
ಹಗರಿಬೊಮ್ಮನಹಳ್ಳಿ:ಜು.17 ಕರ್ನಾಟಕ ರಾಜ್ಯ ಸರ್ಕಾರಿ ಪ್ರೌಢಶಾಲೆಗಳ ಬಡ್ತಿ ಮುಖ್ಯೋಪಾಧ್ಯಾಯರ ಸಂಘದ ತಾಲೂಕು ಅಧ್ಯಕ್ಷರಾಗಿ ಯು.ಕೃಷ್ಣನಾಯ್ಕ್ರವರು ಅವಿರೋಧವಾಗಿ ಆಯ್ಕೆಯಾದರು.ಪಟ್ಟಣದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪ.ಪೂ.ಕಾಲೇಜ್ನಲ್ಲಿ ಶನಿವಾರ ಜರುಗಿದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು. ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ಅಕ್ಕಮಹಾದೇವಿ ಅಧ್ಯಕ್ಷತೆಯಲ್ಲಿ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಾಗೇಂದ್ರಪ್ಪ ಮೇವುಂಡಿ (ಕಾರ್ಯದರ್ಶಿ), ಲಲಿತಮ್ಮ (ಉಪಾಧ್ಯಕ್ಷೆ), ಕೊಟ್ರೇಶಪ್ಪ, (ಸಂಘಟನಾ ಕಾರ್ಯದರ್ಶಿ), ಶಿವಯೋಗಿ (ಖಜಾಂಚಿ) ಇವರು ಆಯ್ಕೆಯಾದರು.ಈ ವೇಳೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿ.ಮಲ್ಲಪ್ಪ ಹಾಗೂ ಹುಸೇನ್ಪೀರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ ಹಾಗೂ ತಾಲೂಕಿನ ಎಲ್ಲಾ ಸರ್ಕಾರಿ ಪ್ರೌಢಶಾಲೆಯ ಬಡ್ತಿ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. Attachments area |