
ಇಂಡಿ, ಏ.8- 2012ರಲ್ಲಿ ಸಕಾಲ ಜಾರಿಗೆ ಬಂದಿದೆ ಸಾರ್ವಜನಿಕರು ಯಾವುದೇ ಕೆಲಸ ಕಾರ್ಯಗಳಿಗೆ ಅಲೇದಾಡಬಾರದು ಎಂದು ನಿಗದಿತ ಸಮಯದಲ್ಲಿ ಸೇವೆ ಪಡೆಯುವದಾಗಿ ಎಂದು ಪಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶಕುಮಾರ ಹೇಳಿದರು.
ತಾಲೂಕಿನ ಹೋರ್ತಿ ಗ್ರಾಮದಲ್ಲಿ ಕರ್ನಾಟಕ ಸರಕಾರ ಜಿಲ್ಲಾಡಳಿತ ವಿಜಯಪೂರ ಗ್ರಾಮ ಒನ್ ಉದ್ಘಾಟನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ರಾಜ್ಯದ 4 ವಿಭಾಗಗಳಲ್ಲಿ ನಾಲ್ಕು ಜಿಲ್ಲೆ ಆಯ್ಕೆ ಮಾಡಿದ್ದು ಬೆಳಗಾವಿ ವಿಭಾಗದಲ್ಲಿ ವಿಜಯಪೂರ ಜಿಲ್ಲೆಯಲ್ಲಿ ಗ್ರಾಮ ಒನ್ ಉದ್ಘಾಟಿಸಿರುವದು ಸಂತಸ ತಂದಿದೆ. ಜಿಲ್ಲಾಧಿಕಾರಿಗಳು ಬಹಳ ಮುತುವರ್ಜಿ ವಹಿಸಿದರೆ ಅತೀ ಯಶಸ್ವೀಯಾಗುತ್ತದೆ. 101 ಇಲಾಖೆಗಳ 1122 ಸೇವೆ ಕೊಡಲಾಗುವ ಸಕಾಲ ಯೋಜನೆ 8 ವರ್ಷದಲ್ಲಿ 21 ಕೋಟಿ 53 ಲಕ್ಷ 46ಸಾವಿರದಾ 182 ಅರ್ಜಿಗಳು ಬಂದಿವೆ ಇದರಲ್ಲಿ 21 ಕೋಟಿ 49 ಲಕ್ಷ 2 ಸಾವಿರದಾ 359 ಸೇವೆಗಳು ಮಾಡಲಾಗಿದೆ. ಶೆ. 98 ಪ್ರತಿಶತ ಕೆಲಸವಾಗಿದೆ. ಈ ಸೇವೆಯಲ್ಲಿ ಜಿಲ್ಲಾಡಳಿತ ಕೈಜೊಡಿಸಬೇಕು. ಹಾಗೂ ಸಕಾಲದಲ್ಲಿರುವ ಸಿಬ್ಬಂದಿಗಳ ನಡೆತೆ ಚೆನ್ನಾಗಿರಬೇಕು ಇದೊಂದು ರಾಜ್ಯದಲ್ಲಿಯೇ ಮಾದರಿಯಾಗಿಯನ್ನಾಗಿ ಮಾಡಬೇಕು ಎಂದು ಸಚಿವರು ತಿಳಿಸಿದರು.
ಸುರೇಶಕುಮಾರ ರಾಜ್ಯ ರಾಜಕಾರಣದಲ್ಲಿ ಒಬ್ಬ ಅಪರೂಪದ ರಾಜಕಾರಣಿ.ಬಡವರ ,ದೀನದುರ್ಬಲರ ನಾಡಿ ಮಿಡಿತ ಹೊಂದಿದ ವ್ಯಕ್ತಿ, ಸಕಾಲ ಯೋಜನೆ ಸುರೇಶಕುಮಾರ ಜಾರಿ ತಂದಾಗ ಕೆಲ ಭ್ರಷ್ಠರು ಎಲ್ಲಿ ಮುಗಿಸಿ ಬಿಡುತ್ತಾರೆಯೂ ಎಂಬ ವಿಚಾರ ನನ್ನಲ್ಲಿತ್ತು ಎಕೆಂದರೆ ಸಕಾಲ ಮಾಡಿದರೆ ಹಣ ತಿನ್ನುವುದು ನಿಲ್ಲುತ್ತದೆ ಸಕಾಲ ಕೆಲ ಬುದ್ದಿವಂತರು ಬೆಂಬಲಿಸಿರುವುದರಿಂದ ಸಕಾಲ ಯಶಸ್ವೀಯಾಗಿದೆ.