ಬಡವರು ಮತ್ತು ನಿರ್ಗತಿಕರಿಗೆ ಅನ್ನಸಂತರ್ಪಣೆ

ಕಲಬುರಗಿ,ಜೂ.3- ಕೋವಿಡ 2ನೇ ಅಲೆಯ ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ಜಾರಿಯಾದ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ನೇತೃತ್ವದಲ್ಲಿ ಜಿಮ್ಸ್ ಆಸ್ಪತ್ರೆ ಹಾಗೂ ವಿವಿಧ ಬಡಾವಣೆಯಲ್ಲಿ ಇರುವ ಬಡವರು ಮತ್ತು ನಿರ್ಗತಿಕರಿಗೆ ಅನ್ನಸಂತರ್ಪಣೆ ಹಾಗೂ ಬಿಸಲೇರಿ ನೀರನ್ನು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು, ಜೇವರ್ಗಿ ಮತಕ್ಷೇತ್ರದ ಶಾಸಕರಾದ ಡಾ.ಅಜಯ್ ಸಿಂಗ್ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಶರಣಪ್ಪ ಮಾನೆಗಾರ್, ಸಿದ್ರಾಮ ಬೇಳಕೋಟಿ, ಮಹೇಶ ಹರಸೂರಕರ್, ಜಿಲ್ಲಾಧ್ಯಕ್ಷ ಶಿವಾನಂದ ಹೊನಗುಂಟಿ, ಪ್ರವೀಣ ಪಾಟೀಲ ಹರವಾಳ, ಡಾ.ಕಿರಣ ದೇಶಮುಖ, ಅವಿನಾಶ ಬಾಸ್ಕರ್, ಅಶ್ವಿನ್ ಸಂಕಾ, ಪರಶುರಾಮ ನಟೇಕಾರ್, ಹರ್ಷದ್ ಖಾನ್, ಉದಯ ಕುಲಕರ್ಣಿ, ಕಾಂತು ಒಂಟಿ, ಗಣೇಶ ನಾಗನಹಳ್ಳಿ ಇದ್ದರು.