ಬಡವರ ಬಾಳು ಬೆಳಗಿಸುತ್ತಿರುವ ಸರ್ಕಾರದ ಜನಪರ 5 ಗ್ಯಾರಂಟಿ ಯೋಜನೆಗಳು: ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ,ಫೆ.29- ರಾಜ್ಯ ಸರ್ಕಾರದ ಜನಪ್ರೀಯ ಯೋಜನೆಗಳಾದ 5 ಗ್ಯಾರಂಟಿಗಳಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಲ್ಲಿ ಹಣವಿಲ್ಲ ಎಂಬ ತಮ್ಮ ಹೇಳಿಕೆಯ ಶೀರ್ಷಿಕೆಯಲ್ಲಿ ಪ್ರಸಾರ ಹಾಗೂ ಪ್ರಕಟವಾಗಿರುವ ಸುದ್ದಿಗಳು ತಪ್ಪು ಗ್ರಹಿಕೆಯಿಂದ ಕೂಡಿದೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಸ್ಪಷ್ಟಪಡಿಸಿದ್ದಾರೆ.
ಕಲಬುರಗಿಯ ಬಡಾವಣೆಯೊಂದರಲ್ಲಿ ನಡೆದ ಸಮಾರಂಭದಲ್ಲಿ ಅಲ್ಲಿನ ಜನ ಅನೇಕ ಬೇಡಿಕೆ ನನ್ನ ಗಮನಕ್ಕೆ ತಂದಿದ್ದಾರೆ. ಅವನೇಲ್ಲ ಈಡೇರಿಸುವುದಾಗಿ ನಾನು ಹೇಳಿರುವೆ. ಆರಂಭದಲ್ಲಿ ನಾನು ಅಭಿವೃದ್ಧಿಗೆ ಬರುತ್ತಿರುವ ಅನುದಾನ, ಕೆ.ಕೆ.ಆರ್.ಡಿ.ಬಿ ಅನದಾನ ಎಲ್ಲದರ ಬಗ್ಗೆ ಮಾತನಾಡಿರುವೆ. ಅದ್ಯಾವುದು ವರದಿಯಾಗದೆ ನಾನು ಹಾಸ್ಯದ ರೂಪದಲ್ಲಿ ಪ್ರಸ್ತಾಪಿಸಿದ ವಿಷಯವನ್ನೇ ತಮ್ಮ ವರದಿಗಾರ ಹೆಡ್ಡಿಂಗ್ ಮಾಡಿ ಪ್ರಕಟಿಸಿದ್ದಾರೆ.
ಅಪೂರ್ಣ ಹಾಗೂ ತಪ್ಪುಗ್ರಹಿಕೆಯ ಹೇಳಿಕೆಯನ್ನು ಜನ ಅಪಾರ್ಥವಾಗಿ ತಿಳಿದುಕೊಳ್ಳುವಂತೆ ಆಗಿದೆ. ಮಾದ್ಯಮಗಳಲ್ಲಿ ಆಗಿರುವ ಈ ಪ್ರಮಾದವನ್ನು ಸರಿಪಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಶಾಸಕರು ನೀಡಿರುವ ಸ್ಪಷ್ಟಿಕರಣ
‘ಜನಪರ ಗ್ಯಾರಂಟಿ ಯೋಜನೆಗಳಿಂದ ಬಡವರ ಬಾಳು ಬೆಳಗುತ್ತಿದೆ’- ಅಲ್ಲಮಪ್ರಭು ಪಾಟೀಲ್
ಕಾಂಗ್ರೇಸ್ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ, ಯುವನಿಧಿ, ಅನ್ನಭಾಗ್ಯ, ಗೃಹ ಜ್ಯೋತಿ ಹಾಗೂ ಬಸ್‍ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿರುವ ಕಡು ಬಡವರೆಲ್ಲರ ಭಾಗ್ಯದ ಬಾಗಿಲು ತೆರೆದಿದೆ. ಅವರ ಬಾಳಲ್ಲಿ ಬೆಳಕು ಮೂಡಿದೆ ಕಲಬುರಗಿ ನಗರದ ಉದನೂರು ರಸ್ತೆಯಲ್ಲಿರುವ ಜಾಧವ್ ಲೇಔಟ್‍ನ ಮೋಘ ನಗರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾಡಿರುವ ಮಾತುಗಳನ್ನೇ ತಪ್ಪಾಗಿ ಗ್ರಹಿಸಿ ವರದಿ ಮಾಡಲಾಗಿದೆ.
ಇದು ಸರಿಯಲ್ಲ ಗೃಹ ಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಯುವನಿಧಿ ಹಾಗೂ ಅನ್ನಭಾಗ್ಯ ಐದು ಗ್ಯಾರಂಟಿ ಯೋಜನೆಗಳಿಗೆ ಸರಕಾರು ಸುಮಾರು 65000 ಕೋಟಿ ರೂಪಾಯಿಗಳು ಖರ್ಚು ಮಾಡುತ್ತಿದೆ. ಇದರಿಂದ ಬಡವರ ಬಾಳು ಹಸನಾಗುತ್ತಿದೆ ಮಹಿಳೆಯರಿಗೆ ಪ್ರತಿ ತಿಂಗಳು ರೂ.2000 ಬರುತ್ತಿದ್ದು, ಉಚಿತವಾಗಿ ವಿದ್ಯುತ್ ಪೂರೈಸಲಾಗುತ್ತಿದೆ. ಸಾರಿಗೆ ಬಸ್‍ನಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ.
ಉಚಿತವಾಗಿ ಅಕ್ಕಿ ಕೊಡಲಾಗುತ್ತಿದೆ. ಇದರಿಂದಾಗಿ ಬಡವರೂ ಕೂಡಾ ಉತ್ತಮ ಬದುಕು ತಮ್ಮದಾಗಿಸಿಕೊಂಡಿದ್ದಾರೆ. ನಾನು ಶಾಸಕರಾದಾಗಿನಿಂದ ಕಲಬುರಗಿ ದಕ್ಷಿಣ ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದು ಈ ಬಗ್ಗೆ ಶೀಘ್ರವೇ ವಿವರ ಜನತೆಗೆ ನೀಡುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.