ಬಡವರ ಪಾಲಿನ ಭಾಗ್ಯವಿಧಾತ  ಸಿದ್ದರಾಮಯ್ಯ

ಸಂಜೆವಾಣಿ ವಾರ್ತೆ

ದಾವಣಗೆರೆ. ಆ.೪; ನುಡಿದಂತೆ ನಡೆಯುವ ಜನನಾಯಕ ಬಡವರ ಪಾಲಿನ ಭಾಗ್ಯವಿಧಾತ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕಾರ್ಯ ಶೈಲಿಯಿಂದ ದೇಶದ ನಂಬರ್ ಒನ್ ಮುಖ್ಯಮಂತ್ರಿ ಆಗಿದ್ದಾರೆಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸಿದ್ದರಾಮಯ್ಯನವರನ್ನು ಕೊಂಡಾಡಿದರು. ಅವರು ದಾವಣಗೆರೆ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರರು ಹಮ್ಮಿಕೊಂಡಿದ್ದ ಸಿದ್ದರಾಮಯ್ಯನವರ 76ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಸಿಹಿ ವಿತರಿಸಿ ಮಾತನಾಡಿದರು. ಕಳೆದ ನಾಲ್ಕು ದಶಕಗಳಿಂದ ರಾಜಕಾರಣದಲ್ಲಿರುವ ಸಿದ್ದರಾಮಯ್ಯನವರು ಬಡವರ ಪಾಲಿನ ದೇವರಾಗಿದ್ದಾರೆ ಅವರ ಅನ್ನಭಾಗ್ಯ ಕಾರ್ಯಕ್ರಮವು ದೇಶದಲ್ಲೇ ವಿನೂತನ ಕಾರ್ಯಕ್ರಮವಾಗಿದೆ ಇದೀಗ ಕರ್ನಾಟಕದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡುವುದರ ಮೂಲಕ ಇಡೀ ವಿಶ್ವದಲ್ಲೇ ಜನಪ್ರಿಯ ಮುಖ್ಯಮಂತ್ರಿಗಳಾಗಿ ಕಂಗೊಳಿಸಿದ್ದಾರೆ ಎಲ್ಲಾ ಸಮಾಜಗಳನ್ನು ಎಲ್ಲಾ ಧರ್ಮದವರನ್ನು ಎಲ್ಲರನ್ನು ಪ್ರೀತಿಸುವ ಗುಣವನ್ನು ಸಿದ್ದರಾಮಯ್ಯನವರು ಹೊಂದಿದ್ದಾರೆ ಸಂವಿಧಾನದಲ್ಲಿ ನಂಬಿಕೆ ಇಟ್ಟಿರುವ ಸಿದ್ದರಾಮಯ್ಯನವರು ಅಂಬೇಡ್ಕರ್ ಬುದ್ಧ ಬಸವ ಹಾದಿಯಲ್ಲಿ ಆಡಳಿತ ನೀಡುತ್ತಿದ್ದಾರೆ ಕರ್ನಾಟಕ ದೇಶದಲ್ಲೇ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ ಎಂದು ತಿಳಿಸಿದರು ಸಿದ್ದರಾಮಯ್ಯನವರು ನೂರು ಕಾಲ ಬಾಳಲಿ ರಾಜ್ಯವನ್ನು ಉತ್ತುಂಗಕ್ಕೆ ಕೊಂಡಯ್ಯಲ್ಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ದಾವಣಗೆರೆಯ ಮಹಾನಗರ ಪಾಲಿಕೆಯ ಹಿರಿಯ ಸದಸ್ಯರುಗಳಾದ ಕೆ. ಚಮನ್ ಸಾಬ್ ಏ ನಾಗರಾಜ್ ಗಡಿ ಗುಡಾಳ್ ಮಂಜುನಾಥ್ ನಾಗರಾಜ್ ಉದಯಕುಮಾರ್ ಉಮೇಶ್ ಎಸ್ ಮಲ್ಲಿಕಾರ್ಜುನ್ ಬಾಬುರಾವ್ ಸಾಳಂಕಿ ಭಾರತ್ ಕಾಲೋನಿ ಜಗದೀಶ್ ಕೆ.ಜಿ. ರಹಮತ್ತುಲ್ಲಾ ಬಿ ಹೆಚ್ ಉದಯ ಕುಮಾರ್ ಮಾರುತಿ ಹನುಮಂತಪ್ಪ ಚೈತನ್ಯ ಕುಮಾರ್, ಸುರೇಶ್ ಬಿ.ಎಸ್. ಮಧು ಶಾಮನೂರು ಎಲ್ ಎಮ್ ಎಸ್ ಸಾಗರ್ ಸೇರಿದಂತೆ ಇತರರು ಹಾಜರಿದ್ದರು.