ಬಡವರ ಜೊತೆ ದೀಪಾವಳಿ ಆಚರಣೆಸಿ ಮಾನವೀಯತೆಗೆ ಸಾಕ್ಷಿಯಾದ ರವಿ ಪೂಜಾರಿ

ಅಥಣಿ : ದೀಪಾವಳಿ ಹಬ್ಬದ ಸಂಭ್ರಮ ದೇಶಾದ್ಯಂತ ಕಳೆಗಟ್ಟಿದೆ ಪ್ರತಿ ಮನೆಯಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಬಡವರು ಕೊಡಾ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಬೇಕು ಎಂಬ ಉದ್ದೇಶದಿಂದ ಪಟ್ಟಣದ ಉದ್ಯಮಿ ಹಾಗೂ ಸಮಾಜ ಸೇವಕ ರವಿ ಪೂಜಾರಿ ಬಡವರಿಗೆ ಬಟ್ಟೆ ಹಾಗೂ ಸಿಹಿ ಹಂಚುವ ಮೂಲಕ ಬಡವರ ಜೊತೆ ದೀಪಾವಳಿ ಹಬ್ಬ ಆಚರಿಸಿ ಮಾನವೀಯತೆ ಮೆರೆದಿದ್ದಾರೆ.
ಅಥಣಿ ಪಟ್ಟಣದ ರವಿ ಪೂಜಾರಿ ಅವರು ತಂಗಡಿ ಗ್ರಾಮದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ಗುರುತಿಸಿ ನೂರಾರು ಮಹಿಳೆಯರಿಗೆ ಉಡುಗೊರೆ ಮತ್ತು ಸಿಹಿ ತಿಂಡಿಗಳನ್ನು ನೀಡಿ ಅವರ ಜೊತೆ ದೀಪಾವಳಿಯನ್ನು ಹಬ್ಬ ಆಚರಿಸಿಕೊಂಡು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.
ಅವರ ವಾಸ ಸ್ಥಳಕ್ಕೆ ಹೋಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಬಟ್ಟೆ ವಿತರಣೆ ಮಾಡಿ ಹಬ್ಬಕ್ಕೆ ಸಿಹಿ ತಿಂಡಿಗಳನ್ನು ವಿತರಿಸಿ ದೀಪಾವಳಿ ಹಬ್ಬದ ಶುಭಾಶಯಗಳು ಹೇಳಿದರು,
ಇದೇ ಸಮಯದಲ್ಲಿ ರವಿ ಪೂಜಾರಿ ಮಾತನಾಡಿ, ತಮ್ಮ ಬಾಲ್ಯದ ಸಂದರ್ಭದಲ್ಲಿ ಕಷ್ಟಗಳನ್ನು ನೆನೆದು ನಾನು ನಿಮ್ಮ ಜೊತೆ ಹಬ್ಬವನ್ನು ಆಚರಣೆ ಮಾಡುತ್ತಿದ್ದೇನೆ, ದೀಪಾವಳಿ ಸಮಯದಲ್ಲಿ ನನಗೆ ಬಟ್ಟೆ ಇಲ್ಲದೆ ಪರದಾಡಿದ ನೆನಪು ನನಗೆ ಇನ್ನೂ ಅಚ್ಚಳಿಯದೆ ಉಳಿದಿದೆ, ಇದನ್ನು ನಾನು ಗಮನದಲ್ಲಿಟ್ಟುಕೊಂಡು ನಿಮ್ಮ ಜೊತೆ ಹಬ್ಬವನ್ನು ಆಚರಣೆ ಮಾಡಿದ್ದೇನೆ, ನನ್ನ ಸತತ ಪರಿಶ್ರಮದಿಂದ ನನಗೆ ಬರುವ ಸಂಪಾದನೆಯಲ್ಲಿ ಅಲ್ಪ ಪ್ರಮಾಣವನ್ನು ಹಣವನ್ನು ದೇವರ ಸ್ವರೂಪಿಯಾದ ನಿಮ್ಮಂತವರಿಗೆ ನಾನು ಹಂಚಿದ್ದೇನೆ, ಹಾಗೂ ನಿಮ್ಮ ಮಕ್ಕಳು ಯಾರಾದರೂ ಶಾಲೆ ಕಲಿಯುತ್ತಿದ್ದರೆ ನನ್ನಿಂದ ಏನಾದರೂ ಸಹಾಯ ಸಹಕಾರ ಬೇಕಾದರೆ ಕೇಳಿ ಎಂದು ಹೇಳಿದರು.
ಇದೇ ಸಮಯದಲ್ಲಿ ಮಹಿಳೆಯರು ರವಿ ಪೂಜಾರಿ ಅವರಿಗೆ ಆರತಿಯನ್ನು ಬೆಳಗಿಸಿ ಸಹೋದರ ಸ್ಥಾನವನ್ನು ನೀಡಿ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡಿದರು,
ನಂತರ ಅನಿತಾ ಕಾಂಬಳೆ ಎಂಬವರು ಮಾತನಾಡಿ, ಗುರುತು ಗೊತ್ತು ಇಲ್ಲದ ರವಿ ಪೂಜಾರಿ ಅವರು ನಮ್ಮಂತವರನ್ನು ಗುರುತಿಸಿ. ನಮಗೆ ದೀಪಾವಳಿ ಹಬ್ಬಕ್ಕೆ ಹಲವಾರು ಉಡುಗೊರೆಗಳನ್ನು ನೀಡಿದ್ದಾರೆ, ಇವರ ಸಾಮಾಜಿಕ ಕಳಕಳಿ ಇದೇ ರೀತಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಒಟ್ಟಾರೆಯಾಗಿ ರವಿ ಪೂಜಾರಿ ಸಾಮಾಜಿಕ ಕಾಳಜಿಯಿಂದ ಸಮಾಜ ಸೇವೆಯಲ್ಲಿ ಮುಂದುವರಿದ್ದು ಇದೇ ರೀತಿಯಲ್ಲಿ ಇವರ ಸೇವೆ ಇನ್ನಷ್ಟು ಸಮಾಜಪರ ಜನಪರ ಕಾಳಜಿ ಹೊಂದಲಿ ಎಂಬುವುದು ಎಲ್ಲರ ಆಸೆಯಾಗಿದೆ