ಬಡವರ ಪಾಲಿನ ಸಂಜೀವಿನಿ ಡಾ ವಿಜಯಕುಮಾರ್

ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.20: ಉತ್ತಮ ಆರೋಗ್ಯ ಎಲ್ಲರ ಹಕ್ಕು. ರೋಗ ಪೀಡಿತರಿಗೆ ಉತ್ತಮ ಚಿಕಿತ್ಸೆ ಸಿಗಬೇಕು ಎಂಬುದು ಒಂದು ನಿರೀಕ್ಷೆ.  ದುರದೃಷ್ಟಕರ ಸಂಗತಿ ಎಂದರೆ ಉತ್ತಮ ಆರೋಗ್ಯ ಹಾಗೂ ಚಿಕಿತ್ಸೆ ಅನೇಕರ ಪಾಲಿಗೆ ಇನ್ನೂ ಮರೀಚಿಕೆ. ಆರೋಗ್ಯ ಸೇವಾ ವಲಯ ಉದ್ಯಮವಾಗಿರುವುದೇ ಇದಕ್ಕೆ ಕಾರಣ. ಚಿಕಿತ್ಸೆಗೆ ಹೆಚ್ಚು ಹಣ ತೆರಬೇಕಾಗಿರುವ  ರೋಗ’ಗಳು ಈಗ ಹೆಚ್ಚಾಗಿವೆ. ಹಣ ಇದ್ದವರು ಚಿಕಿತ್ಸೆ ಪಡೆದು ಪಾರಾಗಿ ಬಿಡುತ್ತಾರೆ. ಅಂಥವರಿಗಾಗಿ ‘ಸೂಪರ್ ಸ್ಪೆಷಾಲಿಟಿ’ ಆಸ್ಪತ್ರೆಗಳಿವೆ. ಈ ಪರಿಸ್ಥಿತಿಯಲ್ಲೂ ಕಡು ಬಡವರಿಗೆ ಸದಾ ಬಾಗಿಲು ತೆರೆದಿರುವ ಪಟ್ಟಣದ  ಡಾ.ಬಿ.ವಿಜಯಕುಮಾರ ಸದ್ದುಗದ್ದಲವಿಲ್ಲದೆ  ಉಚಿತವಾಗಿ ಸೇವೆಯನ್ನು ಮಾಡುತ್ತಿದ್ದಾರೆ.
ಆಯುಷ್ ಇಲಾಖೆಯ ವೈದ್ಯಾಧಿಕಾರಿ ಸೇವೆಯನ್ನು ಸಲ್ಲಿಸುತ್ತಾ ಬಿಡುವಿನ ಸಮಯದಲ್ಲಿ ಉಚಿತವಾಗಿ ಸೇವೆಯನ್ನು ಮಾಡುತ್ತಿದ್ದು ಸಾವಿರಾರು ಬಡ ರೋಗಿಗಳು ಇದರ ಲಾಭ ಪಡೆದಿದ್ದಾರೆ.ಮಾರಾಣಂತಿಕ ರೋಗ ಕಿಡ್ನಿ ವೈಫಲ್ಯ, ಸೇರಿದಂತೆ ಯಾವುದೇ ರೋಗ ವಿರಲ್ಲಿ ಇದಕ್ಕೆ ಚಿಕಿತ್ಸೆ ನೀಡಿ ಗುಣಪಡಿಸಿದ ಉದಾಹರಣೆಗಳು ನಮ್ಮ ಮುಂದಿವೆ ಪ್ರತಿ ನಿತ್ಯ ಸಂಜೆ 5ಗಂಟೆಯಿಂದ ರಾತ್ರಿ 9-30ರವರಗೆ ಉಜ್ಜಯಿನಿ ರಸ್ತೆಯ ಚರಕ ಆರ್ಯವೇದ ಸೆಂಟರ್ ನಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಾರೆ ಸಾರ್ವಜನಿಕರು ಇವರ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಲಿ .