ಬಡ ನಿರ್ಗತಿಕರ ನೆರವಿಗೆ ಧಾವಿಸಲು ಇರ್ಷಾದ ಅಲಿ ಕರೆ

ಕಲಬುರಗಿ:ಮೇ.29: ಮಹಾಮಾರಿ ಕರೋನಾ ವೈರಸ್‍ನಿಂದ ಲಾಕ್‍ಡೌನ್ ಆದಾಗಿನಿಂದ ನಗರ ಪ್ರದೇಶಗಳ ರಸ್ತೆ ಬದಿಗಳಲ್ಲಿ ವಾಸಿಸುವ ಬಡ, ನಿರ್ಗತಿಕ ಜನರು ತುತ್ತು ಅನ್ನಕ್ಕೆ ಪರದಾಡುತ್ತಿದ್ದಾರೆ. ಇಂತವರ ನೆರವಿಗೆ ಧಾವಿಸಬೇಕಾಗಿರುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಆದ್ದರಿಂದ ಬಡ ನಿರ್ಗತಿಕರ ನೇರವಿಗೆ ಧಾವಿಸಬೇಕು ಎಂದು ದಲಿತ ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹ್ಮದ್ ಇರ್ಷಾದ್ ಅಲಿ ನುಡಿದರು.

ನಗರದ ಬೀದಿ ಬದಿ ಅನ್ನ ಆಹಾರವಿಲ್ಲದೆ ಪರದಾಡುವ ಜನರಿಗೆ ಆಹಾರ ಪೊಟ್ಟಣ, ನೀರು ಹಾಗೂ ಬಾಳೆಹಣ್ಣುಗಳನ್ನು ವಿತರಿಸಿ ಮಾತನಡುತ್ತಾ ಅವರು, ಹಸಿದವರಿಗೆ ನಿತ್ಯ ಕೈ ತುತ್ತು ನೀಡಿದರು ತಪ್ಪೇನಿಲ್ಲ. ನನ್ನ ವೈಯಕ್ತಿವಾಗಿ ಹಾಗೂ ಕಲಬುರಗಿ ದಲಿತ ಸೇನೆ ವತಿಯಿಂದ ಪ್ರತಿನಿತ್ಯ ಕೈಲಾದ ಸಮಾಯವನ್ನು ಮಾಡುತ್ತೇವೆ. ಅದರಂತೆ ಪ್ರಂಟ್ ಲೈನ್ ವಾರಿಯರ್ಸ್‍ರಾದ ಪೊಲೀಸರಿಗೆ ಹಾಗೂ ಹೋಮಗಾರ್ಡ್ ಇವರಿಗೂ ಕೂಡ ಬೆಳ್ಳಗಿನ ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದರು.

ಕೊವೀಡ್ ನಿಂದಾಗ ಬಡವರ, ರೋಗಿಗಳ ಜೀವನ ಬೀದಿಗೆ ಬಂದಿದ್ದೂ, ಒಂದೊಪ್ಪತಿನ ಊಟಕ್ಕೂ ತೊಂದರೆಯಾಗಿದೆ. ಲಾಕ್‍ಡೌನ್ ವಿಧಿಸಿರುವದರಿಂದ ಯಾವುದೇ ಹೊಟೇಲ್‍ಗಳು ತೆರೆಯದ ಕಾರಣ ಊಟಕ್ಕೆ ತೊಂದರೆಯಾಗಿರುವುದನ್ನು ಅರಿತು. ಬಡವರಿಗೆ, ನಿರ್ಗತಿಕರಿಗೆ ಶುದ್ದ ಕುಡಿಯುವ ನೀರಿನ ಬಾಟಲ್ ಅಹಾರ ಪೆÇಟ್ಟಣವನ್ನು ನೀಡುತ್ತಿದ್ದೇವೆ. ಕೊರೋನಾ ಸಂಕಷ್ಟ ಸಮಯದಲ್ಲಿ ಮಾನವರಾದವರು ಮಾನವರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನಗರದ ಕೇಂದ್ರ ಬಸ್ಸ್ ನಿಲ್ದಾಣ, ರೈಲು ನಿಲ್ದಾಣ, ತಿಮ್ಮಾಪೂರ ವೃತ್ತ, ಸಿದ್ದಿಬಾಷಾ ದರ್ಗಾ ಸೇರಿದಂತೆ ನಗರದ ಹಲವೇಡೆ ಸುಮಾರು 200ಕ್ಕೂ ಹೆಚ್ಚು ಆಹಾರದ ಪೊಟ್ಟಣ, ಕುಡಿಯುವ ನೀರು ಹಾಗೂ ಬಾಳೆಹಣ್ಣುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸೇನೆಯ ಜಿಲ್ಲಾಧ್ಯಕ್ಷ ಡಿಕೆ, ಮದನಕರ್, ಮಂಜುನಾಥ ಭಂಡಾರಿ, ಗುರು ಮಾಳಗೆ, ಕಪಿಲ್ ವಾಲಿ, ಸೇರಿದಂತೆ ಇನ್ನಿತರರು ಇದ್ದರು.