ಬಡವರಿಗೆ ಸಹಾಯಾಸ್ತ: ನದಾಫ್ ಸಂಘ ನಿರ್ಧಾರ

ತುಮಕೂರು, ಏ. ೨೭- ಪವಿತ್ರ ರಂಜಾನ್ ತಿಂಗಳಿನ ವಿಶೇಷ ಅಂಗವಾಗಿ ಜಕಾತ್ ಸದ್‌ಕಾ ಅಥವಾ ಸಹಾಯ ಹಸ್ತದ ರೂಪದಲ್ಲಿ ದೇಣಿಗೆಯನ್ನು ಸಂಗ್ರಹಿಸಿ ರಾಜ್ಯದ ಅರ್ಹ ಕಡು ಬಡವರಿಗೆ, ನಿರ್ಗತಿಕರಿಗೆ ಉಪಯುಕ್ತವಾಗುವಂತಹ ಶೈಕ್ಷಣಿಕ, ಸಾಮಾಜಿಕ ಕಳಕಳಿಯ ಚಟುವಟಿಕೆಗಳಿಗಾಗಿ ಉಪಯೋಗಿಸಲು ಕರ್ನಾಟಕ ರಾಜ್ಯ ನದಾಫ್/ಪಿಂಜಾರ ಸಂಘ ತೀರ್ಮಾನಿಸಿದೆ.
ಸಮುದಾಯದ ಬಾಂಧವರು ಈ ಸತ್ಕಾರ್ಯದಲ್ಲಿ ಭಾಗಿಯಾಗಿ ಉದಾರ ಮನೋಭಾವದಿಂದ ಮೇ ೧೪ ರೊಳಗಾಗಿ ಈ ಕೆಳಗಿನ ಬ್ಯಾಂಕ್ ಖಾತೆಗೆ ತಮ್ಮ ದೇಣಿಗೆಯನ್ನು ನೇರವಾಗಿ ಜಮಾ ಮಾಡಬೇಕು ಎಂದು ಸಂಘದ ಅಧ್ಯಕ್ಷ ಬಷೀರ್ ಅಹಮದ್ ಮತ್ತು ಕಾರ್ಯದರ್ಶಿ ಮಹಮದ್ ಜಹೀದ್ ಮನವಿ ಮಾಡಿದ್ದಾರೆ.
ದೇಣಿಗೆ ಸಲ್ಲಿಸುವವರು ಬ್ಯಾಂಕ್ ಖಾತೆ ಕರ್ನಾಟದ ರಾಜ್ಯ ನದಾಫ್ ಪಿಂಜಾರ ಸಂಘ, ಬರೊಡಾ ಬ್ಯಾಂಕ್ ಶಾಖೆ, ಚಿತ್ರದುರ್ಗ ಖಾತೆ ನಂ. ೭೪೨೭೦೧೦೦೦೦೯೪೯೧ ಐಎಫ್‌ಎಸ್‌ಸಿ ಕೋಡ್ ಃಂಖಃಔಗಿಎಅಊಆUಗೆ ಜಮಾ ಮಾಡುವಂತೆ ಕೋರಿgಚಿವ ಅವರು, ಮೊ: ೯೪೪೮೨೨೬೭೦೩ ಗೆ ಸ್ಕ್ರೀನ್‌ಶಾಟ್ ತೆಗೆದು ವಾಟ್ಸಾಪ್ ಮಾಡುವಂತೆ ಮನವಿ ಮಾಡಿದ್ದಾರೆ.
೨೦೧೯-೨೦ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪಾಸಾದ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಿಯುಸಿಗೆ ಸೇರಿ ಅವರ ವಿದ್ಯಾಭ್ಯಾಸ ಮುಂದುವರೆಸಲು ರಾಜ್ಯ ಘಟಕದಲ್ಲಿ ಸ್ವೀಕರಿಸಿದ ಎಲ್ಲ ೪೨ ಅರ್ಜಿಗಳಿಗೆ ಪ್ರತಿ ವಿದ್ಯಾರ್ಥಿಗೆ ೪ ಸಾವಿರ ರೂ. ನಂತೆ ಒಟ್ಟು ೧.೬೦ ಲಕ್ಷ ರೂ. ವಿತರಿಸಲಾಗಿದೆ.
ರಾಜ್ಯ ಸಂಘದ ಇತರೆ ಹಣದಿಂದ ಒಬ್ಬ ಎಂಬಿಬಿಎಸ್ ವಿದ್ಯಾರ್ಥಿಗೆ ೫೦ ಸಾವಿರ ರೂ. ಹಾಗೂ ಒಬ್ಬ ಬಿ.ಇ. ವಿದ್ಯಾರ್ಥಿಗೆ ೩೦ ಸಾವಿರ ರೂ.ಗಳನ್ನು ಸಾಲದ ರೂಪದಲ್ಲಿ ಧನ ಸಹಾಯ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಬಾರಿ ರಂಜಾನ್ ತಿಂಗಳಲ್ಲಿ ಸಂಗ್ರಹಣೆಯಾದ ೩ ಲಕ್ಷ ರೂ. ಪೈಕಿ ೧.೪೦ ಲಕ್ಷ ರೂ.ಗಳನ್ನು ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಆಹಾರ ಧಾನ್ಯಗಳ ಕಿಟ್‌ಗಳನ್ನು ಸಮಾಜದ ಬಡವರಿಗೆ ಹಲವು ಜಿಲ್ಲೆಗಳಲ್ಲಿ ವಿತರಿಸಲಾಗಿತ್ತು. ರಾಜ್ಯ ಘಟಕ ನೀಡಿದ ಹಣದೊಂದಿಗೆ ತಾಲ್ಲೂಕು ಹಾಗೂ ಜಿಲ್ಲಾ ಘಟಕಗಳು ಸಹ ಹಣ ಸಂಗ್ರಹಿಸಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಶಬ್ಬೀರ್ ಪಾಷ, ಹುಸೇನ್ ಸಾಬ್ ಮತ್ತಿತರರು ಪಾಲ್ಗೊಂಡಿದ್ದರು.