ಬಡವರಿಗೆ ಸಹಾಯಕ್ಕೆ ಮುಂದಾಗಿ : ಪಾಟೀಲ

ಧಾರವಾಡ ಜೂ.01:ಪೌರ ಕಾರ್ಮಿಕರಿಗೆ ಮತ್ತು ಆಶಾ ಕಾರ್ಯಕರ್ತರಿಗೆ ಆಹಾರ ದಿನಸಿ ಪದಾರ್ಥಗಳ ಜೊತೆಗೆ ಅಲ್ಪೊಪಹಾರ ಹಾಗೂ ಮಾಸ್ಕಗಳನ್ನು ಗ್ರಾಮೀಣ ಮಹಿಳಾ ಬ್ಲಾಕ್ ಅಧ್ಯಕ್ಷರಾದ ಶ್ರೀಮತಿ ಸುರೇಖಾ ಪೂಜಾರ ಇವರ ನೇತ್ರತ್ವದಲ್ಲಿ ವಿತರಿಸಲಾಯಿತು. ಅದರಂತೆ ವಾರ್ಡ ನಂ 3ರಲ್ಲಿ ಉಚಿತ ಸೇವಾ ವಾಹನವನ್ನು ಬಡವರಿಗಾಗಿ ಮಿಸಲಾಗಿಟ್ಟಿದ್ದು, ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅದ್ಯಕ್ಷ ಅನಿಲಕುಮಾರ ಪಾಟೀಲ ಚಾಲನೆ ನೀಡಿದರು.
ನಂತರ ಮಾತನಾಡಿದ ಪಾಟೀಲ ಇಂದು ವಿಶ್ವದಾದ್ಯಂತ ಮಹಾಮಾರಿ ಕೊರೊನಾ ಸುನಾಮಿ ರೀತಿಯಲ್ಲಿ ಅಪ್ಪಳಿಸಿದ್ದು ಸಾರ್ವಜನಿಕರ ಬದುಕು ದುಸ್ಥರವಾಗಿದೆ.ರಾಜ್ಯದಲ್ಲೂ ಕೊರೊನಾ ಜನರ ಜೀವನಕ್ಕೆ ಕುತ್ತು ತಂದಿದ್ದು ಬಡವರ ಪಾಲಿಗೆ ಕಂಟಕವಾಗಿದೆ. ಒಂದು ಕಡೆ ನಾಗರಿಕರು ಜೀವನ ಮರಣದಲ್ಲಿ ಹೊರಾಡುತ್ತಿದ್ದು, ಇನ್ನೊಂದೆಡೆ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಜೀವನೊಪಾಯ ಕಷ್ಟಕರವಾಗಿರುವ ಸಂದಿಗ್ದÀ ಪರಿಸ್ಥಿತಿಯಲ್ಲಿ ಸಂಘ ಸಂಸ್ಥೆಗಳು ಮುಂದೆ ಬಂದು ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಅದೆ ರೀತಿ ನಮ್ಮ ಕಾಂಗ್ರೆಸ ಪಕ್ಷವು ಕೂಡ ಕೆಳ ವರ್ಗದ ಜನರಿಗೆ, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬಡ ಕುಟುಂಬಗಳನ್ನು ಗುರುತಿಸಿ ಔಷದೊಪಚಾರ ಹಾಗೂ ಆಹಾರದ ಕಿಟ್‍ಗಳನ್ನು ಹುಬ್ಬಳ್ಳಿ-ಧಾರವಾಡ ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಾಡುತ್ತಿದ್ದು, ಈ ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಿರುವದನ್ನು ಶ್ಲಾಘನಿಯ. ಇದೆ ರೀತಿ ಆರ್ಥಿಕವಾಗಿ ಸಬಲರಾದಂತ ವ್ಯಕ್ತಿಗಳು ಮುಂದೆ ಬಂದು ಸಹಾಯ ಹಸ್ತ ನೀಡಬೇಕೆಂದು ಕರೆ ಕೊಟ್ಟರು.
ಈ ಸಂದರ್ಭಧಲ್ಲಿ ಮುಖಂಡÀರಾದ ವಸಂತ ಅರ್ಕಾಚಾರ್, ಸ್ವಾತಿ ಮಾಳಗಿ,ಆನಂಧ ಸಿಂಗನಾಥ, ಸತಿಶ ತುರಮರಿ, ಮಂಜುನಾಥ ಭೋವಿ, ಬಾಬಾಜಾನ ದರೂರ,ಅಶ್ಪಾಕ ಕೊಪ್ಪಳ, ಪ್ರಕಾಶ ಹಳ್ಯಾಳ, ಕಾರ್ತಿಕ ಗೊಕಾಕ, ದಯಾನಂದ ಶಿಂದೆ, ತಾಯಪ್ಪ ಪವಾರ, ಅಂಜುಮನ ಶೇಖ, ರುಕಯ್ಯಾ ಶೇಖ ಇವರೆಲ್ಲರೂ ಉಪಸ್ಥಿತರಿದ್ದರು.