ಜನಸಾಮಾನ್ಯರಿಗೆ ಈ ಯೋಜನೆ ದೂರಕಲಿ ಎಂದು ವಿಧಾನ ಪರಿಷ್ಯತ ಸದಸ್ಯ ಅರುಣ ಶಹಾಪೂರ ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ ಒಬಿರಾಯನ ಕಾಲದ ಆಡಳಿತ ಕೊನೆಗಾಣಿಸಿ ನೂತನ ಪದ್ದತಿ ಬಗ್ಗೆ ಕಳಕಳಿ ಹೊಂದಿದ ಜನ ಸಾಮಾನ್ಯರಿಗೆ ಒಂದೇ ಸೂರಿನಲ್ಲಿ ಆಡಳಿತ ಒದಗಿಸಲು ಕ್ರಮಕೈಗೊಂಡಿರುವ ನಿಮ್ಮ ಸೇವೆಗೆ ಈ ಭಾಗದ ಶಾಸಕನಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಆನ್ಲೈನ್ ಬಂದರೆ ಪ್ರಾಣಿಕತೆ ಬಂದೆ ಬರುತ್ತದೆ ಈ ಯೋಜನೆ ಬಗ್ಗೆ ಗ್ರಾಮೀಣ ಭಾಗದಲ್ಲಿ ತಿಳಿಯುವಂತಾಗಬೇಕು. ಇಂದು ಕರೋನಾ ರೋಗದಿಂದ ಇಡೀ ವಿಶ್ವ ತಲ್ಲಣವಾಗಿದೆ ನಮ್ಮ ದೇಶದ ಆರ್ಥಿಕ ಪರಸ್ಥಿತಿ ಹಾಳಾಗಿದೆ. ಮಕ್ಕಳ ವಿಧ್ಯಾಭ್ಯಾಸ ಸಂಪೂರ್ಣ ತೊಂದರೆಯಾಗಿದೆ ನಿಮ್ಮ ಶಿಕ್ಷಣ ಇಲಾಖೆಯಿಂದ ಇಡೀ ರಾಜ್ಯಕ್ಕೆ ಅನ್ವಯಿಸುವಂತೆ ನಿರ್ಣಯಗಳಿರಬಾರದು ಪ್ರಾದೇಶಿಕವಾಗಿ ಅಲ್ಲಿನ ಸ್ಥತಿಗತಿ ನೋಡಿ ನಿರ್ಣಯಗಳಾಗಬೇಕು ಒಬ್ಬರು ಒಂದೊಂದು ಹೇಳಿಕೆ ನೀಡುತ್ತಿರುವುದರಿಂದ ಶೈಕ್ಷಣಿಕವಾಗಿ ಗೊಂದಲ ಉಂಟಾಗುತ್ತಿದೆ.ಪರಿಕ್ಷೆಗಳು ನಡೇಯುತ್ತವೆ ಅಥವಾ ಇಲ್ಲೋ ಎಂಬುದು ಮಕ್ಕಳಲ್ಲಿ ಸ್ಪಷ್ಠತೆ ಇರಬೇಕು. ನಿಮ್ಮಂತವರನ್ನು ರಾಜಕಾರಣದಲ್ಲಿ ಆದರ್ಶತೆಯಿಂದ ಇಡೀ ಜನತೆ ಗೌರವಿಸುತ್ತದೆ,
ರಾಜಕಾರಣ ಬೆರೆ ಕಡೆ ಸಾಗುತ್ತಿದೆ ಇಂದಿನ ದಿನಮಾನಗಳಲ್ಲಿ ವಿಶ್ವಾಸರ್ಹತೆ ಕಳೇದುಕೊಳ್ಳುತ್ತಿದೆ ಒಳ್ಳೆಯ ಜನ ರಾಜಕಾರಣದಲ್ಲಿ ಮುಂದೆವರೆಯಬೇಕೋ ಬೇಡವೂ ಎಂಬುದು ತಿಳಿಯುತ್ತಿಲ್ಲ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ವಿಷಾದ ವ್ಯಕ್ತಪಡಿಸಿದರು.
ವಿಧಾನ ಪರಿಷ್ಯತ್ ಸದಸ್ಯ ಅರುಣ ಶಹಾಪೂರ, ಭಾಜಪ ಜಿಲ್ಲಾಮುಖಂಡ ದಯಾಸಾಗರ ಪಾಟೀಲ, ಜಿಲ್ಲಾಧಿಕಾರಿ ಪಿ.ಸುನೀಲ, ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ, ತಹಶೀಲ್ದಾರ ಚಿದಾನಂದ ಕುಲಕರ್ಣಿ, ಗ್ರಾ.ಪಂ ಅಧ್ಯಕ್ಷ ಬಸಲಿಂಗಪ್ಪ ಪೂಜಾರಿ, ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ ಇಂಡಿ ಸೇರಿದಂತೆ ಕಂದಾಯ ಅಧಿಕಾರಿಗಳು ಇದ್ದರು.