ಬಡ ನಿರ್ಗತಿಕರಿಗೆ, ಖಾಸಗಿ ಶಾಲಾ ಶಿಕ್ಷಕರಿಗೆ ಹಾಗೂ ಆಟೋ ಚಾಲಕರಿಗೆ ಆಹಾರ ಕಿಟ್ ಹಂಚಿದ ಸುವಿದಾ ಸಾಮಾಜಿಕ ಸಂಸ್ಥೆ

ವಿಜಯಪುರ, ಜೂ.8-ನಗರದ ಬಡ ನಿರ್ಗತಿಕರಿಗೆ, ಅನುದಾನ ರಹಿತ ಶಾಲಾ ಶಿಕ್ಷಕರು ಹಾಗೂ ಆಟೋ ರಿಕ್ಷಾ ನಡೆಸುವ ಚಾಲಕರುಗಳಿಗೆ ಆಹಾರ ಕಿಟ್‍ಗಳನ್ನೂ ಸುವಿದಾ ಸಾಮಾಜಿಕ ಸಂಸ್ಥೆಯಿಂದ ಹಂಚಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಠೋಡ್ ರವರು ಮಾತನಾಡಿ ಸರಕಾರ ಕರೋನ್ ರೋಗ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಜನತೆಯ ಬಗ್ಗೆ ಸ್ವಲ್ಪವು ಕೂಡಾ ಕಾಳಜಿ ಇಲ್ಲ ಹಸಿವಿನಿಂದ ಹಲವು ಕುಟುಂಬಗಳು ಬೀದಿ ಪಾಲಾಗಿವೆ ಎಂದರು.
ದುಡಿಯುವ ಕೈಗಳಿಗೆ ಯಾವದೇ ಕೆಲಸ ಇಲ್ಲದೆ ಪರದಾಡುವದು ಕಂಡು ಬಂದಿವೆ ಪರಿಹಾರ ಕೇವಲ ಮೂಗು ಸವರುವ ತಂತ್ರವಾಗಿದೆ ಜನತೆಯ ಸಾವಿನ ಪ್ರಮಾಣ ತಡೆಯುವಲ್ಲಿ ಸರಕಾರ ಸಂಪೂರ್ಣ ಹತಾಶವಾಗಿದೆ ಎಂದು ನುಡಿದರು ಸುವಿಧಾ ಸಾಮಾಜಿಕ ಸಂಸ್ಥೆ ಮಾನವೀಯ ಕಾರ್ಯ ಮಾಡುತ್ತಿರುವದು ಸ್ಲ್ಯಾಘನಿಯ ಎಂದು ಹೇಳಿದರು..
ಕಾಂಗ್ರೆಸ್ ನಾಯಕರಾದ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ ಸಾರ್ವಜನಿಕರೇ ಜನತೆಯ ಸೇವೆ ಮಾಡಿ ಜನರ ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ ಆದರೆ ಸರಕಾರ ನೆಪ ಮಾತ್ರಕ್ಕೆ ಮೇಲಿಂದ ಮೇಲೆ ಸಭೆ ಕರೆದು ಅದರಲ್ಲಿಯೇ ಕಾಲ ಹರಣ ಮಾಡುತ್ತಿದೆ ಜನರ ಆರೋಗ್ಯದ ಬಗ್ಗೆ ಕಿಂಚಿತು ಕೂಡಾ ಕಾಳಜಿ ಇಲ್ಲ ಎಂದರು.
ಸುವಿಧಾ ಸಾಮಾಜಿಕ ಸಂಸ್ಥೆಯ ಅಧ್ಯಕ್ಷರಾದ ಫಯಾಜ್ ಕಲಾದಗಿಯವರು ಮಾತನಾಡಿ ದಿನದಿಂದ ದಿನಕ್ಕೇ ಮಹಾಮಾರಿ ಸಾಂಕ್ರಾಮಿಕ ರೋಗ ಕರೋನ ಹೆಚ್ಚಿಗೆ ಆಗಿದೆ ಇದನ್ನು ತಡೆಗಟ್ಟಲು ಸರ್ಕಾರ ಲಾಕ್ ಡೌನ್ ಆದೇಶ ಜಾರಿಗೆ ಮಾಡಿದ್ದರಿಂದ ಬಡ ನಿರ್ಗತಿಕರು, ಅನುದಾನ ರಹಿತ ಶಾಲಾ ಶಿಕ್ಷಕರು ಹಾಗೂ ಆಟೋ ರಿಕ್ಷಾ ಚಾಲಕರು ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ವಿವರಿಸಿದರು.
ಇಂತಹ ಸಂದರ್ಭದಲ್ಲಿ ಸುವಿಧಾ ಸಾಮಾಜಿಕ ಸಂಸ್ಥೆ ಮಾನವೀಯತೆಯಿಂದ ತನ್ನ ಕೈಲಾದ ಸಹಾಯವನ್ನು ಮಾಡಲು ಮುಂದಾಗಿ ಸಾರ್ವಜನಿಕರಿಗೆ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ.,ನಿರ್ಗತಿಕರಿಗೆ ನಾವು ಆಹಾರ ಕಿಟ್ ನೀಡುವುದು ನಮ್ಮ ಕರ್ತವ್ಯವಾಗಿದೆ. ಪ್ರತಿಯೊಬ್ಬರಿಗೂ ಆಹಾರ ಕಿಟ್ ನೀಡಿ ಸಂಕಟದಲ್ಲಿದ್ದ ಜನರಿಗೆ ಸಹಾಯ ಮಾಡುವುದು ನಮ್ಮ ಸಂಸ್ಥೆ ಗುರಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಶೋಕ್ ಜಾಧವ ಬಿ.ಕೆ ಬಸವರಾಜ್ ಎ.ಎ.ಜಹಾಗೀರದಾರ, ರಿಯಾಜ್ ಡೋಂಗರ್‍ಗಾಂವ, ಶಫೀಕ್ ಜಹಾಗೀರದಾರ, ನಸ್ಸೀಂ ರೋಜಿನದಾರ್, ರಾಜು ಸಿಂದಗಿ, ಸಾದಿಕ್ ಜಾನ್ವೇಕರ್, ಐ.ಸಿ ಪಠಾಣ, ಶಿವಾನಂದ ದುದಗಿ, ಸುರೇಶ ಬಿಜಾಪುರ, ರಜಾಕ ಬಾಗೇವಾಡಿ, ಇಲಿಯಾಸ ಜಕಾತಿ, ಸಲಾವುದ್ದೀನ ಪಟೇಲ್, ಜಾವೀದ ಕೋಲಾಪುರ, ರಹೇಮನ್ ಶನವಾಲೇ, ಎ.ಡಬ್ಲು ಗುಡಗುಂಟಿ ಆರ್.ಎಮ್. ಜುಮಾನಲ್ ಎಮ್.ಎ. ಗುಂದಗಿ ಮುಂತಾದವರು ಇದ್ದರು.