ಬಡವರ ಅಕೌಂಟ್ ಗೆ ೨೫ ಸಾವಿರ ಹಣ ಪಾವತಿಸಲು ಒತ್ತಾಯ

ದಾವಣಗೆರೆ. ಮೇ.೩;  ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ನಿರ್ಲಕ್ಷ್ಯದಿಂದ ದೇಶದಲ್ಲಿ ಅತಿ ಹೆಚ್ಚು ಕೊರೋನಾ ವ್ಯಾಪಿಸಿದೆ. ಆದ್ದರಿಂದ ಎಲ್ಲಾ ಬಾಧಿತರಿಗೆ ಆಸ್ಪತ್ರೆಗಳಲ್ಲಿ ಸೂಕ್ತ ಹಾಸಿಗೆ , ಆಕ್ಸಿಜನ್ ಮತ್ತು ವೆಂಟಿಲೇಟರ್ ಒದಗಿಸಬೇಕು ಎಂದು ಬಹುಜನ ಸಮಾಜವಾದಿ ಪಕ್ಷದ ರಾಜ್ಯ ಕಾರ್ಯದರ್ಶಿಹೆಚ್.ಮಲ್ಲೇಶ್ ಹೇಳಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು  ಕರ್ನಾಟಕದಲ್ಲಿ ಯಾವುದೇ ಪೂರ್ವ ತಯಾರಿವಿಲ್ಲದೇ ಲಾಕ್ ಡೌನ್ ಮಾಡಿರುವುದರಿಂದ ಬಡವರು , ಕೃಷಿ ಕೂಲಿ ಕಾರ್ಮಿಕರು , ರಸ್ತೆ ವ್ಯಾಪಾರಿಗಳೂ , ಆಟೋ ಮತ್ತು ಟ್ಯಾಕ್ಸಿ , ಲಾರಿ , ಬಸ್ಸು ಡ್ರೈವರ್‌ಗಳು , ಟೈಲರ್‌ಗಳು , ಸವಿತಾ ಮತ್ತು ಮಡಿವಾಳ , ವಿಶ್ವಕರ್ಮ , ಹೋಟಲ್ ಮತ್ತು ಲಾಡ್ಜ್‌ಗಳ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ . ಆದ್ದರಿಂದ ಎಲ್ಲಾ ತಾಲ್ಲೂೂಕು ಹಾಗೂ ಜಿಲ್ಲೆಯ ಪ್ರತಿ ಬಡವರ ಖಾತೆಗೆ . 25,000 ರೂಗಳನ್ನು ಜಮಾ ಮಾಡಬೇಕೆಂದು ಆಗ್ರಹಿಸಿದರು.   ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಗುತ್ತಿಗೆ ದಿನಗೂಲಿ, ಕಾರ್ಮಿಕರಿಗೆ ಸರಿಯಾಗಿ ವೇತನ ಕೊಡದೆ , ವೇತನವನ್ನು ಕಡಿಮೆ ಕೊಡುತ್ತಿದ್ದು , ಸಂಬಂಧಪಟ್ಟ ಕಾರ್ಮಿಕ ಇಲಾಖೆ , ಆರೋಗ್ಯ ಇಲಾಖೆ ಅಧಿಕಾರಿಗಳು ಮೂಕ ಪ್ರೇಕ್ಷರಾಗಿದ್ದಾರೆ. ಜಿಲ್ಲಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಗುತ್ತಿಗೆ ಕಾರ್ಮಿಕರಿಗೆ ನ್ಯಾಯ ಒದಗಿಸಕೊಡಬೇಕು . ಸರ್ಕಾರದಿಂದ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ದಿನಗೂಲಿ ಕಾರ್ಮಿಕರಿಗೆ ರೂ . 10,000  ಪರಿಹಾರ ಧನ ಕೊಡುತ್ತೇವೆ ಎಂದು ಘೋಷಣೆಯಾದರು ಸಹ ಇಲ್ಲಿಯವರೆಗೂ ಕೊಟ್ಟಿಲ್ಲ ಎಂದು ಆರೋಪಿಸಿದರು.ಜಿಲ್ಲಾಸ್ಪತ್ರೆಯಲ್ಲಿ ಮಾಡುವವರಿಗೆ ಗುತ್ತಿಗೆದಾರರು ಸಮರ್ಪಕ ವೇತನ ನೀಡಬೇಕು. ಆರ್ಥಿಕ ನೆರವು ನೀಡಬೇಕು. ಕೆಲಸದ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಡಿ.ಹನುಮಂತಪ್ಪ, ಮಹಮದ್ ಕಲೀಮ್ ಇದ್ದರು.