ಬಡವರಿಗೆ ಉಚಿತ ಆಮ್ಲಜನಕ ವ್ಯವಸ್ಥೆ

ಹುಮನಾಬಾದ್:ಮೇ.28: ‘ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದಾಗ ಮತ್ತೆ ಆಮ್ಲಜನಕದ ಅವಶ್ಯಕತೆ ಇರುವ ಬಡ ಕುಟುಂಬಗಳಿಗೆ ಉಚಿತವಾಗಿ ಆಮ್ಲಜನಕ ನೀಡಲಾಗುವುದು’ ಎಂದು ಬಿಜೆಪಿ ಮುಖಂಡ ಡಾ.ಸಿದ್ದು ಪಾಟೀಲ ತಿಳಿಸಿದ್ದಾರೆ.

‘ವೈಯಕ್ತಿಕವಾಗಿ ಕಲಬುರ್ಗಿಯಿಂದ 20 ಆಮ್ಲಜನಕ ಸಿಲಿಂಡರ್‌ಗಳನ್ನು ಖರೀದಿಸಲಾಗಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಸೂಚಿಸುವ ಬಡಕುಟುಂಬಗಳಿಗೆ ಆಮ್ಲಜನಕವನ್ನು ಉಚಿತವಾಗಿ ನೀಡಲಾಗುವುದು. ಆಮ್ಲಜನಕದ ಅವಶ್ಯಕತೆ ಇದ್ದವರು ಸುನೀಲ್ ಪಾಟಿಲ್ ಅವರ ಮೊ: 8548966666, ಶ್ರೀನಾಥ ದೇವಣಿ 9986709200, ಸುನೀಲ್ ಪತ್ರಿ 8123111597 ಅವರನ್ನು ಸಂಪರ್ಕಿಸಬಹುದು’ ಎಂದು ಡಾ.ಸಿದ್ದು ಪಾಟೀಲ ಪ್ರಕಟಣೆಯಲ್ಲಿ ಕೋರಿದ್ದಾರೆ.