ಬಡ ಜಂಗಮರ ಅಭ್ಯುದಯಕ್ಕೆ ಜಂಗಮ ಸಹಕಾರಿಗಳು ಮುಂದಾಗಲಿ: ಡಾಕುಳಗಿ ಶ್ರೀಗಳು

ಬೀದರ:ಡಿ.26: ಜಿಲ್ಲೆಯಲ್ಲಿ ಇನ್ನು ಸಾಕಷ್ಟು ಜನ ಜಂಗಮರು ಬಡತನದ ರೇಖೆಯಲ್ಲಿ ಜೀವನ ಸಾಗಿಸುತ್ತಿರುವರು. ಇಲ್ಲಿಯ ವರೆಗೆ ನಮ್ಮ ಜಂಗಮರ ಜೀವನ ದತ್ತಿ ದಾನ ಸ್ವೀಕಾರಕ್ಕೆ ಸೀಮಿತವಾಗಿತ್ತು. ಆದರೆ, ಅವರ ಮಕ್ಕಳು ಎಲ್ಲ ಸಮಾಜದ ಪ್ರತಿಭೆಗಳು ಅರಳಿದ ಹಾಗೆ ಇವರು ಅರಳುತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮ ಪ್ರತಿಭೆಗಳು ಇತರೆ ಸಮಾಜಕ್ಕೆ ಮಾದರಿಯಾಗಬೇಕಾದಲ್ಲಿ ನಮ್ಮ ಸಹಕಾರಿಗಳು ಪ್ರತಿಭೆಗಳ ಕೈ ಹಿಡಿದು ಮೇಲೆತ್ತಿ ಪ್ರೋತ್ಸಾಹಿಸಬೇಕೆಂದು ಡಾಕುಳಗಿ ಹಿರೇಮಠದ ಪೂಜ್ಯ ಚನ್ನಬಸವಾನಂದ ಸ್ವಾಮಿಜಿ ನುಡಿದರು.

ಶುಕ್ರವಾರ ನಗರದ ದೀಪಕ ಚಿತ್ರಮಂದಿರ ಎದುರಿರುವ ಶ್ರೀ ರೇಣುಕ ಮಾಹೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತದ ನಾಲ್ಕನೇ ವಾರ್ಷಿಕ ಸಾಮಾನ್ಯ ಸಭೆಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.

ಅನಾದಿ ಕಾಲದಿಂದಲೂ ನಮ್ಮ ಸಮಾಜ ಎಲ್ಲ ಸಮಾಜಗಳಿಗೆ ಧರ್ಮ ಸಂಸ್ಕಾರ ನೀಡುತ್ತ ಬಂದಿದೆ. ಆದರೆ ಇತ್ತಿಚೀಗೆ ನಮ್ಮ ಯುವಜನರು ಬೇರೆ ಬೇರೆ ಉದ್ಯೋಗ ಆರಿಸಿಕೊಂಡು ನಮ್ಮ ಸನಾತನ ಸಂಪ್ರದಾಯ ಮರೆತಿದ್ದಾರೆ. ಇದು ದೂರವಾಗಬೇಕು. ಎಲ್ಲೆಡೆ ವೈದಿಕ ಪಾಠಶಾಲೆಗಳು ಪುನಃ ಪ್ರಾರಂಭಿಸಬೇಕೆಂದು ಸ್ವಾಮಿಜಿ ಕರೆ ಕೊಟ್ಟರು.

ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಮಹೇಶ್ವರ ಸ್ವಾಮಿ ಮಾತನಾಡಿ, ನಮ್ಮ ಸಂಘ ಕೇವಲ ಜಂಗಮರಿಗಾಗಿ ಮಾತ್ರ ಹುಟ್ಟು ಹಾಕಲಾಗಿದ್ದು, ಜಿಲ್ಲೆಯ ಎಲ್ಲ ಸ್ವಾಮಿ ಪರಿವಾರದವರು ಇದರ ಸದುಪಯೋಗ ಪಡೆದುಕೊಳ್ಳಬೇಕು, ಜಿಲ್ಲೆಯ ಎಲ್ಲ ಜಂಗಮ ಪರಿವಾರಗಳು ಸಂಘದÀ ಸದಸ್ಯತ್ವ ಪಡೆದುಕೊಂಡು ಇತರೆ ಸಮಾಜಗಳಿಗೆ ಸರಿ ಸಾಠಿಯಾಗಿ ನಿಲ್ಲಬೇಕಿದೆ ಎಂದರು.

