರಾರಂಭಗೊಂಡು ಇದೀಗ ಹಲವು ವಿಭಾಗಗಳನ್ನು ಒಳಗೊಂಡಿದೆ. ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಷನ್, ಎಲೆಕ್ಟ್ರಿಕಲ್ಸ್, ಮೆಕಾನಿಕಲ್ ಎಂಜಿನಿಯರ್ಸ್ ವಿಭಾಗಗಳನ್ನು ಒಳಗೊಂಡಿದೆ. ಕಾಲೇಜಿನಲ್ಲಿ ಬೋಧಕ ಹಾಗೂ ಬೋಧಕೇತರ ವರ್ಗ ಸೇರಿ ಸುಮಾರು 50 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು ಅನುಭವವಿರುವ ಬೋಧಕರು ಕೆಲಸ ಮಾಡುತ್ತಿದ್ದಾರೆ. ಪ್ರತಿ ಕೋರ್ಸ್‍ನಲ್ಲಿ ಅನುಭವ ಹೊಂದಿದ್ದಾರೆ. ಪ್ರತಿ ವರ್ಷ 100 ರಿಂದ 200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅತ್ಯುತ್ತಮ ಫಲಿತಾಂಶ ಬರುತ್ತಿದೆ. ಕಳೆದ ವರ್ಷ ಅತ್ಯುತ್ತಮ ಫಲಿತಾಂಶ ಪಡೆದಿದೆ. ಪ್ರಯೋಗಾಲಯ, ಲ್ಯಾಬ್ ಉತ್ತಮವಾಗಿದೆ. ಪ್ರಯೋಗಾಲಯ ಹೊರತುಪಡಿಸಿ ಅಡಿಟೋರಿಯಂ, ಅಡಿಷನಲ್ ಕೋರ್ಸ್‍ಗಳನ್ನು ಮಾಡಿಸುತ್ತಿದ್ದೇವೆ. ಎಂದು ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಸ್ಥಾನಿಕ ಉಪಾಧ್ಯಕ್ಷರಾದ ಶಿವನಗೌಡ ಪಾಟೀಲ ಹಂಗರಗಿ ಹೇಳಿದರು. ಸ್ಥಾನಿಕ ಕಾರ್ಯದರ್ಶಿಗಳಾದ ಪ್ರೋಫೆಸರ್ ವಿಜಯಕುಮಾರ ಮಾಲಗಿತ್ತಿ ಮಾತನಾಡಿ, ಎಸ್‍ಎಸ್‍ಆರ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಂತಿಮವರ್ಷದ ವಿದ್ಯಾಥಿಗಳಿಗೆ ಕ್ಯಾಂಪಸ್ ಸಂದರ್ಶನದ ಮೂಲಕ ಹಲವಾರು ಕಾರ್ಖಾನೆಗಳಲ್ಲಿ ಹಾಗೂ ಪ್ರತಿಷ್ಠಿತ ಸಿಮೆಂಟ್ ಕಂಪನಿಗಳಲ್ಲಿ ನೇಮಕಾತಿ ಹೊಂದಿದ್ದು, ವೇತನವನ್ನು ಪಡೆಯುತ್ತಿದ್ದಾರೆ. ಇಂಡಸ್ಟ್ರಿಗಳೊಂದಿಗೆ ಆನ್‍ಲೈನ್ ತರಗತಿಗಳನ್ನು ನಡೆಸಲಾಗುತ್ತದೆ. ಆನ್‍ಲೈನ್ ತರಗತಿಗಳಿಗೆ ಪ್ರತ್ಯೇಕ ಆಡಿಟೊರಿಯಂ ಇದ್ದು ವೈಫೈ ಕ್ಯಾಂಪಸ್ ಇದೆ. ಇದರೊಂದಿಗೆ ನಮ್ಮಲ್ಲಿ ಮಾಡ್ರನೈಸ್ ಸರ್ವೇ ಉಪಕರಣಗಳಿದ್ದು, ಮುಂತಾದ ಕಡೆಗಳಲ್ಲಿ ಲೈವ್ ಸರ್ವೇ ಮಾಡಿಸಲಾಗುತ್ತದೆ. ಕ್ರೀಡೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ನಮ್ಮಲ್ಲಿ ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜನೆ ಮಾಡಲಾಗುತ್ತದೆ. ಇಂಟರ್ ಪಾಲಿಟೆಕ್ನಿಕ್ ಮೀಟ್‍ಗಳಲ್ಲಿ ಭಾಗವಹಿಸುವುದು ಸೇರಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದಿದ್ದಾರೆ. ವಿದ್ಯಾರ್ಥಿಗಳು ವ್ಯಾಸಂಗದೊಂದಿಗೆ ಇತರ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಾರೆ. ಕಲಿಯಲು ಉತ್ತಮ ವಾತಾವರಣವಿದ್ದು, ಷಣ್ಮುಖ ಶಿವಯೋಗಿ ರೂರಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಡ ಹಾಗೂ ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ವಿಶ್ವಾಸ ಸಿಂದೆ, ಪ್ರೋಫೆಸರ್ ಶಿವಸಾಯಿ ಮಮದಾಪೂರ, ಪ್ರೊ. ಮಲ್ಲಾರೆಡ್ಡಿ, ಸಾಹೇಬಗೌಡ ಪಾಟೀಲ, ಉಪನ್ಯಾಸಕ ದೇವಿಂದ್ರಪ್ಪ ವಿಶ್ವಕರ್ಮ, ಶರಣು ಸೇರಿ ಮುಂತಾದವರು ಹಾಜರಿದ್ದರು.