ಬಡವರಿಗೆ ಆಹಾರ ಕಿಟ್ ವಿತರಣೆ

ಬೀದರ:ಜೂ.8: ನಗರದ ಅಕ್ಕಮಹಾದೇವಿ ಕಾಲೇಜು ಹಿಂದುಗಡೆ ಇರುವ ಅಕ್ಕಮಹಾದೇವಿ ಬಡಾವಣೆಯಲ್ಲಿ ಆರ್ಬಿಟ್ ಸಂಸ್ಥೆ, ವೀರಭದ್ರೇಶ್ವರ ಏಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ಹಾಗೂ ರೈಜಿಂಗ್ ಹ್ಯಾಂಡ್ ಯುತ್ ಆರಗ್ನೈಜೆಶನ್‍ಗಳ ಸಹಯೋಗದಲ್ಲಿ ಅಲ್ಲಿಯ ಬಡವರಿಗೆ ಉಚಿತ ಆಹಾರ ಸಾಮಗ್ರಿಗಳುಳ್ಳ ಕಿಟ್ ವಿತರಿಸಲಾಯಿತು.É್ಕೀಂದ್ರ ಸರ್ಕಾರದ ಜಾಗೃತಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ದೇಶಕ್ಕೆ ಸಂಕಟ ಬಂದಾಗಲೆಲ್ಲ ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದಷ್ಟೇ ಜವಾಬ್ದಾರಿ ಕಾರ್ಯ ಮಾಡುತ್ತಿವೆ. ಬಡವರಿಗೆ, ಕೂಲಿ ಕಾರ್ಮಿಕರು ಸೇರಿದಂತೆ ಸಂಕಷ್ಟದಲ್ಲಿರುವ ಪ್ರತಿಯೊಬ್ಬರಿಗೆ ಆಹಾರ ಸಾಮಗ್ರಿ ವಿತರಣೆ, ಕೋವಿಡ್ ಜಾಗೃತಿ, ಲಸಿಕೆ ಸೇರಿದಂತೆ ಇತರೆ ಕಾರ್ಯ ಚಟುವಟಕೆಗಳನ್ನು ಹಮ್ಮಿಕೊಂಡು ಕೋವಿಡ್ ಮುಕ್ಯ ದೇಶಕ್ಕೆ ಕೈ ಜೋಡಿಸುತ್ತಿವೆ. ಸಂಘ, ಸಂಸ್ಥೆಗಳು ಮಾಡುತ್ತಿರುವ ಕಾರ್ಯಕ್ಕೆ ಎಲ್ಲ ಸಮುದಾಯಗಳು ಮತ್ತು ಸರ್ಕಾರ ಸ್ಪಂದಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವೀರಭದ್ರೇಶ್ವರ ಏಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ ಬೆಳಕೋಟೆ ಮಾತನಾಡಿ, ಕಳೆದ ವರ್ಷದಿಂದ ಕೊರೊನಾ ಬಂದಾಗಿನಿಂದಲೂ ನಮ್ಮ ಸಂಸ್ಥೆ ವತಿಯಿಂದ ಸಾವಿರಾರು ಬಡ ಕುಟುಂಬಗಳಿಗೆ ಉಚಿತ ಆಹಾರ ಸಾಮಗ್ರಿಗಳ ವಿತರಣೆ, ಕೋವಿಡ್ ಜಾಗೃತಿ ಹಾಗೂ ಕೋವಿಡ್ ಲಸಿಕೆ ಪಡೆಯುವಂತೆ ನಿರಂತರ ಮಾಹಿತಿ ನೀಡಲಾಗುತ್ತಿದೆ. ಸಾರ್ವಜನಿಕರು ಕೋವಿಡ್ ಲಸಿಕೆ ಪಡೆದು ತಮ್ಮ ಹಾಗೂ ತಮ್ಮ ಕುಟುಂಬದವರ ಸುರಕ್ಷತೆಗೆ ಮುಂದಾಗುವಂತೆ ಕರೆ ಕೊಟ್ಟರು.

ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರ್ಮೆ, ಸತೀಶ ವಾಲಿ, ಕುಮಾರ ಸ್ವಾಮಿ, ಕಿಶೋರಕುಮಾರ ಸೇರಿದಂತೆ ಇತರರು ಸೇರಿ ಬಡವರಿಗೆ ಉಚಿತ ಆಹಾರದ ಕಿಟ್‍ಗಳು ವಿತರಿಸಿದರು.

ಅಮರ ರಾಸುರೆ ಸರ್ವರನ್ನು ಸ್ವಾಗತಿಸಿದರು. ಬಡಾವಣೆಯ ಹಿರಿಯರು, ಜಂಟಿ ಸಂಸ್ಥೆಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.