ಬಡವರ ಮನೆ ರದ್ದಾದರೆ ಬಾದರ್ಲಿ ಹೊಣೆ

ಬಿಜೆಪಿ ಗೆ ಮತ ಸಿಎಂ ಮಾತಿಗೆ ನಾನು ಓಕೆ
ಸಿಂಧನೂರು.ಏ.೮-ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಶಾಸಕರಾಗಿದ್ದಾಗ ಸುಕಾಲಪೇಟೆ ಹಾಗೂ ಬಪ್ಪೂರು ರಸ್ತೆಯಲ್ಲಿ ಬಡವರ ಮನೆಗಳಿಗಾಗಿ ಭೂಮಿ ಖರೀದಿ ಮಾಡಿದ್ದು ಸುಕಾಲಪೇಟೆಯ ಭೂಮಿ ಯೋಗ್ಯ ಇಲ್ಲ ಹಾಗೂ ಬಪ್ಪೂರು ರಸ್ತೆ ಭೂಮಿ ರಸ್ತೆ ಜಗಳ ಕಾರಣದಿಂದ ಈ ಎರಡು ಸಮಸ್ಯೆಗಳನ್ನು ಹಂಪನಗೌಡ ಬಾದರ್ಲಿ ಕುಳಿತು ಬಗೆ ಹರಿಸಬೇಕು ಇಲ್ಲದಿದ್ದರೆ ಬಡವರ ಮನೆಗಳು ನಿಂತರೆ ಅದಕ್ಕೆ ಹಂಪನಗೌಡ ಬಾದರ್ಲಿ ನೇರ ಹೊಣೆಗಾರರಾಗುತ್ತಾರೆ ನಾನಲ್ಲ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಸುಕಾಲಪೇಟೆಯ ಹಳ್ಳ ಖರೀದಿ ಮಾಡಿದ್ದು ಇಂಜೀನಿಯರ್ ಸ್ಥಳ ಪರಿಶೀಲನೆ ಮಾಡಿದಾಗ ಭೂಮಿ ಯೊಗ್ಯವಾಗಿಲ್ಲ ಎಂದಿದ್ದಾರೆ ಬಪ್ಪೂರು ರಸ್ತೆ ಭೂಮಿ ರಸ್ತೆಯ ಸಮಸ್ಯೆಯಿಂದ ನೆನೆಗುದಿಗೆ ಬಿದ್ದಿದೆ. ಈ ಎರಡು ಕಡೆ ಭೂಮಿಗಳನ್ನು ಹಂಪನಗೌಡ ಬಾದರ್ಲಿ ಅವಧಿಯಲ್ಲಿ ಖರೀದಿಯಾಗಿದ್ದು ಈಗ ಅವರೇ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದರೆ ಬಡವರಿಗೆ ಮನೆಗಳು ಸಿಗುವ ದಿಲ್ಲ ಎಂದರು.
ನಗರದ ಜನತೆ ನನಗೆ ಚುನಾವಣೆಯಲ್ಲಿ ಮತ ಹಾಕಿಲ್ಲ ಎಂದು ನಾನು ಹೇಳಿಲ್ಲ. ನಗರ ಹಾಗೂ ಗ್ರಾಮೀಣ ಪ್ರದೇಶದ ಮತದಾರರಿಂದ ನಾನು ಶಾಸಕನಾಗಿದ್ದೆನೆ ನಗರಸಭೆಯ ಅಧ್ಯಕ್ಷರು ಹಾಗೂ ಸದಸ್ಯರು ರಸ್ತೆಗಳಿಗೆ ಮರ್ಮ ಹಾಕಲು ಅನುದಾನ ಕೇಳಲು ನನ್ನ ಬಳಿ ಬಂದಾಗ ನಾನು ಅವರ ಜೊತೆ ವಾಸ್ತವ ವಿಷಯದ ಬಗ್ಗೆ ಅನೌಪಚಾರಿಕವಾಗಿ ಚರ್ಚಿಸಲಾಯಿತು ಅದನ್ನು ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿಸಿದ್ದು ಸರಿಯಲ್ಲ ನಗರ ಹಾಗೂ ಗ್ರಾಮೀಣ ಪ್ರದೇಶದ ಮತದಾರರನ್ನು ನಾನು ಒಂದೆ ದೃಷ್ಟಿಕೋನದಿಂದ ನೋಡುತ್ತಿದ್ದೆನೆ ಹೊರತು ಭೇದಭಾವ ಮಾಡಿಲ್ಲ ಎಂದು ನಾಡಗೌಡ ಸ್ಪಷ್ಟನೆ ನೀಡಿದರು.
