ಬಡ ಕುಟುಂಬಗಳ ಮಹಿಳೆಯರಿಗೆ ವಾರ್ಷಿಕ ೧ ಲಕ್ಷ-ಪರ್ವತರೆಡ್ಡಿ

ಸಂಜೆವಾಣಿ ವಾರ್ತೆ
ಮಾನ್ವಿ.ಮೇ.೦೨- ತಾಲೂಕಿನ ಸಂಗಾಪೂರು ಗ್ರಾಮದಲ್ಲಿ ಕಾಂಗ್ರೇಸ್ ಪಕ್ಷದ ಲೋಕಸಭಾ ಕ್ಷೇತ್ರದ ಅಭ್ಯಾರ್ಥಿ ಜಿ.ಕುಮಾರನಾಯಕ ಪರ ಗ್ರಾಮದ ಕಾಂಗ್ರೇಸ್ ಮುಖಂಡರಾದ ಪರ್ವತರೆಡ್ಡಿ ಮನೆ ಮನೆಗೆ ಕಾಂಗ್ರೇಸ್ ಪಕ್ಷದ ಗ್ಯಾರಂಟಿ ಕಾರ್ಡುಗಳನ್ನು ವಿತರಿಸಿ ಮಾತನಾಡಿ ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ಬಡ ಕುಟುಂಬಗಳ ಮಹಿಳೆಯರಿಗೆ ವಾರ್ಷಿಕ ೧ ಲಕ್ಷ ರೂ. ಹಾಗೂ ವಿದ್ಯಾರ್ಥಿಗಳಿಗೆ, ರೈತರಿಗೆ ಉತ್ತಮವಾದ ಬದುಕನ್ನು ನಡೆಸಲು ಅಗತ್ಯವಾದ ಯೋಜನೆಗಳನ್ನು ಜಾರಿ ಮಾಡಲಾಗುವುದು ಕಾಂಗ್ರೇಸ್ ಪಕ್ಷ ನುಡಿದಂತೆ ನಡೆಯುವ ಪಕ್ಷವಾಗಿದ್ದು ೫ ಪ್ರಮುಖ ಗ್ಯಾರಂಟಿಗಳು ಸೇರಿ ೨೫ ಯೋಜನೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮದ ಕಾಂಗ್ರೇಸ್ ಪಕ್ಷದ ಮುಖಂಡರಾದ ಶಿವರಾಜಗೌಡ, ಮಹಾದೇವಪ್ಪಗೌಡ ಮೇಟಿ, ಹಿರೇಗೌಡ್ರು ಹನುಮಂತರಾಯ್ಯಗೌಡ, ಮಲ್ಲಿಕಾರ್ಜುನಗೌಡ ಪೋಲಿಸ್ ಪಾಟೀಲ್, ದಿಡ್ಡಿ ನರಸಯ್ಯ ನಾಯಕ್, ಕಾಶಿಮ್ಮಪ್ಪ, ಖಿ.ನಾಗರಾಜನಾಯಕ್, ಪರಶುರಾಮ್, ಬಸವರಾಜನಾಯಕ್, ಗಣೇಶ ಸಂಗಾಪೂರು ಸೇರಿದಂತೆ ಇನ್ನಿತರರು ಇದ್ದರು.