ಬಡವರಿಗೆ ಊಟದ ವ್ಯವಸ್ಥೆ

ಕಲಬುರಗಿ:ಜೂ.7: ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರಿಗೆ ನಗರದ ಜೇವರ್ಗಿ ರಸ್ತೆಯಲ್ಲಿರುವ `ಚೋಟು ಹೋಟೆಲ್’ ಪ್ರತಿದಿನ ಊಟ ನೀಡಲು ಮುಂದಾಗಿದೆ.
ರವಿವಾರ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಊಟ ನೀಡುವ ಕಾರ್ಯಕ್ಕೆ ಶರಣ ಸಂಸ್ಥಾನದ ಶ್ರೀ ಲಿಂಗರಾಜಪ್ಪ ಬಿ. ಅಪ್ಪ ಅವರು ಊಟ ನೀಡುವ ಕಾರ್ಯಕ್ಕೆ ಚಾಲನೆ ನೀಡಿದರು.
ಲಾಕ್‍ಡೌನ್ ಮುಗಿಯುವವರೆಗೂ ಪ್ರತಿದಿನ 150 ಜನರಿಗೆ ರುಚಿ-ಶುಚಿಯಾದ ಊಟ ನೀಡುವುದಾಗಿ ಚೋಟು ಹೋಟೆಲ್ ಮಾಲಿಕ ರಾಜಶೇಖರ ಬಿ. ಪಾಟೀಲ ಈ ಸಂದರ್ಭದಲ್ಲಿ ತಿಳಿಸಿದರು. ಈ ಕಾರ್ಯಕ್ಕೆ ಗೆಳೆಯರು ಸಹಕಾರ ನೀಡಿ ಕೈಜೋಡಿಸಿದ್ದಾರೆ.
ಎಂ.ಎಂ. ನಾಯಕ್, ಶರಣು ಹರವಾಳ, ಗುರು ಉದನೂರ, ಗುರಪ್ಪ ಮಂಕಣಿ, ಶಿವಾನಂದ ಬಿ. ಪಾಟೀಲ್, ವಿನೋದ ಚಿಕ್ಕಮಠ, ರಾಘವೇಂದ್ರ ಉಪ್ಪಳ, ಮಹಾಂತೇಶ, ಅಣ್ಣಾರಾಯ, ಪವನ ಮೇತ್ರಿ, ಶರಣಗೌಡ ಪಾಟೀಲ ಮತ್ತಿತರರು ಇದ್ದರು.