ಬಡವರಿಗೆ ಸಹಾಯವೇ ದೇವರ ಪೂಜೆ: ಭಾರತಿ ಟಂಕಸಾಲಿ

ವಿಜಯಪುರ, ಮೇ.29-ಸಂಕಷ್ಟದಲ್ಲಿರುವವರಿಗೆ ಸಹಾಯಮಾಡುವುದು ಮಾನವೀಯ ಕಾರ್ಯವಾಗಿದ್ದು ಕೋವಿಡ್ ಮಹಾಮಾರಿ ದೇಶದಲ್ಲೆಡೆ ಆವರಿಸಿದ್ದು ಪರಿಣಾಮ ಬಹಳಷ್ಟು ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿರುವ ಈ ದಿನಮಾನದಲ್ಲಿ ಸಾಕಷ್ಟು ಜನ ಬಡವರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದ್ದು. ಆರ್ಥಿಕವಾಗಿ ಅನೇಕ ವರ್ಗಗಳು ನರಳುತ್ತಿವೆ. ಬಡವರ ಬದುಕು ದುಸ್ತರವಾಗಿದೆ.
ಇಂತಹ ಸಂದರ್ಭದಲ್ಲಿ ವಿಜಯಪುರದ ಅನೇಕ ಬಡಾವಣೆಗಳಾದ ಸುಹಾ ಕಾಲೋನಿ ಮಸೂತಿ, ಅಡಿಕಿಗಲ್ಲಿ ದರ್ಗಾ ಹಾಗೂ ಕೆಎಸ್ಸಾರ್ಟಿಸಿ ಕಾಲೋನಿಯ ಜೊತೆಗೆ ತಮ್ಮ ಸ್ವಗೃಹದಲ್ಲಿ ಅಂಗವಿಕಲರಿಗೆ, ಮತ್ತು ಕಡುಬಡವರಿಗೆ ಆಹಾರದ ಕಿಟ್ಟಗಳನ್ನು ಹಂಚುವುದರ ಮುಖಾಂತರ, ವಿಶ್ವಕರ್ಮ ಮಹಿಳಾ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷೆ ಭಾರತಿ ಟಂಕಸಾಲಿ ಮಾನವೀಯತೆಯನ್ನು ಮೆರೆದಿದ್ದಾರೆ.
ಇವರ ಈ ಸಮಾಜಮುಖಿ ಕಾರ್ಯಕ್ಕೆ ರಂಗನಾಥ್ ಸರಾಫ್ ಅಂಗಡಿಯ ಮಾಲೀಕರು, ಆರೋಗ್ಯ ಇಲಾಖೆಯ ನೌಕರರಾದ ಪೌಜಾ ಸಾದತ್ ಹಾಗೂ ಜಿಲ್ಲಾ ಕಸಾಪ ಕಾರ್ಯದರ್ಶಿ ಬಸವರಾಜ ಕುಂಬಾರ ಸಹಾಯ ಹಸ್ತ ನೀಡಿ ದ್ದಾರೆ. ನಮ್ಮ ಕೈಲಾದಮಟ್ಟಿಗೆ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ, ಸಹಾಯ ಹಸ್ತವನ್ನು ಚಾಚಿದ್ದು ಈ ಮಹಾಮಾರಿ ಬೇಗ ತೊಲಗಿ ಸಾಮಾನ್ಯ ಜನಜೀವನ ಆದಷ್ಟು ಬೇಗ ಬರುವಂತಾಗಲಿ ಎಂದರು.
ಈ ಕಾರ್ಯದಲ್ಲಿ ನೆರವಾದ ಈ ಮೂವರನ್ನು ಭಾರತಿ ಟಂಕಸಾಲೆ ಅಭಿನಂದಿಸಿದ್ದಾರೆ.