ಬಡವರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಫೆ.27: ಪಟ್ಟಣದ ನಾಗರಾಜ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀನಿವಾಸ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ರಿಸರ್ಚ್ ಸೆಂಟರ್ ಮಂಗಳೂರು ಇವರ ವತಿಯಿಂದ ಎಲ್ ಪರಮೇಶ್ವರ್ ಜನ ಸೇವಾ ಟ್ರಸ್ಟ್ ಹಗರಿಬೊಮ್ಮನಹಳ್ಳಿ ಇವರ ಸಹಯೋಗದಲ್ಲಿ  ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಶಿಬಿರಕ್ಕೆ  ನಿವೃತ್ತ ಆರ್ ಟಿ ಓ ಎಲ್ ಪರಮೇಶ್ವರ್ ದೀಪದ ಜ್ಯೋತಿಯನ್ನು  ಬೆಳಗಿಸುವುದರ ಮೂಲಕ ಚಾಲನೆಯನ್ನು ನೀಡಿದರು.
 ನಂತರ ಮಾತನಾಡಿದ ಅವರು ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ ಆರೋಗ್ಯದ ಕಡೆ ಗಮನವನ್ನು ನೀಡಬೇಕು ಬಡ ರೈತಾಪಿ ವರ್ಗದವರಿಗೆ ಆರೋಗ್ಯದ ಸಮಸ್ಯೆ ಎದುರಾದರೆ ಹಣದ ವೆಚ್ಚ ಸಾಕಷ್ಟು ಬೇಕಾಗುತ್ತದೆ ಹಾಗಾಗಿ ಬಡವರಿಗಾಗಿ ಈ ಉಚಿತ ಶಸ್ತ್ರ ಚಿಕಿತ್ಸೆ ಮತ್ತು ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ, ಇದನ್ನು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಿ, ಶಸ್ತ್ರ ಚಿಕಿತ್ಸೆ ಮಾಡಿಸುವವರಿಗೆ ಉಚಿತವಾಗಿ ಬಸ್ ಮತ್ತು ಊಟದ ಜೊತೆಗೆ ಮಂಗಳೂರಿನಲ್ಲಿ ಉಚಿತ ಶಸ್ತ್ರ ಚಿಕಿತ್ಸೆಯ ಸೌಲಭ್ಯ ಒದಗಿಸಲಾಗಿದೆ, ಈಗಾಗಲೇ ಕೋಗಳಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಜನರನ್ನು ಶಸ್ತ್ರ ಚಿಕಿತ್ಸೆಗೆ ಬಸ್ಸಿನಲ್ಲಿ ಮಂಗಳೂರಿಗೆ  ಕರೆದುಕೊಂಡು ಹೋಗಲಾಗುತ್ತಿದೆ ಎಂದು ತಿಳಿಸಿದರು.
 ನಂತರ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಕೊಟ್ರೇಶ್ ಮಾತನಾಡಿ ಆರ್‌ಟಿಓ ಪರಮೇಶ್ವರಪ್ಪ  ನೌಕರಿಯಲ್ಲಿರುವಾಗ ಅನೇಕ ಜನರಿಗೆ ಸಹಾಯವನ್ನು ಮಾಡಿದ್ದಾರೆ. ಈಗ ರಾಜಕೀಯದಲ್ಲಿ ತಮ್ಮ ಒಲವನ್ನು ತೋರಿಸಿ ಇದರಲ್ಲೂ ಸಹ  ಸಂಕಷ್ಟದಲ್ಲಿದ್ದ ಸಾರ್ವಜನಿಕರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.
 ನಂತರ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ್ ಮಾತನಾಡಿ ಈಗಿನ ಕಾಲದಲ್ಲಿ ನಮ್ಮ ದೇಹಕ್ಕೆ ಉಪಯುಕ್ತವಾದ ಪ್ರೊಟೀನ್ ಉಳ್ಳ ಆಹಾರ ಮುಖ್ಯ, ಆದರೆ ದೇಹಕ್ಕೆ ಪ್ರೊಟೀನ್ ಅಂಶಗಳು ಸಿಗುವುದು ವಿರಳವಾಗಿದೆ, ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಸಮಸ್ಯೆ ಕಂಡು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
  ಈ ಸಂದರ್ಭದಲ್ಲಿ ಡಾ. ಶ್ರೀನಿವಾಸ್, ಡಾ. ವೀರೇಂದ್ರ ,ಡಾ. ಆದರ್ಶ, ಡಾ. ಪೂರ್ಣಿಮಾ, ಡಾ. ಅಮೃತ, ಬಾ. ಅನುಷಾ, ಸುಭಾಷ್, ಸುಭಾನ್ ಭೀಮಣ್ಣ, ಪ್ರಹ್ಲಾದ್ ಹಾಗೂ ಇತರರು ಉಪಸ್ಥಿತರಿದ್ದರು