ಬಡ್ಡಿರಹಿತ ಹೊಸ ಸಾಲ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಡಾ.ಅವಿನಾಶ

ಚಿಂಚೋಳಿ,ನ.8- ತಾಲ್ಲೂಕಿನ ಐನಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಹಯೋಗದೋಂದಿಗೆ 2021-22ನೇ ಸಾಲಿನ ರೈತರಿಗೆ ಬಡ್ಡಿರಹಿತ ಹೊಸ ಸಾಲ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ಡಾ.ಅವಿನಾಶ ಜಾಧವರವರು ಉದ್ಘಾಟಿಸಿ ಮಾತನಾಡಿದ ಅವರು, ಚಿಂಚೋಳಿ ತಾಲೂಕಿನ ಉಪ ಚುನಾವಣೆ ಸಂದರ್ಭದಲ್ಲಿ ತಾವು ಮಾತುಕೊಟ್ಟಂತೆ ಸಕ್ಕರೆ ಕಾರ್ಖಾನೆ ಸ್ಥಾಪನೆ ಸ್ಥಾಪಿಸಲು ನಾನು ಮತ್ತು ನಮ್ಮ ತಂದೆ ಕಲ್ಬುರ್ಗಿ ಲೋಕಸಭಾ ಸದಸ್ಯರಾದ ಡಾ.ಉಮೇಶ ಜಾಧವರವರು ಬಹಳಷ್ಟು ಪ್ರಯತ್ನದ ಪಲವಾಗಿ ತಾಲೂಕಿನ ರೈತರಿಗೆ ಸಕ್ಕರೆ ಕಾರ್ಖಾನೆಯಿಂದ ಬಹಳಷ್ಟು ಅನುಕೂಲವಾಗಲಿದೆ ಎಂದರು.
ಈಗಾಗಲೇ ತಾಲೂಕಿನ ರೈತರು ಎಲ್ಲರೂ ತಮ್ಮ ತಮ್ಮ ಹೊಲಗಳಲ್ಲಿ ಕಬ್ಬುಗಳನ್ನು ಬೆಳೆಯ ಮೂಲಕ ರೈತರಿಗೆ ಹೆಚ್ಚಿನ ಲಾಭವಾಗಲಿದೆ ಗುದ್ದು ಮುಂಬರುವ ಚಿಂಚೋಳಿ ತಾಲೂಕಿನ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಮುಂಬರುವ ಅತಿಶೀಘ್ರದಲ್ಲೇ ಹೆಸರನ್ನು ಅಳಿಸಲು ಚಿಂಚೋಳಿ ತಾಲೂಕಿನ ಎಲ್ಲಾ ರೈತರು ತಾಲೂಕಿನಲ್ಲಿ ಕಬ್ಬು ಬೆಳೆದು ಒಳ್ಳೆಯ ಲಾಭವನ್ನು ಪಡೆದು ಇಲ್ಲಿರುವ ಡಿಸಿಸಿ ಬ್ಯಾಂಕಿನ ಸಾಲವನ್ನು ತೆಗೆದುಕೊಂಡುತಮ್ಮ ತಮ್ಮ ಹೊಲಗಳಲ್ಲಿ ಬೇಕಾದ ಅನುಕೂಲಗಳನ್ನು ಮಾಡಿಕೊಂಡು ಮುಂಬರುವ ದಿನಗಳಲ್ಲಿ ತಾವುಗಳು ಮತ್ತೆ ಬ್ಯಾಂಕಿಗೆ ವಾಪಸ್ ಹಣ ನೀಡಿದರೆ ಅದಕ್ಕಿಂತ ಹೆಚ್ಚು ಡಿಸಿಸಿ ಬ್ಯಾಂಕ್ ನೀಡಲಿದ್ದು ಅದಕ್ಕಾಗಿ ರೈತರು ತಮ್ಮ ಹೊಲ ಅಭಿವೃದ್ಧಿಗಾಗಿ ಹಣವನ್ನು ಖರ್ಚು ಮಾಡಬೇಕೆಂದು ಅವರು ರೈತರಿಗೆ ಕಿವಿ ಮಾತನ್ನು ಹೇಳಿದರು.
ಕೇಂದ್ರ ಸರ್ಕಾರದ ನರೇಂದ್ರ ಮೋದಿಯವರು ವರ್ಷದಲ್ಲಿ ರೈತರಿಗೆ ಆರು ಸಾವಿರ ರಾಜ್ಯ ಸರ್ಕಾರದಿಂದ ನಾಲ್ಕು ಸಾವಿರ ರೂಪಾಯಿ ನೇರವಾಗಿ ರೈತರ ಖಾತೆಗೆ ಜಮಾ ಮಾಡುತ್ತಿದ್ದಾರೆ. ನಾನು ಮತ್ತು ನಮ್ಮ ತಂದೆ ಸಂಸದ ಡಾ.ಉಮೇಶ ಜಾಧವರವರು ಸಕ್ಕರೆ ಕಾರ್ಖಾನೆ ನಿರ್ಮಿಸಲು ಬಹಳಷ್ಟು ಶ್ರಮಪಟ್ಟಿದ್ದೇವೆ ಕೊನೆಗೂ ಬಿಜಾಪುರದ ಶಾಸಕರಾದ ಬಸವಣ್ಣಗೌಡ ಪಾಟೀಲ ಯತ್ನಾಳರವರು ಖರೀದಿಸಿ ಸಕ್ಕರೆ ಕಾರ್ಖಾನೆ ಈ ತಿಂಗಳಿನಲ್ಲಿ ಗುದ್ದಲಿ ಪೂಜೆ ನೇರೆವೇರಿಸಲಿದ್ದಾರೆ.
