ಬಡವರಿಗೆ, ಮಧ್ಯಮವರ್ಗದವರಿಗೆ ಪರಿಹಾರ ನೀಡಿ : ಚಿನ್ನ

ಕಾಳಗಿ. ಮೇ.3 : ಕೊರೋನಾ ಮಹಾಮಾರಿ ಎರಡನೆಯ ಅಲೆ ದೇಶದಾದ್ಯಂತ ಉಲ್ಬಾಣಗೊಂಡಿದ್ದು ದೇಶದ ಜನತೆ ತುಂಬಾ ಭಯಭಿತಗೊಂಡಿದ್ದಾರೆ.
ಕೊರೋನಾ ವೈರಸ್ ನಿಂದ ಭಾರತ ಲಾಕ್ ಡೌನ್ ನಿಂದ ಕಾರ್ಮಿಕರು ಆಹಾರ ಮತ್ತು ದಿನನಿತ್ಯದ ಖರ್ಚಿಗಾಗಿ ಪರದಾಡುತ್ತಿದ್ದಾರೆ.
ಅಲ್ಲದೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ.
ಸರಕಾರವು ಕಾರ್ಮಿಕರಿಗೆ, ಬೀದಿ ವ್ಯಾಪಾರರಿಗೆ, ಬಡವರಿಗೆ ಪರಿಹಾರದ ರೂಪದಲ್ಲಿ ದಿನಸಿ ಸಾಮಾನುಗಳು, ಆಹಾರದ ಪಾಕೇಟಗಳು ನೀಡಬೇಕು.
ದಿಡೀರ್ ಲಾಕ್ ಡೌನ್ ನಿಂದ ಅಭಿವೃದ್ಧಿಶಿಲ ಭಾರತದಲ್ಲಿ ಜನರ ಮೇಲೆ ನೇರ ಪರಿಣಾಮ ಬೀರಿದೆ.
ಕಾರ್ಮಿಕರು, ಬಡವರು, ಮಧ್ಯಮವರ್ಗದವರೆ ಜಾಸ್ತಿ.
ದೀನನಿತ್ಯದ ಅಗತ್ಯವಸ್ತುಗಳನ್ನು ಜನರಿಗೆ ನೀಡಬೇಕು. ಹಾಗೂ ಪ್ರತಿಯೊಬ್ಬರು ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಕೈಗಳಿಗೆ ಸ್ಯಾನಿಟೈಜರ್ ಬಳಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಎಂದು ದಲಿತ ಸೇನೆ ವಿದ್ಯಾರ್ಥಿ ಒಕ್ಕೂಟ ಜಿಲ್ಲಾ ಉಪಾಧ್ಯಕ್ಷ ಮೋಹನ ಚಿನ್ನಾ ಹೇಳಿದರು.