ಬಡ ಕಿಡ್ನಿರೋಗಿಗಳಿಗೆ ರಾಖಿ ಕಾಣಿಕೆ ಹಣ

ಕಲಬುರಗಿ,ಸ 1: ನಗರದ ಟೀಮ್ ಯಜ್ಞ ತಂಡದವರು ರಕ್ಷಾಬಂಧನ ಹಬ್ಬವನ್ನು ಕಿಡ್ನಿ ಡಯಾಲಿಸಿಸ್ ಬಡರೋಗಿಗಳ ಜೊತೆ ಆಚರಿಸಿ ಅವರಿಗೆ ರಾಖಿ ಕಟ್ಟಿದರು. ಸಮಸ್ತ ಟೀಮಿನ ಸದಸ್ಯರೆಲ್ಲರೂ ಸೇರಿ ಆರತಿಗೆ ನೀಡಿದ ರಾಖಿ ಕಾಣಿಕೆಯ ದುಡ್ಡನ್ನು ಅದೇ ಬಡ ಕಿಡ್ನಿ ರೋಗಿಗಳಿಗೆ ಸಮರ್ಪಿಸಿದರು
ಯಜ್ಞ ತಂಡದ ಮುಖ್ಯಸ್ಥೆ ಮಾಲಾ ದಣ್ಣೂರ ಮತ್ತು ತಂಡದವರು ನಗರದ ಪೂರ್ಣಿಮಾ ಪಿಎಂ ಬಿರಾದಾರ್ ಕಿಡ್ನಿ ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿ ಬಡ ರೋಗಿಗಳಿಗೆ ಸಾಂತ್ವನದ ಜೊತೆಗೆ ಸಹಾಯ ಹಸ್ತ ತೋರುವ ಅತಿ ಅವಶ್ಯಕತೆ ಇದೆ ಎಂದರು. ಈ ಸಂದರ್ಭದಲ್ಲಿ ಶರಣು ಪಪ್ಪ, ಶರಣು ಮತ್ತಿಮೂಡ್ ,ಶಿವರಾಜ್ ಖೂಬಾ, ಶರಣು ಬಾಗೋಡಿ, ಜಗದೀಶ್ ಗಾಜರೆ, ಗುರುಭೀಮ್ ಬೂದಿ, ಲಕ್ಷ್ಮಿಕಾಂತ್ ಜೋಳದ, ಅಪ್ಪು ಗುಬ್ಯಾಡ್, ವೀರೇಶ್ ಗೌಡ, ಸ್ವಪ್ನಿಲ್ ಬನಾಳೆ, ರಫೀಕ್, ವಿನೋದ್ ಕುಲಕರ್ಣಿ, ನಾಗರಾಜ್ ಅಲ್ಲಂ, ಜ್ಯೋತಿ ಕೋಟನೂರ್, ಉಮೇಶ್ ಕೋಟನೂರ್, ವಿಜಯ್ ಪುರಾಣಿಕ್, ರಾಜು ನಾಗೂರ್, ರಾಮಚಂದ್ರ, ಉತ್ತಮ್, ಸೂರ್ಯ ಲೋಕೇಶ್, ಐಶ್ವರ್ಯಾ , ಲಕ್ಷ್ಮಿ, ರೇಣುಕಾ, ಕಾರ್ತಿಕ್ ದಣ್ಣೂರ್, ಗಗನ್ ಪಪ್ಪಾ, ಶ್ರೇಯಾ ಕೊಟನೂರ್, ಸದಾಶಿವ,ಕಿರಣ್, ವೀರೇಶ್, ರಾಜು ಹಾಗೂ ಇತರರಿದ್ದರು.