ಬಡ ಕುಟುಂಬಗಳಿಗೆ ಸಾಮೂಹಿಕ ವಿವಾಹ ಸಹಕಾರಿ:ಶಾಸಕ ಕಾಶಪ್ಪನವರ

ಹುನಗುಂದ:ಸೆ.10:ಸರಳ ಹಾಗೂ ಸಾಮೂಹಿಕ ವಿವಾಹಗಳು ಬಡ ಕುಟುಂಬ ಗಳಿಗೆ ಸಹಕಾರಿಯಾಗಿವೆ. ಜತೆಗೆ ಸಾಮೂಹಿಕ ವಿವಾಹ ದಿಂದ ದುಂದು ವೆಚ್ಚಕ್ಕೂ ಕಡಿವಾಣ ಹಾಕಬಹುದು ಎಂ ದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದ ಸಂಗಮೇಶ್ವರ ಜಾತ್ರಾ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಇಷ್ಟಲಿಂಗದೀಕ್ಷೆ ಅಯ್ಯಾಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂತನ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು ವರರಿಗೆ ಆರತಿಗೊಬ್ಬಳು ಮಗಳು, ಕೀರ್ತಿಗೊಬ್ಬ ಮಗ ಎಂಬಂತೆ ಒಂದು ಬೇಕು ಎರಡು ಸಾಕು ಎಂದು ನೂತನ ವಧು ವರರಿಗೆ ಕಿವಿಮಾತು ಹೇಳಿದರು.
ಮುಂದೆ ಹುಟ್ಟುವ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಒಳ್ಳೆಯ ಭವಿಷ್ಯ ನಿರ್ಮಾಣ ಮಾಡಿ ಎಂದು ಸಲಹೆ ನೀಡಿದರು. ನೂತನ ದಾಂಪತ್ಯಕ್ಕೆ ಕಾಲಿಟ್ಟ ವಧು-ವರರು ಸುಖಕರವಾದ ಜೀವನವನು ನಡೆಸಲಿ ಹರಿಸಿದರು. ಸಂಗಮೇಶ್ವರ ದೇವಸ್ಥಾನದ ಕಮೀಟಿಯಿಂದಕ್ 5 ಕೋಟಿ ವೆಚ್ಚದ ಭವನದ ಕಾಮಗಾರಿ ಕೆಲಸ ನಡೆದಿದು ಇನ್ನೂ ಭವನದ ಸಂಪೂರ್ಣ ಕೆಲಸ ಮುಗಿಸಿ ಉದ್ಘಾಟಿಸುವ ಜವಾಬ್ದಾರಿಯನ್ನು ಹೊರುತ್ತೇನೆ ಎಂದು ಭರವಸೆಯನ್ನು ನೀಡಿದರು.
ಹಡಗಲಿ-ನಿಡಗುಂದಿಯರುದ್ರಮುನಿಶಿವಾಚಾರ್ಯ ಮಹಾಸ್ವಾಮಿಗಳು, ಚಳಗೇರಿಯ ವೀರಸಂಗಮೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಆರ್ಶಿವಚನ ನೀಡಿದರು. ಮಹಾಂತಯ್ಯ ಗಚ್ಚಿನಮಠ ಸಾನ್ನಿಧ್ಯ ವಹಿಸಿದ್ದರು. ಸಂಗಮೇಶ್ವರ ದೇವಸ್ಥಾನ ಜೀರ್ಣೋದ್ದಾರ ನಾರಾಯಣ ಕುರಕುಂಟಿ ವಂದಿಸಿದರು. ಅಧ್ಯಕ್ಷ ಶೇಖರಪ್ಪ ಬಾದವಾಡಗಿ, ವಿ.ಮ.ಬ್ಯಾಂಕ್ ಅಧ್ಯಕ್ಷ ರವಿ ಹುಚನೂರ, ಪಿಕೆಪಿಎಸ್ ಅಧ್ಯಕ್ಷ ದೇವು ಡಂಬಳ, ವಿ.ಮ.ಬ್ಯಾಂಕ್ ನಿರ್ದೇಶಕ, ಮಹಾಂತೇಶ ಅವಾರಿ,ಗೋಡಿ ಗುರಣ್ಣ ಮಾತನಾಡಿದರು.
ವಿ.ಮ.ಬ್ಯಾಂಕ ನಿರ್ದೇಶಕ ನೀಲಪ್ಪ, ತಪೇರಿ, ರಾಜಕುಮಾರ ಬಾದವಾಡಗಿ, ಶಿವಾನಂದ ಕಂಠಿ, ಅಪ್ಪು ಜಡಿಮಠ, ಪಿಎಸ್‍ಐ ಚನ್ನಯ್ಯ ದೇವೂರ, ಪ್ರಧಾನ ಕಾರ್ಯದರ್ಶಿ ಅರುಣೋದಯ. ದುದ್ದಿ ನಿರೂಪಿಸಿ
11 ಮಕ್ಕಳು ಇಷ್ಟಲಿಂಗ ದೀಕ್ಷೆ (ಅಯ್ಯಾಚಾರ) ಪಡೆದರು. 7 ಜೋಡಿಗಳು ನೂತನ ದಾಂಪತ್ಯ ಜೀವನಕ್ಕೆ
ಕಾಲಿಟ್ಟರು.