ಬಡವರಿಗೆ ಆಹಾರ ದಾನ ಮುಟ್ಟಿಸುವುದು ನಮ್ಮ ಧರ್ಮ:ಶಾಸಕ ಹಾಲಪ್ಪ ಆಚಾರ್

ಕುಕನೂರು, ಜೂ.09: ಪ್ರಸ್ತುತ ಕೊವಿಡ ಹಿನ್ನಲೆಯಲ್ಲಿ ಬಡವರು ಹಸಿವಿನಿಂದ ತೊಂದರೆ ಪಡುವ ಉದ್ದೇಶದಿಂದ ತಾವು ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕಿನಲ್ಲಿ ಸುಮಾರು ಹತ್ತು ಸಾವಿರ ಆಹಾರ ಧಾನ್ಯದ ಕಿಟ್ಟುಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಹಾಲಪ್ಪ ಆಚಾರ್ ನುಡಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಗೆ ಹಸ್ತಾಂತರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಸರ್ಕಾರ ಜನಸಾಮಾನ್ಯರ ಆರೋಗ್ಯದ ಅಭಿವೃದ್ಧಿಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ ಅದೇ ರೀತಿ ನಮ್ಮ ಕ್ಷೇತ್ರದಲ್ಲಿ ಮುಂಜಾಗ್ರತೆ ಕ್ರಮ ಕೈಗೊಂಡ ಪರಿಣಾಮ ಸಾಕಷ್ಟು ಸೋಂಕಿತರು ಗುಣಮುಖರಾಗಿ ಹೊರಬರುತ್ತಿರುವುದು ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವಾಗಿದೆ ಬರುವ ಮುಂದಿನ ದಿನಮಾನಗಳಲ್ಲಿ ಕುಕನೂರು ಸರಕಾರಿ ಆಸ್ಪತ್ರೆಯನ್ನು ಆಧುನೀಕರಣಗೊಳಿಸಲು ಪ್ರಯತ್ನಿಸುತ್ತಿದ್ದೇನೆ ಆದರೂ ನಮ್ಮ ಕಾರ್ಯಕರ್ತರಾದ ಗಣೇಶ್ ನಾಯಕ್. ರಾಜೇಸಾಬ ನರೇಗಲ್. ನಿಧನರಾಗಿರುವುದು ತುಂಬಲಾರದ ನಷ್ಟವಾಗಿದೆ ಹಲವಾರು ಯುವಕರಿಗೆ ಕೊವಿಡ ೧೯ರ ಎರಡನೇ ಅಲೆಯ ಬಗ್ಗೆ ಜಾಗೃತಿ ಮೂಡಿಸುತ್ತ ಕಿಟ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಂಭು ಜೋಳದ್. ಅಧ್ಯಕ್ಷ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗನ್ನಾಥ್ ಪಾಟೀಲ್ . ತಹಶೀಲ್ದಾರ್ ಕಿರಣ್ ಕುಮಾರ್ ಕುಲಕರ್ಣಿ. ಮುಖಂಡ ರಾದ ಶಿವಕುಮಾರ ನಾಗಲಾಪುರಮಠ . ಬಸನಗೌಡ ತೊಂಡಿಹಾಳ .ವೀರಣ್ಣ ಹುಬ್ಬಳ್ಳಿ . ಕೊಟ್ರಪ್ಪ ಮುತ್ತಾಳ . ಸಿದ್ದು ಉಳ್ಳಾಗಡ್ಡಿ . ಭಾಜಪ ಅಧ್ಯಕ್ಷ ಬಸವರಾಜ ಹಾಳಕೇರಿ. ಕರಬಸಯ್ಯ ಬಿನ್ನಾಳ. ಶಶಿ ಭಜೆಂತ್ರಿ ಮತ್ತಿತರರು ಇದ್ದರು.