ಬಡ ಮಕ್ಕಳಿಗೆ ಅಕ್ಷರ ದಾಸೋಹ ನೀಡುವ ವೀ.ವಿ.ಸಂಘದ ಬೆಂಬಲ ಕೋರಿದ ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಏ 03 : ಜಿಲ್ಲೆಯಷ್ಟೇ ಅಲ್ಲದೆ ಅಕ್ಷರ ದಾಸೋಹ ಬೇಡಿ ಬಂದ ಬಡ ವಿದ್ಯಾರ್ಥಿಗಳಿಗೆ ಅಕ್ಷರ ನೀಡಿದ ವೀರಶೈವ ವಿದ್ಯಾವರ್ಧಕ ಸಂಘದ ಬಡ ವಿದ್ಯಾರ್ಥಿಯೂ ಆಗಿದ್ದ ನನಗೆ ಸಂಘದ ಬೆಂಬಲದ ಮೂಲಕ ಪ್ರಧಾನಿ ಮೋದಿ ಅವರ ಕೈ ಬಲಪಡಿಸುವಂತೆ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಸಂಘದ ಮುಖಂಡರಿಗೆ ಮನವಿ ಮಾಡಿದ್ದಾರೆ.
ಅವರು ಇಂದು ಸಂಘದ ಕಚೇರಿಗೆ ನಗರದ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಪಾಲಿಕೆ ಸದಸ್ಯ ಮಲ್ಲನಗೌಡ ಅವರೊಂದಿಗೆ ತೆರಳಿ ಸಂಘದ ಅಧ್ಯಕ್ಷ ಅಲ್ಲಂ‌ ಗುರುಬಸವರಾಜ್, ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ್, ಕಾರ್ಯದರ್ಶಿ ಅರವಿಂದ ಪಾಟೀಲ್, ಸಹ ಕಾರ್ಯದರ್ಶಿ ಯಾಳ್ಪಿ ಮೇಟಿ ಪಂಪನಗೌಡ ಮತ್ತು ಕೋಶಾಧಿಕಾರಿ ಬೈಲಯವದ್ದಿಗೇರಿ ಯರ್ರಿಸ್ವಾಮಿ  ಅವರುಗಳನ್ನು ಭೇಟಿ ಮಾಡಿ ನಿಮ್ಮ ಆಶಿರ್ವಾದ ನಮಗಿರಲಿ. ಸಂಘದ ಸರ್ವತೋಮುಖ ಬೆಳವಣಿಗೆಗೆ ನಾವು ಸದಾ ನಿಮ್ಮ ಜೊತೆಯಲ್ಲಿದ್ದೇವೆ.  ಈ ಸಂಘದ ಕಾಲೇಜಿನ ಋಉಣ ನನ್ನ ಮೇಲಿದೆ. ಯಾವುದೇ ಸಂದರ್ಭದಲ್ಲಿ  ಸಂಘದ ಅಭಿವೃದ್ಧಿಗೆ ನನ್ನ ಸಹಕಾರವಿರುತ್ತದೆ. ಅದು ಕೇವಲ ಚುನಾವಣೆ ದೃಷ್ಠಿಯಿಂದಲ್ಲ, ಓರ್ವ ವಿದ್ಯಾರ್ಥಿಯಾಗಿ ಎಂದರು. ಎಲ್ಲರು ಪರಸ್ಪರ ಸಮಾಲೋಚನೆ ನಡೆಸಿದರು.