ಬಡ ಬೀದಿ ವ್ಯಾಪಾರಿಗಳಿಗೆ ಸಹಕಾರಿ ಬ್ಯಾಂಕಗಳ ಪಾತ್ರ ಬಹಳ ಮುಖ್ಯ

ಇಂಡಿ :ನ.14: ಸಹಕಾರಿ ಸಂಘಗಳು ಪ್ರಪ್ರಥಮ ಬಾರಿಗೆ 1905 ರಲ್ಲಿ ಗದಗದ ಜಿಲ್ಲೆಯ ಕನಗಿನಾಳದಲ್ಲಿ ಆರಂಭವಾಯಿತು. ನಂತರದ ದಿನಗಳಲ್ಲಿ ಅನೇಕ ಜಿಲ್ಲೆಗಳಲ್ಲಿ ಇಂದು ಸಾಕಷ್ಟು ಬೆಳವಣಿಗೆ ಆಗಿವೆ. ಸಹಕಾರ ಸಂಘಗಳು ವ್ಯಾಪಾರ ಉದ್ಯೋಗ, ಬೀದಿ ವ್ಯಾಪಾರಸ್ಥರಿಗೆ ಸಹಕಾರಿಯಾಗಿದೆ. ಸರಕಾದ ಬ್ಯಾಂಕಗಳು ಸಾಲ ಕೇಳಿದಾಗ ಸಾಕಷ್ಟು ನಿಭಂದನೆಗಳು ಹಾಕುತ್ತವೆ ಆದರೆ ಸಹಕಾರಿ ಬ್ಯಾಂಕಗಳು ತ್ವರಿತವಾಗಿ ಸ್ಪಂದಿಸುತ್ತವೆ. ಸಹಕಾರಿ ಬ್ಯಾಂಕಗಳ ವ್ಯಾಪಾರಸ್ಥರ , ಬಡ ಉದ್ಯೋಗಿಗಳಿಗೆ ಸಕಾಲಕ್ಕೆ ಸಹಾಯ ಮಾಡಬೇಕು ಎಂದು ಸೋಮಲಿಂಗ ವiಹಾರಾಜರು ಕೆಸರಟ್ಟಿ ಹೇಳಿದರು.
ಇಂಡಿ ಪಟ್ಟಣದಲ್ಲಿ ಬಂಜಾರಾ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಬ್ಯಾಂಕ್ ಉದ್ಘಾಟನೆ ವೇಳೆಯಲ್ಲಿ ಮಾತನಾಡಿದ. ಬಡ ಬೀದಿ ವ್ಯಾಪಾರಿಗಳಿಗೆ ಸಹಕಾರಿ ಬ್ಯಾಂಕಗಳು ಬಹಳ ಮಹತ್ವವಾದ ಪಾತ್ರವನು ವಹಿಸುತ್ತಿರುವದು ಕಂಡು ಬರುತಿದೆ, ಪಟ್ಟಣದಲ್ಲಿ ಹಾಗೂ ಹಳ್ಳಿಗಳಲ್ಲಯೂ ಸಹಕಾರಿ ಬ್ಯಾಂಕಗಳಿಂದ ಬಡವರ ಜೀವನಕ್ಕೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಿವೆ ಎಂದರು.
ಈ ಸಂದರ್ಭದಲ್ಲಿ ಡಾ. ಶ್ರೀಧರ ರಾಠೋಡ, ವಿಜಯಕುಮಾರ ರಾಠೋಡ, ಸಂಜೀವ ಧನಸಿಂಗ ಚವ್ಹಾಣ, ಕಾಸುಗೌಡ ಬಿರಾದಾರ, ಇಲ್ಲಿಯಾಸ ಬೋರಾಮಣಿ,ಭಿಮಣ್ಣ ಕೌವಲಗಿ, ಹಣಮಂತರಾಯಗೌಡ ಪಾಟೀಲ, ಮೋಹನ ರಾಠೋಡ, ಬಾಬು ರಾಠೋಡ, ಸರ್ಜನ ಜಾಧವ ಹಾಗೂ ಅನೇಕರು ಉಸ್ಥಿತರಿದ್ದರು.