ಇದೇ ವೇಳೆ ಅವರು ಸಂಘದ ವಾರ್ಷಿಕ ವರದಿ ಮಂಡಿಸಿ ವಿವರಣೆ ನೀಡುತ್ತ, 2019-2020ರಲ್ಲಿ ಸಂಘವು ಒಟ್ಟು 1,25.776 ನಿವ್ವಳ ಲಾಭ ಹೊಂದಿದ್ದು, ಒಟ್ಟು ವಹಿವಾಟು 4,36,22,932 ರು. ನಡೆಸಲಾಗಿದೆ. ಇಲ್ಲಿಯ ವರೆಗೆ ಒಟ್ಟು 414 ಶೇರುದಾರರಿದ್ದು, ಇನ್ನು ಹೆಚ್ಚಿನ ಶೇರುದಾರಾಗಲು ಜಂಗಮರು ಮುಂದೆ ಬರಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಶಿಕ್ಷಣ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶಿವಕುಮಾರ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಸೇವಾ ನಿವೃತ್ತರಾದ ಕಚೇರಿ ಅಧಿಕ್ಷಕ ರಾಜೇಂದ್ರ ಸ್ವಾಮಿ, ಸಿ.ಆರ್.ಪಿ.ಎಫ್ ನಿವೃತ್ತ ಯೋಧ ಬಸವಯ್ಯ ಸ್ವಾಮಿ ಹಾಗೂ ಭೂಸೇನೆಯಲ್ಲಿ ನಿವೃತ್ತರಾದ ಶರಣಯ್ಯ ಮಠಪತಿ ಇವರನ್ನು ಸಂಘದಿಂದ ಆತ್ಮಿಯವಾಗಿ ಸನ್ಮಾನಿಸಲಾಯಿತು. ಹಾಗೇ ಈ ವರ್ಷ ಪಿ.ಹೆಚ್.ಡಿ ಪದವಿ ಪಡೆದ ಡಾ.ಶರಣಯ್ಯ ಹಿರೇಮಠ ಅವರನ್ನು ಸಹ ಗೌರವಿಸಲಾಯಿತು.

ಇದೇ ವೇಳೆ ಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕು.ಭವಾನಿ ತಂದೆ ವಿರುಪಾಕ್ಷಯ್ಯ ಸ್ವಾಮಿ, ಕು.ಭಕ್ತಿ ತಂದೆ ರಾಚೋಟಯ್ಯ ಸ್ವಾಮಿ, ಕು.ಜ್ಞಾನೇಶ್ವರಿ ತಂದೆ ಸಂತೋಷ ಸ್ವಾಮಿ ಜ್ಯಾಂತೆ, ಕು.ಸಂಜನಾ ತಂದೆ ಮಹೇಂದ್ರ ಸ್ವಾಮಿ, ಕು.ಆಶ್ವನಿ ತಂದೆ ಕಾರ್ತಿಕ ಸ್ವಾಮಿ, ಕು.ಸಂಜನಾ ತಂದೆ ಮಹಾದೇವ ಸ್ವಾಮಿ, ಕು.ಭಾಗ್ಯಶ್ರೀ ತಂದೆ ವಿಶ್ವನಾಥ ಸ್ವಾಮಿ, ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಶಿವಪ್ರಸಾದ ತಂದೆ ಗುಂಡಯ್ಯ ಸ್ವಾಮಿ, ಕಾರ್ತಿಕ ತಂದೆ ಸೂರ್ಯಕಾಂತ ಸ್ವಾಮಿ, ಕು. ಸುವರ್ಣಾ ತಂದೆ ಶಾಂತಯ್ಯ ಸ್ವಾಮಿ ಹಾಗೂ ನಿತೆಶ ತಂದೆ ನೀಲಕಂಠ ಸ್ವಾಮಿ ಮಾಮುಡಗೆ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಸಾಲ ಪಡೆದು ಸರಿಯಾದ ಸಮಯಕ್ಕೆ ಹಣ ಸಂದಾಯ ಮಾಡಿದ ವ್ಯಾಪಾರಿಗಳು ಹಾಗೂ ಕಾಲ ಕಾಲಕ್ಕೆ ಪಿಗ್ನಿ ಜಮೆ ಮಾಡಿದ ಉದ್ಯಮಿಗಳನ್ನು ಇದೇ ವೇಳೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ಸಂಘದ ನಿರ್ದೇಶಕರಾದ ಸಂಗಮೇಶ ಮಠಪತಿ, ಡಾ.ಪ್ರಭುಲಿಂಗ ಸ್ವಾಮಿ, ರಾಜಕುಮಾರ ಸ್ವಾಮಿ, ಜ್ಯೋತಿ ಜೈಶಂಕರ ಸ್ವಾಮಿ, ಶರಣಮ್ಮ ಬಸವರಾಜ ಸ್ವಾಮಿ, ಸಂತೋಷ ಸ್ವಾಮಿ, ಶಿವಕುಮಾರ ಹಿರೇಮಠ, ಡಾ.ಬಸವರಾಜ ಸ್ವಾಮಿ, ಸಂತೋಷ ಸ್ವಾಮಿ ಜ್ಯಾಂತೆ, ಸುರೇಶ ಸ್ವಾಮಿ, ಸಂಘದÀ ಮುಖ್ಯ ಕಾರ್ಯನಿರ್ವಾಹಕಿ ಜ್ಯೋತಿ ಶ್ರೀಕಾಂತ ಸ್ವಾಮಿ ಹಾಗೂ ಇತರರು ವೇದಿಕೆಯಲ್ಲಿದ್ದರು.

ಆರಂಭದಲ್ಲಿ ಸಂಘದ ನಿರ್ದೇಶಕರಾದ ಮರುಳಾರಾಧ್ಯ ಸ್ವಾಮಿ ಸ್ವಾಗತಿಸಿ ವಂದನೆ ಸಲ್ಲಿಸಿದರು. ಡಾ.ಶರಣಯ್ಯ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ರೇಖಾ ಸಂತೋó ಶಿಲವಂತ, ಭಾಗ್ಯಶ್ರೀ ರೇವಣಸಿದ್ದಯ್ಯ ಸ್ವಾಮಿ, ಆಕಾಶ ಸ್ವಾಮಿ, ಮಲ್ಲಿಕಾರ್ಜುನ್ ಸ್ವಾಮಿ, ರೇವಣಸಿದ್ದಯ್ಯ ಸ್ವಾಮಿ ಸಭೆಯಲ್ಲಿ ಹಾಜರಿದ್ದರು.