ಬಡ ಬೀದಿ ವ್ಯಾಪಾರಿಗಳಿಗೆ ಸಹಕಾರಿ ಬ್ಯಾಂಕಗಳ ಪಾತ್ರ ಬಹಳ ಮುಖ್ಯ: ಯಶವಂತರಾಯಗೌಡ ಪಾಟೀಲ

ಇಂಡಿ:ನ.17: ದೇಶದ ಆರ್ಥಿಕ ಅಭಿವೃದ್ದಿಗೆ ಸೌಹಾರ್ದ ಸಹಕಾರಿ ನಿ,ಬ್ಯಾಂಕುಗಳ ಸಾಕಷ್ಟು ಪ್ರಗತಿಯ ಹೆಜ್ಜೆಯಲ್ಲಿವೆ. ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಬೀದಿ ಬದಿ ವ್ಯಾಪಾರ, ಸಗಟು ವ್ಯಾಪಾರಸ್ಥರಿಗೆ ಸಹಕಾರಿ ಸೌಹಾರ್ದ ಬ್ಯಾಂಕುಗಳು ಸಾಕಷ್ಟು ಸಹಾಯ ಸಹಕಾರ ಮಾಡುತ್ತಿವೆ.
ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸ್ವಾಮಿ ವಿವೇಕಾನಂದ ಸರ್ಕಲ್ ಎದುರುಗಡೆ ಅರಬ ಕಾಂಪ್ಲೇಕ್ಸ್ ಸಮೃದ್ದ ಸಾಯಿ ಸೌಹಾರ್ದ ಸಹಕಾರಿ ನಿ, ಇಂಡಿ ನೂತನ ಸಹಕಾರಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಸಹಕಾರಿ ಸಂಘಗಳು ಪ್ರಪ್ರಥಮ ಬಾರಿಗೆ 1905 ರಲ್ಲಿ ಗದಗದ ಜಿಲ್ಲೆಯ ಕನಗಿನಾಳದಲ್ಲಿ ಆರಂಭವಾಯಿತು. ನಂತರದ ದಿನಗಳಲ್ಲಿ ಅನೇಕ ಜಿಲ್ಲೆಗಳಲ್ಲಿ ಇಂದು ಸಾಕಷ್ಟು ಬೆಳವಣಿಗೆ ಆಗಿವೆ. ಸಹಕಾರ ಸಂಘಗಳು ವ್ಯಾಪಾರ ಉದ್ಯೋಗ, ಬೀದಿ ವ್ಯಾಪಾರಸ್ಥರಿಗೆ ಸಹಕಾರಿಯಾಗಿದೆ. ಸರಕಾರದ ಬ್ಯಾಂಕಗಳು ಸಾಲ ಕೇಳಿದಾಗ ಸಾಕಷ್ಟು ನಿಭಂದನೆಗಳು ಹಾಕುತ್ತವೆ ಆದರೆ ಸಹಕಾರಿ ಬ್ಯಾಂಕುಗಳು ತ್ವರಿತವಾಗಿ ಸ್ಪಂದಿಸುತ್ತವೆ. ಸಹಕಾರಿ ಬ್ಯಾಂಕಗಳು ಕೇವಲ ಲಾಭದ ಮೂಲ ಬಂಡವಾಳವಾಗಿರದೆ ಸಾಮಾನ್ಯ ಜನರ ಅಭಿವೃದ್ದಿ ದೃಷ್ಠಿಕೊನ ಹೊಂದಿರಬೇಕು.ಸರ್ವ ಜನ ಸುಖಿನೋ ಭವಂತೋ ಎಂಬ ತತ್ವದ ತಳಹದಿಯಲ್ಲಿ ನಡೆಯಬೇಕು ತಾನೂ ಬದಕಬೇಕು ಇನ್ನೋಬ್ಬರಿಗೂ ಬೆಳೆಸಬೇಕು ಇದು ಸಹಕಾರದ ಗುಣ.
ವ್ಯಾಪಾರಸ್ಥರ , ಬಡ ಉದ್ಯೋಗಿಗಳಿಗೆ ಸಕಾಲಕ್ಕೆ ಸಹಾಯ ಮಾಡಬೇಕು.
ಬಡ ಬೀದಿ ವ್ಯಾಪಾರಿಗಳಿಗೆ ಸಹಕಾರಿ ಬ್ಯಾಂಕಗಳು ಬಹಳ ಮಹತ್ವವಾದ ಪಾತ್ರವನು ವಹಿಸುತ್ತಿರುವದು ಕಂಡು ಬರುತಿದೆ, ಪಟ್ಟಣದಲ್ಲಿ ಹಾಗೂ ಹಳ್ಳಿಗಳಲ್ಲಯೂ ಸಹಕಾರಿ ಬ್ಯಾಂಕಗಳಿಂದ ಬಡವರ ಜೀವನಕ್ಕೆ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಿವೆ. ತಾಲೂಕಿನಲ್ಲಿ ಕೂಡಾ ಸಾಕಷ್ಟು ಸೌಹಾರ್ದತಾ ಸಹಕಾರಿ ನಿ, ಬ್ಯಾಂಕುಗಳು ಹುಟ್ಟಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಇಂತಹ ಸಹಕಾರಯುತ ಕಾರ್ಯಗಳು ನಡೆಯಲಿ ಎಂದು ಶುಭಕೋರಿದರು.
ಸುಕ್ಷೇತ್ರ ಗೋಳಸಾರದ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ದಿವ್ಯಸಾನಿಧ್ಯವಹಿಸಿದರು.

ಅಧ್ಯಕ್ಷ ಭೀಮರಾಯ ಆರ್ ಜಾಲಗೇರಿ, ಉಪಾಧ್ಯಕ್ಷ ಯಾಶೀನ ಅರಬ, ವ್ಯವಸ್ಥಾಪಕ ಅನೀಲ ತಡಕಲ್, ನಿರ್ದೇಶಕರಾದ ಭೀಮರಾಯಗೌಡ ಪಾಟೀಲ, ಅಬ್ದುಲ ರಹೇಮಾನ ಹವಾಲ್ದಾರ, ಸಭಾಷ ಧನಶೆಟ್ಟಿ, ಅನೀಲಕುಮಾರ ಪಾಟೀಲ, ನಂದಲಾಲ ಗುಜ್ಜರ, ಆನಂದ ಪಾಟೀಲ, ವಿಜಯಲಕ್ಷ್ಮೀ ದೇಸಾಯಿ, ನಿರ್ಮಲಾ ಬುರಕುಲೆ, ವಿಧ್ಯಾಲಕ್ಷ್ಮೀ ಅವುಜಿ, ಸುನೀಲ ಜ್ಯೋಶಿ ಸೇರಿದಂತೆ ಅನೇಕರು ಇದ್ದರು.