ಬಡ ಕಲಾವಿದರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ

ಬೀದರ:ಜೂ.11: ಅಜೀಂ ಪ್ರೇಮಜಿ ಫೌಂಡೇಷನ್ ಹಾಗೂ ಅರ್ಬೀಟ್ ಸಂಸ್ಥೆಯವರ ಸಹಯೋಗದೊಂದಿಗೆ ನಿನ್ನೆ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗ ಮಂದಿರದ ಆವರಣದಲ್ಲಿ ಸಂಕಷ್ಟದಲ್ಲಿರುವ ಜಿಲ್ಲೆಯ ಬಡ ಕಲಾವಿದರಿಗೆ ಆಹಾರ ಧಾನ್ಯದ ಕಿಟ್ ವಿತರಣೆ ಕಾರ್ಯಕ್ರಮವನ್ನು ಸೆಂಟ್ ಜೋಸೆಫ್ ಚರ್ಚನ ಫಾದರ್ ವಿಲ್ಸನ್ ಅವರು ಹಲಗೆ ಬಾರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಮಾತನಾಡುತ್ತ, ಅಜೀಮ ಪ್ರೇಮಜಿ ಫೌಂಡೇಷನ್‍ದವರು ಬೀದರ ಮತ್ತು ಕಲಬುರಗಿ ಜಿಲ್ಲೆಯ ಒಟ್ಟು 17,500 ಬಡ ಕಲಾವಿದರಿಗೆ ಆಹಾರ ಧಾನ್ಯದ ಕಿಟ್ ವಿತರಿಸುವ ಕಾರ್ಯ ಅರ್ಬೀಟ್ ಸಂಸ್ಥೆಯ ಜೊತೆಗೆ ಜಿಲ್ಲೆಯ 47 ಎನ್.ಜಿ.ಓ.ಗಳು ಕೈ ಜೋಡಿಸಿದ್ದರಿಂದ ಜಿಲ್ಲೆಯ ಕಲಾವಿದರಿಗೆ ಆಹಾರ ಧಾನ್ಯದ ಕಿಟ್ ವಿತರಣೆ ಹಮ್ಮಿಕೊಂಡಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಅಜೀಂ ಪ್ರೇಮಜಿ ಫೌಂಡೇಷನ್‍ನ ಜಿಲ್ಲಾ ಮೇಲ್ವಿಚಾರಕ ಅನೀಲಕುಮಾರ ಮಾತನಾಡುತ್ತ, ಲಾಕ್‍ಡೌನ್ ಸಂದರ್ಭದಲ್ಲಿ ತೀವ್ರ ಸಂಕಷ್ಟದಲ್ಲಿರುವ ಬಡ ಕಲಾವಿದರಿಗೆ ಆಹಾರ ಧಾನ್ಯದ ಕಿಟ್ ವಿತರಣೆಗೆ ಅಜೀಮ ಪ್ರೇಮಜಿ ಫೌಂಡೇಷನ್ ಯೋಜನೆ ರೂಪಿಸಿತ್ತು. ಈ ಯೋಜನೆಗೆ ಅರ್ಬೀಟ್ ಸಂಸ್ಥೆಯ ಜತೆಗೆ ಜಿಲ್ಲೆಯ 47 ಎನ್.ಜಿ.ಓ.ಗಳು ಕೈಜೋಡಿಸಿದ್ದರಿಂದ ಅಪಿಎಫ್‍ಗೆ ಆನೆಬಲ ಬಂದಂತಾಗಿದೆ ಎಂದರು.
ಜನಪದ ಕಲಾವಿದರ ಬಳಗದ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಸೋನಾರೆ, ಕರ್ನಾಟಕ ಜಾನಪದ ಪರಿಷತ್ ತಾಲೂಕಾಧ್ಯಕ್ಷ ಎಸ್.ಬಿ. ಕುಚಬಾಳ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ, \ತಹಸೀಲ್ದಾರ ಗಂಗಾದೇವಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮಪ್ಪ ಶಿಂಧೆ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷ ಎಂ.ಎಸ್. ಮನೋಹರ, ಶಂಭುಲಿಂಗ ವಾಲ್ದೊಡ್ಡಿ, ಯೇಸುದಾಸ ಅಲಿಯಂಬುರೆ, ಸುನೀಲ ಕಡ್ಡೆ, ಎಂ.ಪಿ. ಮುದಾಳೆ, ಸುನೀಲ ಭಾವಿಕಟ್ಟಿ, ಶ್ರೀಮಂತ ಸಪಾಟೆ, ರಮೇಶ ದೊಡ್ಡೆ, ಶೇಷಪ್ಪ ಚಿಟ್ಟಾ, ಚಿನ್ನಮ್ಮಾ ಸಂತಪುರ, ಶಂಕರ ಚೊಂಡಿ ಸೇರಿದಂತೆ ಅನೇಕ ಕಲಾವಿದರು ಹಾಗೂ ಇಲಾಖೆಯ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಇದ್ದರು.