ಏ.೧೦ ರ ತನಕ ಕಾಲುವೆಗೆ ನೀರು ಬಿಟ್ಟು ರೈತರ ಬೆಸಿಗೆ ಬೆಳೆ ಕಾಪಾಡುವ ಜೊತೆಗೆ ಏ.೧೧ ರಿಂದ ೨೦ ರತನಕ ೨ ಸಾವಿರ ಕ್ಯೂಸೇಕ್ಸ ನೀರು ಕಾಲುವೆಗೆ ಹರಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲಾಗುತ್ತದೆ ಇದರ ಬಗ್ಗೆ ರೈತರು ಗೊಂದಲಕ್ಕೀಡಾಗಬಾರದು ನೀರನ್ನು ವ್ಯರ್ಥ ಮಾಡದೆ ಸದ್ಭಳಕೆ ಮಾಡಿ ಕೊಳ್ಳಬೇಕು ಎಂದು ಶಾಸಕರು ಜನತೆ ಹಾಗೂ ರೈತರಲ್ಲಿ ಮನವಿ ಮಾಡಿಕೊಂಡರು.
ಜೋಳ ಖರೀದಿ ಮಾರ್ಚ ತಿಂಗಳ ಕೊನೆಯಂದು ಸರ್ಕಾರ ಹೇಳಿದ್ದು ನಾನು ಕಾರ್ಯದರ್ಶಿಗಳನ್ನು ಭೇಟಿಯಾಗಿ ಚರ್ಚಿಸಿದ ನಂತರ ಏಪ್ರಿಲ್ ಕೊನೆಯವರೆಗೆ ಜೋಳ ಖರೀದಿ ದಿನಾಂಕವನ್ನು ವಿಸ್ತರಿಸಲಾಗಿದೆ ನೊಂದಾವಣಿ ಮಾಡಿಸಿದ ಎಲ್ಲಾ ರೈತರ ಜೋಳಗಳನ್ನು ಖರೀದಿ ಮಾಡಲಾಗುತ್ತದೆ. ೨೦೧೮ ರಲ್ಲಿ ನಾನು ಶಾಸಕನಾಗಿದ್ದಾಗ ನಗರಕ್ಕೆ ೧೦ ಲಕ್ಷ ಅನುದಾನ ನೀಡುವ ಜೊತೆಗೆ ಗ್ರಾಮೀಣ ಪ್ರದೇಶದಿಂದ ಟ್ರಾಕ್ಟರ್‌ಗಳನ್ನು ತಂದು ನಗರದ ರಸ್ತೆಗಳಿಗೆ ಮರ್ಮನ್ನು ಹಾಕಿಸಲಾಗಿತ್ತು. ಎಸ್.ಎಫ್.ಸಿ ಅನುದಾನ ವಾಪಸು ಹೋಗಿದೆ ನನ್ನ ಅಧಿಕಾರದ ಅವಧಿಯಲ್ಲಿ ನಗರ ಪ್ರದೇಶಕ್ಕೆ ೮೦ ಕೋಟಿ ಅನುದಾನ ನೀಡಿದ್ದೆನೆ ಎಂದರು. ಕ್ರೀಡಾಂಗಣ, ಹೈಟೆಕ್ ಗಾರ್ಡನ್, ಪಶುಪಾಲನೆ ಇಲಾಖೆಯ ಆಸ್ಪತ್ರೆ, ಟೌನ್ ಹಾಲ್, ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕೆಇಬಿ ಕಛೇರಿ ತಂದು ಕಟ್ಟಡ ಕಟ್ಟಿಸಲಾಗಿದೆ ಅಲ್ಪಸಂಖ್ಯಾತರ ವಸತಿ ಶಾಲೆ, ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರ ಪಿಯುಸಿ ಕಾಲೇಜು ಅವರು ಮತ ಹಾಕಿಲ್ಲ ಇವರು ಹಾಕಿದ್ದಾರೆ ಎಂದು ನಾನು ಬೇದ ಭಾವ ಮಾಡಿಲ್ಲ ನಗರಸಭೆಯ ಏನಾದರೂ ಸಮಸ್ಯೆಗಳು ಜಿಲ್ಲಾಧಿಕಾರಿ ಗಳ ಕಛೇರಿಯಲ್ಲಿ ವಿಳಂಬ ಇದ್ದರೆ ಹೇಳಿ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ನಿವಾರಿಸುತ್ತೆನೆಂದು ನಗರಸಭೆಯ ಅಧ್ಯಕ್ಷರು ಮತ್ತು ಸದಸ್ಯರಿಗೆ ತಿಳಿಸಿದ್ದೆನೆ.
