ಬಡವರ ಸೇವೆಯಲ್ಲಿ ದೇವರನ್ನು ಕಾಣಿ:ನಾಗೇಶ ತಳಕೇರಿ

ಇಂಡಿ:ಜೂ.7:ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರ್.ಪಿ.ಆಯ್ ಬೆಳಗಾಂವ್ ವಿಭಾಗದ ಅಧ್ಯಕ್ಷ ನಾಗೇಶ ತಳಕೇರಿ ಉಪಾಧ್ಯಕ್ಷ ಸದ್ದಾಂ ಅರಬ ಇವರ 42ನೇ ಹುಟ್ಟು ಹಬ್ಬದ ಪ್ರಯುಕ್ತ ನಾಗೇಶ ತಳಕೇರಿ ಅಭಿಮಾನಿ ಬಳಗದವತಿಯಿಂದ ಸುಮಾರು 75 ಯುವಕರು ಸ್ವಯಂಪ್ರೇರಿತ ರಕ್ತಧಾನ ಶಿಬಿರ ನಡೆಸಿ ಬಡರೋಗಿಗಳಿಗೆ ಹಣ್ಣು ಹಂಪಲ ಹಾಗೂ ಬಾಣಂತಿಯರಿಗೆ ಕಿಟ್ಟ ವಿತರಣೆ ಮಾಡಿದರು.

ಈ ಸಂಧರ್ಬದಲ್ಲಿ ಆರ್.ಪಿ.ಆಯ್ ಅಧ್ಯಕ್ಷ ನಾಗೇಶ ತಳಕೇರಿ ಮಾತನಾಡಿ ಹುಟ್ಟು ಹಬ್ಬ ಆಚರಣೆ ಮಾಡುವ ನನ್ನ ಉದ್ದೇಶವಿಲ್ಲ ನಾನು ಕೂಡಾ ಅತ್ಯೆಂತ ಕಡು ಬಡತನದಲ್ಲಿ ಜನಿಸಿರುವೆ .ನನ್ನ ಅಭಿಮಾನಿಗಳ ಒತ್ತಾಯದ ಮೇಲೆ ಮಾಡಿದ್ದಾರೆ. ಹುಟ್ಟು ಹಬ್ಬ ಆಚರಣೆ ಹಾರ ತುರಾಯಿ ಬೇಡ ಎಂದರೂ ಅಭಿಮಾನಿಗಳ ಮನಸ್ಸು ನೋಯಿಸಬಾರದು ಎಂದು ಸ್ವೀಕರಿಸಿದ್ದೇನೆ. ಬಡತನದ ನೋವು ನನಗೆ ಗೊತ್ತು ಹೀಗಾಗಿ ಬುದ್ದ, ಬಸವ, ಅಂಬೇಡ್ಕರರ ಗುರು ಹಿರಿಯರ ಅರ್ಶೀವಾದಿಂದ ಸ್ವಲ್ಪಮಟ್ಟಿಗೆ ಆರ್ಥಿಕವಾಗಿ ಸಬಲನಾಗಿದ್ದೇನೆ. ಮನುಷ್ಯನ ಜೀವನದಲ್ಲಿ ಯಾವುದೂ ಶಾಶ್ವತ ಇರುವದಿಲ್ಲ ಇಂದು ಇರಬಹುದು ನಾಳೆ ಇರಲಿಕ್ಕಿಲ್ಲ ಇರುವ ದಿನಗಳಲ್ಲಿ ಜನಪರ, ಬಡವರ, ದೀನದುರ್ಬಲರ ಸೇವೆ ಮಾಡುವ ಸದಾಶೇಯ ನನ್ನದಾಗಿದ್ದು, ಈ ಹಿಂದೆ ಕೂಡಾ ಬಡವರು ಆಸ್ಪತ್ರೆ, ಮಧುವೆ ,ಮುಂಜಿವೆ ಎಂದು ತೊಂದರೆಯಲ್ಲಿ ಇದ್ದೇವೆ ಎಂದು ಕೇಳಿಕೊಂಡಾಗ ರಾಜಕೀಯ, ಅಧಿಕಾರ ಅಂತಸ್ತು