ಬಡವರ ದನಿಗೆ ಧ್ವನಿಯಾಗಿ ಸ್ಪಂದಿಸುವ ಜೆ.ಎಂ ಕೊರಬು

ಅಫಜಲಪುರ:ಜೂ.1: ಕಳೆದ ಐದಾರು ವರ್ಷಗಳಿಂದ ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಮಾಜ ಸೇವಕ ಜೆ.ಎಂ ಕೊರಬು ಅವರು ಬಡವರ ದನಿಗೆ ಧ್ವನಿಯಾಗಿ ಸ್ಪಂದಿಸಿದ್ದಾರೆ ಎಂದು ಮುಖಂಡ ಶಿವಪುತ್ರಪ್ಪ ಜಿಡ್ಡಗಿ ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ ಕೊರಬು ಅವರ ಜನ್ಮದಿನದ ಅಂಗವಾಗಿ ಕೊರಬು ಬೆಂಬಲಿಗರು ಹಾಗೂ ಅಪಾರ ಅಭಿಮಾನಿಗಳು ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾತನಾಡಿದ ಅವರು ಸದಾ ಬಡವರ ಏಳಿಗೆಗಾಗಿ ಚಿಂತನೆ ನಡೆಸುವ ಜೆ.ಎಂ ಕೊರಬು ಅವರು ಕೋವಿಡ್ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಅಲ್ಲದೆ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಜಾರಿ ಮಾಡುವ ಮೂಲಕ ಜನಾನುರಾಗಿ ಸಮಾಜ ಸೇವೆಯಲ್ಲಿ ಮುಂದುವರಿಯುತ್ತಾ ಬಂದಿದ್ದಾರೆ. ಹೀಗಾಗಿ ಅವರ ಜನ್ಮದಿನವನ್ನು ಅವಿಸ್ಮರಣೆವಾಗಿರಲು ಆಸ್ಪತ್ರೆಯ ಒಳ ರೋಗಿಗಳಿಗೆ ಹಾಗೂ ಸುಕ್ಷೇತ್ರ ದೇವಲ ಗಾಣಗಾಪುರದ ಸಂಗಮಕ್ಕೆ ತೆರಳಿ ಅನ್ನ ಸಂತರ್ಪಣೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ರಾಮಣ್ಣ ನಾಯ್ಕೋಡಿ, ಮಕ್ಬೂಲ ಶೇಖ್, ಚಿದಾನಂದ ತಳವಾರ, ವಿಠೋಬಾ ಹಿರೇಕುರುಬರ, ನಿಂಗು ಪಾಟೋಳಿ, ಶರಣು ಈಶ್ವರಗೊಂಡ, ಭೀಮಾಶಂಕರ ಬಿರಾದಾರ, ಸುನೀಲ ಹಳ್ಳಿ, ಖಾಜಪ್ಪ ಭಜಂತ್ರಿ ಸೇರದಂತೆ ಕೊರಬು ಬೆಂಬಲಿಗರು ಹಾಗೂ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಹಾಜರಿದ್ದರು.


ಸಮಾಜಮುಖಿ ಸೇವೆಯಿಂದ ನನಗೆ ಆತ್ಮ ಸಂತೃಪ್ತಿ ಸಿಗುತ್ತದೆ. ಹೀಗಾಗಿ ಪ್ರತಿ ವರ್ಷವೂ ನನ್ನ ಹುಟ್ಟು ಹಬ್ಬದ ದಿನದಂದು ನನ್ನ ಬೆಂಬಲಿಗರು, ಹಿತೈಷಿಗಳು ಮತ್ತು ಅಭಿಮಾನಿಗಳು ಒಂದಲ್ಲ ಒಂದು ರೀತಿಯಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವುದು ಸಂತಸ ತಂದಿದೆ. ಇಂತಹ ಸೇವಾ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ.

  • ಜೆ.ಎಂ ಕೊರಬು. ರಾಜ್ಯ ಉಪಾಧ್ಯಕ್ಷರು, ಕೆಪಿಸಿಸಿ ಹಿಂದುಳಿದ ವರ್ಗ ಬೆಂಗಳೂರು.