ಬಡ ನಿರ್ಗತಿಕರಿಗೆ, ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಆಹಾರ ಕಿಟ್, ಮಾಸ್ಕ್ ವಿತರಣೆ

ವಿಜಯಪುರ, ಜೂ.1-ನಗರದ ಎಲ್ಲ ವಾರ್ಡ್‍ಗಳಲ್ಲಿ ಬಡ ನಿರ್ಗತಿಕರಿಗೆ ಹಾಗೂ ಅನುದಾನ ರಹಿತ ಶಾಲಾ ಶಿಕ್ಷಕರುಗಳಿಗೆ ಆಹಾರ ಕಿಟ್ ಹಾಗೂ ಮಾಸ್ಕ್‍ಗಳನ್ನೂ ಸುವಿದಾ ಸಾಮಾಜಿಕ ಸಂಸ್ಥೆಯಿಂದ ಹಂಚಲಾಯಿತು.
ಈ ಸಂದರ್ಭದಲ್ಲಿ ಡಾ. ಬಾಬುರಾಜೇಂದ್ರ ನಾಯಿಕ, ಮಾಜಿ ಮಹಾ ನಗರ ಪಾಲಿಕೆ ಸದಸ್ಯರಾದ ಅಬ್ದುಲ್ ರಜಾಕ ಹೊರ್ತಿ ಮಾತನಾಡಿ, ದಿನದಿಂದ ದಿನಕ್ಕೇ ಮಹಾಮಾರಿ ಸಾಂಕ್ರಾಮಿಕ ರೋಗ ಕರೋನ ತನ್ನ ವಿಸ್ಮತೆಯನ್ನೆ ಹೆಚ್ಚಿಗೆ ಮಾಡಿಕೊಳ್ಳುತ್ತಿದ್ದು, ಇದನ್ನು ತಡೆಗಟ್ಟಲು ಸರ್ಕಾರ ಲಾಕ್ ಡೌನ್ ಆದೇಶ ಜಾರಿಗೆ ಮಾಡಿದ್ದರಿಂದ ಬಡ ನಿರ್ಗತಿಕರು ಹಾಗೂ ಅನುದಾನ ರಹಿತ ಶಾಲಾ ಶಿಕ್ಷಕರು ಜೀವನ ನಡೆಸುವುದು ದುಸ್ತರವಾಗಿದೆ ಎಂದರು.
ಇಂತಹ ಸಂದರ್ಭದಲ್ಲಿ ಸುವಿಧಾ ಸಾಮಾಜಿಕ ಸಂಸ್ಥೆ ಮಾನವೀಯತೆಯಿಂದ ತನ್ನ ಕೈಲಾದ ಸಹಾಯವನ್ನು ಮಾಡಲು ಮುಂದಾಗಿ ಸಾರ್ವಜನಿಕರಿಗೆ ಹಸಿವು ನೀಗಿಸುವ ಕೆಲಸ ಮಾಡುತ್ತಿದೆ. ಈಗಿನ ದಿನ ಮಾನದಲ್ಲಿ ಯಾವುದು ಶಾಶ್ವತವಲ್ಲ ಇದ್ದಷ್ಟುದಿನ ಹಾಯಾಗಿದ್ದು, ನೆರೆ ಹೊರೆಯವರಿಗೆ ಸಹಾಯ ಮಾಡಬೇಕಾದ್ದದ್ದು, ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಸುವಿದಾ ಸಾಮಾಜಿಕ ಸಂಸ್ಥಗೆ ಇನ್ನಷ್ಟು ದೇವರು ಬಲ ನೀಡಿ, ಬಡವರಿಗೆ ಸಹಾಯ ಮಾಡಲು ಅನುಕೂಲ ಮಾಡಿಕೊಡಬೇಕೆಂದು ಹಾರೈಸಿದರು.
ಈ ಸಂದರ್ಭದಲ್ಲಿ ಅಶೋಕ ಜಾಧವ ಹಾಗೂ ಫಯಾಜ ಕಲಾದಗಿ ಮಾತನಾಡಿ, ನಿರ್ಗತಿಕರಿಗೆ ನಾವು ಆಹಾರ ಕಿಟ್ ನೀಡುವುದು ನಮ್ಮ ಕರ್ತವ್ಯವಾಗಿದೆ. ಪ್ರತಿಯೊಬ್ಬರಿಗೂ ಆಹಾರ ಕಿಟ್ ನೀಡಿ ಸಂಕಟದಲ್ಲಿದ್ದ ಜನರಿಗೆ ಸಹಾಯ ಮಾಡುವುದು ನಮ್ಮ ಸಂಸ್ಥೆ ಗುರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಎ.ಎ.ಜಹಾಗೀರದಾರ, ಎಂ. ಎಸ್.ಪಾಟೀಲ್ (ಗಣಿಯಾರ), ರಿಯಾಜ್ ಡೋಂಗರ್ ಗಾಂವ, ಶಫೀಕ್ ಜಹಾಗೀರದಾರ, ನಸ್ಸೀಂ ರೋಜಿನದಾರ್, ರಾಜು ಸಿಂದಗಿ, ಸಾದಿಕ್ ಜಾನ್ವೇಕರ್, ಐ.ಸಿ ಪಠಾಣ, ಶಿವಾನಂದ ದುದಗಿ, ರಜಾಕ ಬಾಗೇವಾಡಿ, ಇಲಿಯಾಸ ಜಕಾತಿ, ಸಲಾವುದ್ದೀನ ಪಟೇಲ್, ಜಾವೀದ ಕೋಲಾಪುರ, ಜಿಯಾ ಪಠಾಣ, ಸೈಯದಖಾದ್ರಿ ಗುಡಗುಂಟಿ ಮುಂತಾದವರು ಇದ್ದರು.