ಇರದಿದ್ದರೂ ಫಲಾಪೇಕ್ಷೆ ಇರದೆ ಬಂದವರಿಗೆ ಇಲ್ಲ ಎಂದು ಬರಿಗೈಯಿಂದ ಕಳಿಸದೆ ಕೈಲಾದಮಟ್ಟಿಗೆ ಸಹಾಯ ಸಹಕಾರ ನೀಡಿರುವೆ. ಸಾರ್ವಜನಿಕ ಆಸ್ಪತ್ರೆ ಎಂದಾಕ್ಷಣ ಇಲ್ಲಿ ಬರುವ ಜನರು ಬಡವರು ನಿರ್ಗತಿ9ಕರು ಆದ್ದರಿಂದ ವೈದ್ಯರಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ ನಿಮ್ಮ ಸೇವೆ ಬಡವರಿಗಾಗಿ ಮೀಸಲಾಗಿಡಿ, ವೈದ್ಯ ನಾರಾಯನೋ ಹರಿ ಎನ್ನುವಂತೆ ನೀವು ದೇವರ ಸಮಾನ ಬಡವರ ಸೇವೆಯಲ್ಲಿ ದೇವರನ್ನು ಕಾಣಿ ನಿಮ್ಮ ಕುಟುಂಬಕ್ಕೆ ಭಗವಂತ ಒಳ್ಳೇದನ್ನು ಕರುಣಿಸುತ್ತಾನೆ ಎಂದು ಭಾವಾಪರವಶರಾಗಿ ಬಡವರ ಕಷ್ಟ ಕಷ್ಟ ಸ್ವತ ಅನುಭವಿಸಿದ ಅವರು ಕಣ್ಣಿರು ಸುರಿಸಿ ಮಾತನಾಡಿದರು.
ನಿಜಣ್ಣಾ ಕಾಳೆ, ನಾಗೇಶ ತಳಕೇರಿ ( ಶ್ರೀಕೃಷ್ಣ ಆರಾಧಕರು ) ಸಂತೋಷ ಪರಶೇನವರ್, ವಿಜಯಕುಮಾರ ಕೊಟ್ನಾಳ, ಸದ್ದಾಂ ಅರಬ, ಆರ್.ಪಿ ಆಯ್ ತಾಲೂಕಾ ಘಟಕ ಅಧ್ಯಕ್ಷ ಬಾಬು ಕಾಂಬಳೆ , ವೀರೂಪಾಕ್ಷಿ ಕಾಳೆ, ರಾಮಚಂದ್ರ ದೊಡಮನಿ ,ರಾಘು ಸಾಲೋಟಗಿ, ಲಕ್ಕಪ್ಪ ಲಚ್ಯಾಣ, ದುಂಡು ಬಿರಾದಾರ, ವಿಶಾಲ ಮೇಲಿನಮನಿ, ಗೌತಮ ಬನಸೋಡೆ, ಮಲಕ್ಕಣ್ಣಾ ತಳಕೇರಿ, ಪ್ರಶಾಂತ ಕಾಂಬಳೆ, ಶಿವು ಬುಯ್ಯಾರ, ಮಲಕ್ಕಣ್ಣಾ ತಳಕೇರಿ, ಶ್ರೀಮತಿ ರೇಖಾ ಸಿಂಗೆ ಸೇರಿದಂತೆ ಅನೇಕ ಅಭಿಮಾನಿಗಳು ಇದ್ದರು.
ಮುಖ್ಯ ವೈಧ್ಯಾಧಿಕಾರಿ ಡಾ. ಧಾರವಾಡಕರ್, ಡಾ. ವಿಫುಲ್‍ಕೊಳೇಕರ್, ಡಾ. ಅಮೀತ ಕೊಳೇಕರ್ ರಕ್ತಧಾನ ಶಿಬೀರ ಕಾರ್ಯಕ್ರದಲ್ಲಿ ರಕ್ತ ನೀಡುವದರಿಂದ ಅನುಕೂಲ ಹಾಗೂ ಪರಿಣಾಮ ಕುರಿತು ಜಾಗೃತಿ ಮೂಡಿಸಿದರು,