ಜೆಡಿಎಸ್ ನಗರಸಭೆಯ ಸದಸ್ಯರ ವಾರ್ಡ್‌ಗಳಂತೆ ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಿಗೆ ಸಿಸಿ ರಸ್ತೆ ಮಾಡಿಸಲಾಗಿದೆ ಎಂದರು.
ನಗರಕ್ಕೆ ಮುಖ್ಯಮಂತ್ರಿಗಳು ಬಂದಾಗ ಅವರ ಜೊತೆ ಗುಪ್ತವಾಗಿ ಮಾತನಾಡಿದ ಪತ್ರಕರ್ತರ ಕೇಳಿದ ಪ್ರಶ್ನೆಗೆ ವೀರಶೈವ ಕಲ್ಯಾಣ ಮಂಟಪ ಹಾಗೂ ರಿಂಗ್ ರಸ್ತೆ ಬಗ್ಗೆ ಮನವಿ ನೀಡಲು ಹೋದಾಗ ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವಂತೆ ಮುಖ್ಯಮಂತ್ರಿಗಳು ನನಗೆ ಕೇಳಿದಾಗ ನಾನು ಜೆಡಿಎಸ್ ಪಕ್ಷದ ಅಭ್ಯರ್ಥಿ ಇಲ್ಲದಿದ್ದರೆ ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸುವದಾಗಿ ಭರವಸೆ ನೀಡಿರುವೆ.
ಬಿಜೆಪಿ ಮುಖಂಡರಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಬೆಂಬಲಿಸುವಂತೆ ನನಗೆ ಕೇಳಿಕೊಂಡಿದ್ದು ನಿನಗೆ ಬೆಂಬಲಿಸುವದಾಗಿ ಹೇಳಿದ್ದೆನೆಂದರು.
ಮಸ್ಕಿ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲದ ಕಾರಣ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ನಿಮಗೆ ತಿಳಿದ ಪಕ್ಷದ ಅಭ್ಯರ್ಥಿ ಗೆ ಬೆಂಬಲಿಸಬಹುದು ಆದರೆ ಯಾವುದೇ ಪಕ್ಷದ ಮುಖಂಡರ ಜೊತೆ ಸಭೆ ಸಮಾರಂಭಗಳಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳಬಾರದೆಂದು ಸೂಚನೆ ನೀಡಿದ್ದೆನೆ.
ಪಕ್ಷದ ಮುಖಂಡರಾದ ಬಿ .ಶ್ರೀ ಹರ್ಷ, ಬಸವರಾಜ ನಾಡಗೌಡ, ಧರ್ಮನಗೌಡ, ಅಶೋಕ ಗೌಡ ಗದ್ರಟಗಿ, ಅಶೋಕ ಉಮಲೂಟಿ, ನದಿಮುಲ್ಲಾ ,ಎಸ್.ಪಿ ಟೇಲರ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.