ಬಡ್ತಿ ವಿಚಾರದಲ್ಲಿ ಇರುವ ಅಡೆತಡೆ ಸರಿಪಡಿಸಲು ಮನವಿ

ಚಿತ್ರದುರ್ಗ, ಏ.2: ಪೊಲೀಸ್ ಕಾನ್ ಸ್ಟೇಬಲ್ ಗಳ ಬಡ್ತಿ ವಿಚಾರದಲ್ಲಿ ಇರುವ ಅಡೆತಡೆಗಳನ್ನು ಸರಿಪಡಿಸಲು ಸರ್ಕಾರದ ಮೇಲೆ ಒತ್ತಡ ತರುವ ಕೆಲಸ ಮಾಡಬೇಕು ಎಂದು ನಿವೃತ್ತ ಆರಕ್ಷಕ ಉಪ ನಿರೀಕ್ಷಕ ಎಸ್.ಆರ್.ಶಿವಮೂರ್ತಿ ಇಲಾಖೆಯ ಮೇಲಾಧಿಕಾರಿಗಳಲ್ಲಿ ಮನವಿ ಮಾಡಿದರು.ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ಕಲ್ಯಾಣ ಮತ್ತು ಧ್ವಜ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಪೊಲೀಸರು ನಿರಂತರ ಜನಸಂಪರ್ಕದಲ್ಲಿ ಇರಬೇಕು. ಅವರೊಂದಿಗೆ ಉತ್ತಮವಾಗಿ ನಡೆದುಕೊಳ್ಳಬೇಕು. ಯಾವುದೇ ರೀತಿಯ ಅಪರಾಧ ಪ್ರಕರಣಗಳು ನಡೆದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಬೇಕು. ಆಗ ಜನರಿಗೆ ಪೊಲೀಸರ ಬಗ್ಗೆ ನಂಬಿಕೆ, ವಿಶ್ವಾಸ ಮೂಡುತ್ತದೆ ಎಂದು ಸಲಹೆ ನೀಡಿದರು.ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಬೇಕು. ಈ ಮೂಲಕ ಪೊಲೀಸರನ್ನು ಒತ್ತಡ ಮುಕ್ತರನ್ನಾಗಿ ಮಾಡಬೇಕು. ಪೊಲೀಸರು ಬಿಡುವಿನ ವೇಳೆ ತಮ್ಮ ಕುಟುಂಬದ ಕಲ್ಯಾಣಕ್ಕೆ ಗಮನ ನೀಡಲು ಅವಕಾಶ ಲಭಿಸುವಂತೆ ಮಾಡಬೇಕು ಎಂದು ಮನವಿ ಮಾಡಿದ ಅವರು, ಹೆಚ್.ಸಿ.ಯಿಂದ ಎ.ಎಸ್.ಐ. ಬಡ್ತಿಯನ್ನು ಹೊಂದಿದಾಗ ರಜೆ, ಗಳಿಕೆ ರಜೆಯನ್ನು ರದ್ದು ಮಾಡಲಾಗಿದೆ ಇದರಿಂದ ತೊಂದರೆಯಾಗಲಿದ್ದು, ಬಡ್ತಿ ಸಿಗದಿದ್ದರೆ ಚೆನ್ನಾಗಿತ್ತು ಎಂದು ಹೇಳಲಾಗುತ್ತಿದೆ. ಆರ್ಥಿಕವಾಗಿಯೂ ಸಹಾ ಕಡಿಮೆಯಾಗುತ್ತಿದೆ ಇದರ ಬಗ್ಗೆ ಸರ್ಕಾದ ಗಮನ ಸೆಳೆಯುಬೇಕು ಎಂದು ಹೇಳಿದರು.ಕೊರೋನಾ ಸಮಯದಲ್ಲಿ ಜಿಲ್ಲಾ ಪೋಲಿಸ್ ಉತ್ತಮವಾದ ಕೆಲಸವನ್ನು ಮಾಡಿದೆ. ಸರ್ಕಾರ ಲಾಕ್‌ಡೌನ್ ಘೋಷಿಸಿದಾಗ ಜಿಲ್ಲೆಯಲ್ಲಿ ಬೇರೆ ರಾಜ್ಯದ ಕಾರ್ಮಿಕರು ಇಲ್ಲಿ ಬಂದಿದ್ದರು ಅವರನ್ನು ಅವರ ರಾಜ್ಯಕ್ಕೆ ಕಳುಹಿಸುವಲ್ಲಿ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ. ಇದೇ ರೀತಿ ಪೋಲಿಸ್ ಸಿಬ್ಬಂದಿಗೆ ಆರೋಗ್ಯದ ಬಗ್ಗೆಯೂ ಸಹಾ ಕಾಳಜಿಯನ್ನು ವಹಿಸುವುದರ ಮೂಲಕ ಜನತೆಯಲ್ಲಿಯೂ ಸಹಾ ಜಾಗೃತಿಯನ್ನು ಮೂಡಿಸಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿಗಳಾದ ಶ್ರೀಮತಿ ರಾಧಿಕಾರವರ ಕಾರ್ಯವನ್ನು ಶ್ಲಾಘಿಸಿದರು.ಜಿಲ್ಲಾಧಿಕಾರಿ ಶ್ರೀಮತಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ರಕ್ಷಣಾಧಿಕಾರಿ ಶ್ರೀಮತಿ ರಾಧಿಕಾ, ಹೆಚ್ಚುವರಿ ರಕ್ಷಣಾಧಿಕಾರಿ ಮಹಾಲಿಂಗ ನಂದಗಾವಿ, ಐಮಂಗಲ ಪೋಲಿಸ್ ಪ್ರಾಂಶುಪಾಲರಾದ ಪಾಪಣ್ಣ ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ ಸಿಬ್ಬಂದಿ, ಅಧಿಕಾರಿಗಳನ್ನು ಸನ್ಮಾನಿಸಲಾಯಿತು. Attachments area