ಬಡವರ ಅನ್ನಭಾಗ್ಯದ ಪಡಿತರ ಅಕ್ಕಿಗೂ ಕನ್ನ


ಸಂಜೆವಾಣಿ ವಾರ್ತೆ
ತೆಕ್ಕಲಕೋಟೆ, ನ.21: ಪಟ್ಟಣದ ನಿಟ್ಟೂರು ಗ್ರಾಮದಲ್ಲಿ ವ್ಯವಸಾಯ ಸೇವಾ ಸಹಕಾರ ನಿಯಮಿತದಿಂದ ವಿತರಿಸಲಾಗುತ್ತಿರುವ ಪಡಿತರ ಅಕ್ಕಿಯಲ್ಲಿ ಪಡಿತರ ಕಾರ್ಡಿನಲ್ಲಿರುವ ಸದಸ್ಯರಿಗೆ ತಲಾ ೨ ಕೆ.ಜಿ. ಅಕ್ಕಿಯನ್ನು ಕಡಿತ ಮಾಡಿ ಕೇವಲ ೮ಕೆ.ಜಿ.ಯಂತೆ ವಿತರಿಸಲಾಗುತಿದೆ.
ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ ಮುಂದೆ ಪ್ರತಿಭಟಿಸಿದರು.
ಗ್ರಾಮದಲ್ಲಿರುವ ಅಂತ್ಯೋದಯ, ಬಿ.ಪಿ.ಎಲ್ ಹಾಗೂ ಕಡುಬಡವರಿಗಾಗಿ ನೀಡುವ ಅನ್ಯಭಾಗ್ಯ ಯೋಜನೆಯಲ್ಲಿ ಪ್ರತಿ ಸದಸ್ಯರಿಗೆ ೮ಕೆ.ಜಿಯಂತೆ ಅಕ್ಕಿ ಹಾಕಿ ಇನ್ನುಳಿದ ಅಕ್ಕಿಗೆ ಕನ್ನ ಹಾಕುತ್ತಿರುವ ನಿಯಮಿತದ ಪರವಾನಗಿಯನ್ನು ರದ್ದುಗೊಳಿಸಿ ತಪ್ಪಿಸ್ಥರ ವಿರುದ್ದ ಸೂಕ್ತ ಕ್ರಮವನ್ನು ಜರುಗಿಸುವುದರೊಂದಿಗೆ ಅಕ್ರಮವನ್ನು ತಡೆಯಬೇಕೆಂದು ಗ್ರಾಮಸ್ಥರಾದ ಮುದಿಯಪ್ಪ, ಮಾರೆಪ್ಪ ಇನ್ನಿತರರು ಒತ್ತಾಯಿಸಿದರು.
ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತರಾದ ಟಿ.ಯಲ್ಲಪ್ಪ, ಕೆ.ಯು,ವೀರೇಶ, ಸಣ್ಣಭಾಷ, ಮಹಭಾಷ, ಹುಸೇನ್‌ಸಾಬ್ ಹಾಗೂ ಗ್ರಾಮಸ್ಥರು ಇದ್ದರು