ಜಾತಿಭೇಧ ಭಾವವಿಲ್ಲದೆ ಪಕ್ಷಾತೀತವಾಗಿ ತಾಲ್ಲೂಕಿನ ಅಭಿವೃದ್ಧಿಗೋಸ್ಕರ ಎಲ್ಲೋರು ಕೆಲಸ ಮಾಡೋಣ. ಮತ್ತು 21ನೇ ಸ್ಥಾನದಲ್ಲಿದ್ದ ಡಿಸಿಸಿ ಬ್ಯಾಂಕ್ ನ್ನು 10ನೇ ಸ್ಥಾನಕ್ಕೆ ತಂದಿದ್ದಾರೆ ಸೇಡಂ ಶಾಸಕ ತೇಲ್ಕೂರರವರು ಮತ್ತು ನಿಜವಾದ ಅನ್ನದಾತ ರೈತರೆ ದೇವರು ರೈತರ ಸಂತೋಪವೇ ದೇಶದ ಸಂತೋಷ ಎಂದು ಹೇಳಿದರು.
ಐನಾಪೂರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರೇವಪ್ಪ ಉಪ್ಪಿನ ಪ್ರಸ್ತಾವಿಕವಾಗಿ ಮಾತನಾಡಿದ ಅವರು ಕೃಷಿ ಪತ್ತಿನ ಸಹಕಾರ ಸಂಘವು ಬಸಂತಪೂರ ಹಾಗೂ ಐನಾಪೂರ ಗ್ರಾಪಂಗೆ ಒಳಪಡುತ್ತದೆ ಅದರೆ ನಮ್ಮಲ್ಲಿ 3300 ಸಂಘದ ಸದಸ್ಯರಿದ್ದು 1.80ಕೋಟಿ ರೂ.ಎಫ್.ಡಿ ಜಮಾವಿದೆ.33ಲಕ್ಷ ರೂ.ಉಳಿತಾಯವಾಗಿದೆ.7ಲಕ್ಷ ರೂ.ಹಾಗೂ 233 ಸ್ವಸಹಾಯ ಸಂಘಗಳಿವೆ.1.40ಲಕ್ಷ ಸಾಲ ನೀಡಿದ್ದೇವೆ.70ಲಕ್ಷ ಸಾಲ ವಿತರಿಸಿದ್ದೇವೆ.74ಲಕ್ಷ ಸಾಲ ಬಂಗಾರದ ಮೇಲೆ ಸಾಲ ನೀಡಿದ್ದೇವೆ.10ಲಕ್ಷ ಸ್ಯಾಲಾರಿ ಸಾಲ ಕೊಟ್ಟಿದ್ದೇವೆ.ರಾಷನ್,ರಸಗೊಬ್ಬರ, ಕ್ರೀಮಿಕೀಟನಾಷಕ ಜಾಷದಿ,ರೈತರಿಗೆ ನೀಡುತ್ತೇವೆ.
2020-21ನೇ ಸಾಲಿನಲ್ಲಿ ಒಂದೇ ವರ್ಷದಲ್ಲಿ ನಮ್ಮ ಸಹಕಾರ ಸಂಘದ ಬ್ಯಾಂಕ್ ನ್ನು 21 ಲಕ್ಷ.ರೂ.ಲಾಭದಲ್ಲಿದೆ. ಈಗಾಗಲೇ 221ರೈತರಿಗೆ 1.37ಕೋಟಿ ರೂ.ಬಡ್ಡಿರಹಿತ ಸಾಲ ವಿತರಿಸುತ್ತಿದ್ದೇವೆ.
ಎರಡನೇ ಹಂತದಲ್ಲಿ 359 ರೈತರಿಗೆ ಸಾಲ ಕೊಡುತ್ತೇವೆ.
ತಾಲ್ಲೂಕಿನ ಎಲ್ಲಾ ಸಂಘದ ಬ್ಯಾಂಕ್ ಗಳಿಗಿಂತ ಹೆಚ್ಚಿನ ಹಣ ಐನಾಪೂರ ಸೂಸೈಟಿಗೆ ಬಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ
ಕಲಬುರ್ಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ್ ಪಾಟೀಲ, ದಿವ್ಯ ಸಾನಿಧ್ಯ ಪೂಜ್ಯರಾದ ಪಂಚಕ್ಷರಿ ದೇವರು, ಚಿಂಚೋಳಿ ಎಪಿಎಂಸಿ ಅಧ್ಯಕ್ಷರಾದ ಅಶೋಕ ಪಡಶೇಟ್ಟಿ, ಐನಾಪೂರ್ ಮಾಜಿ ತಾಲೂಕ ಪಂಚಾಯತ ಸದಸ್ಯರಾದ ಪ್ರೇಮಸಿಂಗ್ ಜಾಧವ. ಈಶ್ವರ ನಾಯಕ. ವಿಠಲರೆಡ್ಡಿ, ಸತೀಶರೆಡ್ಡಿ, ಅಲ್ಲಂಪ್ರಭು ಪಾಟೀಲ್ ಹುಲಿ. ಮಲ್ಲಯ್ಯಶಾಸ್ತ್ರಿ, ಗೋಪಾಲರೆಡ್ಡಿ, ರಮೇಶ ಪಡಶೇಟ್ಟಿ, ವಿಮ್ಲಾಬಾಯಿ ಬನಸಿಲಾಲ, ಸಂಜುಕುಮಾರ, ಗೌರಿಶಂಕರ ಉಪ್ಪಿನ, ಗೇಮು, ನಾಗಪ್ಪ, ಮಾರುತಿ, ಮತ್ತು ಐನಾಪೂರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಹಾಗೂ ಐನಾಪೂರ್ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅನೇಕ ರೈತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.