ಬಡ ಪ್ರತಿಭೆಗೆ ವೈಷ್ಣೋದೇವಿ ಟ್ರಸ್ಟ್ ದಿಂದ ಪ್ರೋತ್ಸಾಹ

ಔರಾದಃಮೇ.17: ತಾಲೂಕಿನ ಯನಗುಂದಾ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಬಸವಜ್ಯೋತಿ ಬಾಬುಗೊಂಡ ಈ ವಿದ್ಯಾರ್ಥಿನಿಯು ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದು, ಮುಂದಿನ ವಿದ್ಯಾಭ್ಯಾಸ ಮಾಡಲು ಆರ್ಥಿಕ ಸಂಕಷ್ಟದಲ್ಲಿರುವುದನ್ನು ಮನಗಂಡು ಬೀದರ ನಗರ ಗುಮ್ಮೆ ಕಾಲೋನಿಯ ಶ್ರೀ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಧ್ಯಕ್ಷ ಸಂಗಮೇಶ ಬಿರಾದಾರ ಸ್ವತ ವಿದ್ಯಾರ್ಥಿನಿಯ ಮನೆಗೆ ಭೇಟ್ಟಿ ನೀಡಿ, ಕಲಿಕಾ ಸಾಮಗ್ರಿಗಳು, ಬಟ್ಟೆ ಹಾಗೂ ನಗದು ಹತ್ತು ಸಾವಿರ ಹಣವನ್ನು ನೀಡಿ ಗೌರವಿಸಿದ್ದಾರೆ.

ಟ್ರಸ್ಟ್‍ನ ಅಧ್ಯಕ್ಷ ಸಂಗಮೇಶ ಬಿರಾದಾರ ಮಾತನಾಡಿ, ತಂದೆ-ತಾಯಿ ಇಲ್ಲದ, ವಯಸ್ಸಾದ ಅಜ್ಜ-ಅಜ್ಜಿಯ ಆಶ್ರಯದಲ್ಲಿ ಬೆಳೆದು, ಬಡತನದಲ್ಲಿಯೂ ಕೂಡ ಅಗ್ರಗಣ್ಯಸ್ಥಾನದಲ್ಲಿ ತೇರ್ಗಡೆ ಹೊಂದಿದ ಗ್ರಾಮೀಣ ಪ್ರತಿಭೆಯ ಬಸವಜ್ಯೋತಿ ವಿದ್ಯಾರ್ಥಿನಿ ಇನ್ನು ಮುಂದೆಯು ಕೂಡ ಉನ್ನತ ವ್ಯಾಸಂಗ ಮಾಡುವಂತೆ ಪ್ರೋತ್ಸಾಹಿಸಿದರು. ಟ್ರಸ್ಟ್ ವತಿಯಿಂದ ಇಂತಹ ಅನೇಕ ಸಾಮಾಜಿಕ ಕಳಕಳಿಯುಳ್ಳ ಸೇವೆ ಸಲ್ಲಿಸುತ್ತ ಬರುತ್ತಿದ್ದು, ಇತರೆ ಸಂಘ-ಸಂಸ್ಥೆಯವರು ಕೂಡ ಇಂತಹ ಪ್ರತಿಭೆಯುಳ್ಳವರನ್ನು ಗುರುತಿಸಿ ಸಹಕರಿಸುವುದು ಅಗತ್ಯವಾಗಿದೆ ಎಂದರು.

ಯನಗುಂದಾ ಸರಕಾರಿ ಪ್ರೌಢ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಮುಖ್ಯ ಗುರು ಶಾಮಸುಂದರ ಖಾನಾಪೂರ, ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ, ಪತ್ರಕರ್ತ ಸಂತೋಷ ಚಾಂಡೇಶ್ವರೆ, ವಿದ್ಯಾರ್ಥಿನಿಯ ಅಜ್ಜ ಜ್ಞಾನಗೊಂಡ, ಲಕ್ಷ್ಮಣ ರೆಡ್ಡಿ ಗಂಗಾಪೂರೆ, ದತ್ತು ವಿ. ಬಾವಗೆ, ಬಸವರಾಜ ಘುಳೆ, ಅಮರ ಮೊಕ್ತೆದಾರ ಉಪಸ್ಥಿತರಿದ್ದರು.