ಬಡ-ಕೂಲಿ ಕಾರ್ಮಿಕರಿಗೆ ೧೦೦ ದಿನ ಉದ್ಯೋಗ ನೀಡಲು ಒತ್ತಾಯ

ಸಿರವಾರ.ಜೂ.೦೨-ಬಡ ಕೂಲಿ ಕಾರ್ಮಿಕರಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ೧೦೦ ದಿನ ಉದ್ಯೋಗ ಒದಗಿಸುವಂತೆ ಮತ್ತು ಕಾರ್ಮಿಕರಿಗೆ ಉದ್ಯೋಗ ಒದಗಿಸುವಂತೆ ಒತ್ತಾಯಿಸಿ ಎಸ್.ಎಫ್. ಐ ಸಂಘಟನೆಯಿಂದ ಚಾಗಭಾವಿ ಗ್ರಾ.ಪಂ ಪಿಡಿಓಗೆ ಮನವಿ ಪತ್ರವನ್ನು ನೀಡುವ ಮೂಲಕ ಒತ್ತಾಯಿಸಿದರು. ಕೋರೊನ ಸಾಂಕ್ರಾಮಿಕ ರೋಗದ ಹಾವಳಿಯಿಂದ ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರ ಜೀವನ ತುಂಬಾ ಶೋಚನೀಯವಾಗಿದ್ದು ಜನರು ತಮ್ಮ ಜೀವನ ಸಾಗಿಸಲು ತುಂಬಾ ಅನಾನುಕೂಲವಾಗಿದ್ದು ಒಂದು ಒಪ್ಪತ್ತಿನ ಊಟಕ್ಕಾಗಿ ಪರದಾಡುವವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ..
ಆದರಿಂದ ತಾವುಗಳು ಬಡ-ಕೂಲಿ ಕಾರ್ಮಿಕರ ಜೀವನವನ್ನು ಅರ್ಥ ಮಾಡಿಕೊಂಡು ಬಡ – ಕೂಲಿ ಕಾರ್ಮಿಕರಿಗೆ ಓಖಇಉಂ ಯೋಜನೆ ಅಡಿಯಲ್ಲಿ ೧೦೦ ದಿನದ ಉದ್ಯೋಗ ವನ್ನು ನೀಡುವುದರ ಜೊತೆಗೆ ಉದ್ಯೋಗ ಚೀಟಿ (ರಿob ಅoಡಿಜ) ಇಲ್ಲದ ಕಾರ್ಮಿಕರಿಗೆ ಹೊಸದಾಗಿ ಮತ್ತು ಸೇರ್ಪಡೆ ಮಾಡಿಕೊಟ್ಟು ಬಡ-ಕೂಲಿ ಕಾರ್ಮಿಕರಿಗೆ ಜೀವನ ಸಾಗಿಸಲು ಅನುಕೂಲ ಮಾಡಿ ಕೊಡ ಬೇಕು.
ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದೆ ಆದರೆ ಬಡ ಕೂಲಿ ಕಾರ್ಮಿಕರ ಜೋತೆ ಸೇರಿ ಪಂಚಾಯತ್ ಮುತ್ತಿಗೆ ಹಾಕಿ ಉಗ್ರವಾದ ಹೋರಾಟವನ್ನು ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಚಾಗಭಾವಿ ಗ್ರಾ.ಪಂ ಪಿಡಿಓ ಮೋಹಿನುದ್ದೀನ್, SಈI ಸಿರವಾರ ತಾಲ್ಲೂಕು ಅಧ್ಯಕ್ಷ ಚಿದಾನಂದ ಕರಿಗೂಳಿ .ಗ್ರಾ.ಪಂ ಸದಸ್ಯ ಮಲ್ಲಯ್ಯ ಸ್ವಾಮಿ , ಬಸವರಾಜ್ , ಶಿವರಾಜಪ್ಪ ಮಾಲಿ ಪಾಟೀಲ. ಬಸವರಾಜ ಗೌಡ ಅರೋಲಿ.ಕಾರ್ಮಿಕ ಹುಸೇನಪ್ಪ , ರಮೇಶ , ಹುಲಿರಾಜ , ಶರಣಬಸವ , ಮುಂತಾದವರು ಉಪಸ್ಥಿತಿತರಿದ್ದರು.