ಬಡವರಿಗೆ, ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡಿ

ಹರಪನಹಳ್ಳಿ.ಜೂ.೪; ಲಾಕ್ಡೌನ್‌ನಿಂದ ಹಲವಾರು ಜನರು ಕೆಲಸವಿಲ್ಲದೆ ಮನೆಯಲ್ಲಿ ಕುಳಿತ್ತಿದ್ದಾರೆ. ಬಡವರು, ನಿರ್ಗತಿಕರು, ಅಂಗವಿಕಲರು, ಅಂಧ ಕಲಾವಿದರು, ವೃದ್ದರು,  ಬಹಳ ಕಷ್ಟವಿದೆ ಅವರ ನೆರವಿಗೆ ಬರುವ ಉದ್ದೇಶದಿಂದ ಇವರೆಲ್ಲರಿಗೂ ಅಗತ್ಯ ವಸ್ತುಗಳ ಆಹಾರದ ಕಿಟ್ ವಿತರಣೆ ಮಾಡಲಾಗಿದೆ ಎಂದು ಉಪನ್ಯಾಸಕ ಹೆಚ್.ಮಲ್ಲಿಕಾರ್ಜುನ ತಿಳಿಸಿದರು.  ಪಟ್ಟಣದ ಹಿರೇಕೆರೆ ಅಂಗಳದಲ್ಲಿ ಅನೇಕ ವರ್ಷಗಳಿಂದ ಬೀಡು ಬಿಟ್ಟಿರುವ ಅಲೆಮಾರಿ ಮುಸ್ಲಿಂ ಕುಟುಂಬ ದುಡಿಮೆಯಿಲ್ಲದೆ ಕಂಗಾಲಾಗಿದ್ದು, ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿರುವ ಸಂದರ್ಭದಲ್ಲಿ ಆ ಎಲ್ಲಾ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿ ಕೊರೊನ ವೈರಸ್ ಸೋಂಕು ತಡೆಗೆ ಜಾಗೃತಿ ಅಗತ್ಯ ಎಂದು ಆತ್ಮ ಸ್ಥೆöÊರ್ಯದ ನುಡಿಗಳನ್ನಾಡಿದರು. ಬಡವರು, ನಿರ್ಗತಿಕರ ನಿಮ್ಮ ಮನೆಯ ಸುತ್ತ ಇಂತವರಿದ್ದಾರೆ ಉಳ್ಳವರು, ದಾನಿಗಳು, ಸಾಮಾಜಿಕ ಕಳಕಳಿ ಹೊಂದಿರುವ ಎಲ್ಲರೂ ಈ ಸಂಕಷ್ಟದ ಸಮಯವನ್ನು ಅರ್ಥಮಾಡಿಕೊಂಡು ಕೈಲಾದಷ್ಟು ಸಹಾಯ ಮಾಡಿ ಮಾನವೀಯತೆಯನ್ನು ಮೆರೆಯಬೇಕು ಎಂದರು.  ಈ ಸಂದರ್ಭದಲ್ಲಿ ವಕೀಲ ಕೆ.ಶಿವನಾಗ, ನೃತ್ಯ ಕಲಾವಿದರಾದ ಎಂ.ಎಂ. ಚನ್ನವೀರ ಸ್ವಾಮಿ ಮತ್ತು ಹೆಚ್.ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.