ಬಡ ಮಕ್ಕಳ ಕಲಿಕೆಗೆ ಪೆÇ್ರೀತ್ಸಾಹಿಸಿ : ಸುಬ್ರಮಣ್ಯ ಪ್ರಭು

(ಸಂಜೆವಾಣಿ ವಾರ್ತೆ)
ಔರಾದ :ಜೂ.10: ತಾಲೂಕಿನ ಎಕಲಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಸಹಕಾರ ಗ್ರಾಮೀಣಾಭಿವೃದ್ಧಿ ಅಕಾಡೆಮಿ, ಸಹಾರ್ದ ಸಂಸ್ಥೆ ವತಿಯಿಂದ ಶಾಲಾ ಮಕ್ಕಳಿಗೆ ನೋಟ್‍ಬುಕ್ ಸೇರಿದಂತೆ ಇನ್ನಿತರ ಕಲಿಕಾ ಸಾಮಗ್ರಿಗಳು ಉಚಿತವಾಗಿ ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಸಂಸ್ಥೆಯ ನಿರ್ದೇಶಕ ಸುಬ್ರಮಣ್ಯ ಪ್ರಭು, ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಕಲಿಕೆಗೆ ಬಡತನ ಅಡ್ಡಿಯಾಗಬಾರದು. ಅನೇಕ ಬಡ ಪ್ರತಿಭಾವಂತ ಸರ್ಕಾರಿ ಶಾಲೆಯ ಮಕ್ಕಳ ಓದಿಗೆ ಪೆÇ್ರೀತ್ಸಾಹಿಸುವುದು ನಮ್ಮ ಸಂಸ್ಥೆಯ ಆಶಯವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ನೋಟ್‍ಬುಕ್ ವಿತರಿಸಲಾಗುತ್ತಿದೆ. ಎಕಲಾರ ಸರ್ಕಾರಿ ಶಾಲೆಯ ವಾತಾವರಣ ಮಕ್ಕಳ ಕಲಿಕೆಗೆ ಪೆÇ್ರೀತ್ಸಾಹಿಸುವಂತಿದ್ದು, ಇಲ್ಲಿ ಮಕ್ಕಳ ಬೌದ್ಧಿಕ, ಮಾನಸಿಕ ವಿಕಾಸಕ್ಕೆ ಅವಕಾಶ ಮಾಡಲಾಗಿದೆ.
ಅಲ್ಲದೇ ಮಕ್ಕಳಿಗೆ ಜ್ಞಾಪಕ ಶಕ್ತಿ ವೃದ್ಧಿಸುವ ವಿವಿಧ ವಿಧಾನಗಳನ್ನು ಚಟುವಟಿಕೆಗಳ ಮೂಲಕ ಪರಿಚಯಿಸಿದರು. ಮಕ್ಕಳು ಸಂಭ್ರಮಿಸಿದರು.
ಮುಖ್ಯ ಶಿಕ್ಷಕ ಪ್ರಭು ಬಾಳೂರೆ ಮಾತನಾಡಿ, ಗಡಿ ತಾಲೂಕಿನ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು ನೀಡಿರುವ ಸಂಸ್ಥೆಯ ಪದಾಧಿಕಾರಿಗಳು ಹಾಗೂ ನಿರ್ದೇಶಕರಾದ ಸುಬ್ರಮಣ್ಯ ಪ್ರಭು ಅವರಿಗೆ ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ಬಸವರಾಜ ಮಣಿಗೆಂಪೂರೆ, ಸದಸ್ಯ ಸಂತೋಷ, ಗಜಾನನ ಮಳ್ಳಾ, ಅಂಜಾರೆಡ್ಡಿ, ಪ್ರತಾಪ, ನಿರ್ಮಲಾ ಸ್ವಾಮಿ, ವೀರಶೆಟ್ಟಿ ಗಾದಗೆ, ಬಾಲಾಜಿ ಅಮರವಾಡಿ, ಅಂಕುಶ ಪಾಟೀಲ್ ಸೇರಿದಂತೆ ಇತರರು ಇದ್ದರು.