ಬಡವರಿಗೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಯನ್ನುನೀಡಿದೆ: ಸಚಿವ ಎಸ್.ಎಸ್ ಮಲ್ಲಿಕಾರ್ಜುನ

ಸಂಜೆವಾಣಿ ವಾರ್ತೆ

ದಾವಣಗೆರೆ.ಮೇ.೨; ಬಡವರ ಅಭಿವೃದ್ಧಿಗಾಗಿ ಕಾಂಗ್ರೆಸ್ ಸರ್ಕಾರ ಬದ್ದವಾಗಿದ್ದು ಗ್ಯಾರೆಂಟಿ ಯೋಜನೆಗಳೇ ಸಾಕ್ಷಿ ಎಂದು ಜಿಲ್ಲಾಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜನ ತಿಳಿಸಿದರು. ನಗರದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ಗಂಗಾಮತಸ್ಥಾ ಸಮಾಜದಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸಭೆಯನ್ನುದ್ದೇಶಿ ಮಾತನಾಡಿದರು. ಬಡವರಿಗಾಗಿ ಕಾಂಗ್ರೆಸ್ ಸರ್ಕಾರ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ, ಐದು ಕೆಜಿ ಅಕ್ಕಿಯ ಜತೆಗೆ ಹಣ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, 200 ಯುನಿಟ್ ಉಚಿತ ಕರೆಂಟ್ ನೀಡಿದೆ. ದಾವಣಗೆರೆಯಲ್ಲಿ ಎಸ್.ಎಸ್ ಹೆಲ್ತ್ ಕೇರ್ ಎಂಬುದನ್ನು ಮಾಡಿ 20 ಕೋಟಿ ಡಿಪಾಸಿಟ್ ಮಾಡಿದ್ದು ಬಡ ಜನರ ಆರೋಗ್ಯ ರಕ್ಷಣೆ ಮಾಡಲಾಗುತ್ತಿದೆ. ಆರೋಗ್ಯ ಕ್ಯಾಂಪ್ ಮೂಲಕ ಮಹಿಳೆಯರಿಗೆ ಜಾಗೃತಿ ಕಾರ್ಯಾಗಾರ ನಡೆಸಲಾಗುತ್ತಿದೆ, ಲಕ್ಷಾಂತರ ರೂಪಾಯಿ ವ್ಯಚ್ಚ ತಗುಲುವ ಡಯಾಲಿಸಿ ಚಿಕಿತ್ಸೆ ಉಚಿತವಾಗಿ ಲಭಿಸುವಂತಾಗಿದೆ ಎಂದರು.ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಪಣ ತೊಟ್ಟಿದೆ. ಎಲ್ಲರೂ ಕುಟುಂಬ ಸಮೇತರಾಗಿ ಅಗಮಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಬೆಂಬಲಿಸಿ ಮತ ನೀಡಬೇಕು ಎಂದರು. ಈ ವೇಳೆ ಸಮಾಜದ ಅಧ್ಯಕ್ಷ ಗೌಡ್ರು ಮಂಜಪ್ಪ, ಮಾಗನಹಳ್ಳಿ ಪರಶುರಾಮ್, ಅರಸಿಕೆರೆ ರಾಮಣ್ಣ, ಪುಟಗನಾಳು ಮಂಜಪ್ಪ, ಬಸವರಾಜ್, ಮಲ್ಲೇಶ್, ನಾಗರಾಜ್ ಇತರರು ಉಪಸ್ಥಿತರಿದ್ದರು.