ಬಡ ಪೌರಕಾರ್ಮಿಕರಿಗೆ ಆಹಾರದ ಕಿಟ್ ಹಂಚಿಕೆ ಮಾಡುವ ಮೂಲಕ ಮಾನವೀಯತೆ ಮೆರೆದ ಭಾರತಿ ಟಂಕಸಾಲಿ

ವಿಜಯಪುರ, ಜೂ.1-ದೇಶದಲ್ಲೆಡೆ ಕರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಸಂಕಷ್ಟದಲ್ಲಿರುವ ಬಡ ಪೌರಕಾರ್ಮಿಕರಿಗೆ ಸಹಾಯಮಾಡುವುದು ಮಾನವೀಯ ಕಾರ್ಯವಾಗಿದ್ದ ಪರಿಣಾಮ ಬಹಳಷ್ಟು ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿರುವ ಈ ದಿನಮಾನದಲ್ಲಿ ಸಾಕಷ್ಟು ಜನ ಬಡವರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದ್ದು. ಆರ್ಥಿಕವಾಗಿ ಅನೇಕ ವರ್ಗಗಳು ನರಳುತ್ತಿವೆ. ಬಡವರ ಬದುಕು ದುಸ್ತರವಾಗಿದೆ.
ಇಂತಹ ಸಂದರ್ಭದಲ್ಲಿ ವಿಜಯಪುರದ ನಗರವನ್ನು ಸ್ವಚ್ಛಗೊಳಿಸುವ ಬಡ ಪೌರಕಾರ್ಮಿಕರಿಗೆ ಆಹಾರದ ಕಿಟ್ಟಗಳನ್ನು ಹಂಚುವುದರ ಮುಖಾಂತರ, ವಿಶ್ವಕರ್ಮ ಮಹಿಳಾ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷೆ ಭಾರತಿ ಟಂಕಸಾಲಿ ಮಾನವೀಯತೆಯನ್ನು ಮೆರೆದಿದ್ದಾರೆ. ಇವರ ಜೊತೆಗೆ ಆರೋಗ್ಯ ಇಲಾಖೆಯ ನೌಕರರಾದ ಪೌಜಾ ಸಾದತ್, ಮಣೂರ ಸರ್ ಹಾಗೂ ಜಿಲ್ಲಾ ಕಸಾಪ ಕಾರ್ಯದರ್ಶಿ ಬಸವರಾಜ ಕುಂಬಾರ ಸಹಾಯ ಹಸ್ತ ನೀಡಿದ್ದಾರೆ. ಈ ಸಂದರ್ಭದಲ್ಲಿ ಪೌರಕಾರ್ಮಿಕರ ಸೂಪರವೈಜರ ಉಪಸ್ಥಿತರಿದ್ದು ಇವರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.