ಬಡವರಿಗೆ ರೈತರಿಗೆ ಕೊರೊನಾ ಪರಿಹಾರ ಪ್ಯಾಕೇಜ್ ನೀಡಲು ಆಗ್ರಹ

ಆಳಂದ:ಜೂ.3:ಕೇಂದ್ರ ಸರಕಾರದ ಹಾಗೂ ರಾಜ್ಯ ಸರಕಾರಗಳು ಕೊರೊನಾ ಸಮಯದಲ್ಲಿ ಸಂಕಷ್ಟಕ್ಕೆ ಸಿಲಕಿದ ರೈತ ಬಡಕುಟುಂಬಗಳಿಗೆ ವಿಶೇಷ ಪ್ಯಾಕೇಜ ನೀಡಬೇಕೆಂದು ತಾಲೂಕು ಸಿಪಿಐ ಪಕ್ಷದಿಂದ ಆಳಂದ ತಹಸೀಲ್ದಾರ ಮೂಲಕ ಮನವಿ ಪತ್ರ ಸಲ್ಲಿಸಿದರು.ನಂತರ ಮಾತನಾಡಿದ ರೈತ ಮುಖಂಡ ಮೌಲ್ಲಾ ಮುಲ್ಲಾ ರೈತರಿಗೆ ಕೂಲಿ ಕಾರ್ಮಿಕರಿಗೆ ಜನರಿಗೆ ಮಾರಕ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದೆ ಒಂದು ಕಡೆ ಗಗನಕ್ಕೆ ಏರುತ್ತಿರುವ ತೈಲ ಬೆಲೆಯಿಂದ ಜನರು ತತ್ತರಿಸಿ ಹೋಗಿದ್ದಾರೆ ಇದರಿಂದ ಎಲ್ಲಾ ದಿನಸಿ ಬೆಲೆ ಏರಿ ಬಡ ಜನರು ಬಿದಿಗೆ ಬಿಳುತ್ತಿದ್ದಾರೆ.ಕೂಡಲೇ ಇದನ್ನು ನಿಯಂತ್ರಣ ಮಾಡಬೇಕೆಂದು ಕೊರೊನಾದಿಂದಾಗಿ ರೈತರು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ ಬಡವರ ಬದುಕು ಅಂತಂತ್ರವಾಗಿದೆ ಅವರಿಗೆ ವಿಶೇಷ ಪರಿಹಾರ ನೀಡಬೇಕು ಇಂದರಾ ಕ್ಯಾಂಟಿನ್ ಸೇವೆ ಎಲ್ಲ ಕಡೆ ವಿಸ್ತರಿಸಬೇಕು ಕೇರಳದ ರೀತಿ ಎಲ್ಲಾ ರೈತ ಸಾಲ ಒಂದು ಬಾರಿ ಋಣಮುಕ್ತ ಕಾಯ್ದೆ ಅಡಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪಾಂಡುರಂಗ ಮಾವಿನಕೆರೆ ಕಲ್ಯಾಣಿ ತುಕ್ಕಾಣಿ ದತ್ತಾತ್ರೇಯ ಕಬಿಡೆ ಇತರರು ಇದ್ದರು.