ಬಡವರಿಗಿಂತ ಶ್ರೀ ಮಂತ ಭಕ್ತರ ನುಡಿ ಮತ್ತು ನಡೆ ಕನಿಷ್ಟ: ಶಿವರಾಜ ಅಂಡಗಿ

ಕಲಬುರಗಿ:ಏ.29: ದೇವರಿಗೆ ಒಲಿಸಿಕೊಳ್ಳಲು ಎನ್ನೆಲ್ಲಾ ಹರಸಾಹಸ ಮಾಡುತ್ತೆವೆಯೇೂ ಆದರೂ ಆ ದೇವರು ಒಲಿಯುತ್ತಾನೊ ಇಲ್ಲವೋ ಗೊತ್ತಿಲ್ಲ ಕಣ್ಣಿನ ಕಾಣದ ಅಗೊಚರ ಶಕ್ತಿಯ ಮೇಲೆ ಬಾರಿ ವಿಶ್ವಾಸ ತೊರಿಸುವ ಭಕ್ತರಿಗೆ ಕೇಳಿಕೊಳ್ಳುವುದೆನೆಂದರೆ ಸರ್ಕಾರದ ಆದೇಶ ಪಾಲಿಸಿದರೆ ನಮಗೆ ಒಳ್ಳೆಯದಾಗುತ್ತದೆ ಎಂದು ಕಣ್ಣಿಗೆ ಕಾಣ್ಣುತ್ತಿದ್ದರು ಅದನ್ನು ಪಾಲಿಸಲು ಏಕೆ ಆಗುತ್ತಿಲ, ತಿಳಿಯುತ್ತಿಲ್ಲ?ಎಂದು ವಿದ್ಯಾನಗರ ವೇಲಫೇರ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಗುಡಿ ಲಾಕ್ ಡೌನ್ ಮಾಡಿ ಎರಡೇ ದಿನಗಳಲ್ಲಿ ಅದೆಷ್ಟು ಶ್ರೀ ಮಂತಭಕ್ತರು ನಮಗೆ ಶಪಿಸುತ್ತಿರುವುದು, ಬಯ್ಯುತ್ತಿರುವುದು ಕೇಳಿದರೆ ಬಡಭಕ್ತರ ಮತ್ತು ಕೂಲಿ ಕಾರ್ಮಿಕ ಮೇಲಿನ ಗೌರವ ಹೇಚ್ಚಾಗುತ್ತಿದೆ ಏಕೆಂದರೆ ಪ್ರತಿನಿತ್ಯ ಕೂಲಿ ನಾಲಿ ಮಾಡಿಯೇ ಅವರ ಹೊಟ್ಟೆ‌ ತುಂಬಿಸಿಕೊಳ್ಳುವ ಲಕ್ಷಾಂತರ ಕಾರ್ಮಿಕರು ಲಾಕ್ ಡೌನ್ ದಿಂದ ಅದೆಷ್ಟು ಕಷ್ಟ ಅನುಭವಿಸುತ್ತಿದಾರೊ ಆ ದೇವರೆ ಬಲ್ಲ ಎಷ್ಟು ವರ್ಷ ಗಳಾದರೂ ಕೂತು ಊಂಡರು ಕಡಿಮೆ ಬಿಳದಂಥಾ ಸಂಪತ್ತು ಇದ್ದರೂ ಜನರ ಕಲ್ಯಾಣಕ್ಕಾಗಿಯೇ ಜಾರಿಮಾಡಿದ ಲಾಕ್ ಡೌನ್ ಪ್ರಶ್ನೆ ಮಾಡುತ್ತಿರುವ ಶ್ರೀ ಮಂತ ಭಕ್ತರ ಪ್ರಶ್ರೆ ನ್ಯಾಯವೇ ಅಷ್ಟೇ ಅಲ್ಲ ನಾವು ಸಹ ಗುಡಿಗೆ ದೇಣಿಗೆ ಕೊಟ್ಟಿದ್ದೆವೆ ನಮಗೆ ದರ್ಶನಕ್ಕೆ ಅವಕಾಶ ಇಲ್ಲ ಎಂದರೆ ಹೇಗೆ ಯ್ಯಾಕೆ ಗುಡಿ ಲಾಕ್ ಮಾಡಿದ್ದಿರಿ ಎಂದು ಕೇಳುವ ಇವರು ನುಡಿ,ನಡೆ ಎಷ್ಟು ಕನಿಷ್ಟ ವಾದ್ದುದ್ದು ಎನ್ನುತ್ತಾರೆ ಅಂಡಗಿ ಅವರು.ಎಷ್ಟೋ ಹೇಳಿದರು ದಿನ ದಿನಕ್ಕೆ ಗುಡಿಗೆ ಬರುವ ಭಕ್ತರು ಹೇಚ್ಚಾಗುತ್ತಿರುವುದರಿಂದ ಕರೊನಾ ಮಾಹಾಮಾರಿ ಎರಡನೆಯ ಅಲೆ ಅತ್ಯಂತ ವೇಗವಾಗಿ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಜನಹಿತಕ್ಕಾಗಿ ಕೈಗೊಂಡ ಕಟ್ಟುನಿಟ್ಟಿನ ಲಾಕ್ ಡೌನ್ ಕ್ರಮದ ಆದೇಶ ಪಾಲನೆಯಲ್ಲಿ ನಾವು ನಮ್ಮ ವಿದ್ಯಾನಗರ ಶ್ರೀ ಮಲ್ಲಿಕಾರ್ಜುನ ಗುಡಿಯ ಮೂರು ಮಾಹಾ ದ್ವಾರಗಳು ಕೀಲಿ ಹಾಕುವ ಮೂಲಕ ಲಾಕ್ ಡೌನ್ ಮಾಡಿದ್ದೆವೆ.
ವಿದ್ಯಾನಗರ ವೇಲಫೇರ ಸೊಸೈಟಿ ಅದ್ಯಕ್ಷ ಮಲ್ಲಿನಾಥ ದೇಶಮುಖ ಅವರ ನೇತ್ರತ್ವದಲ್ಲಿ
ಸರ್ಕಾರದ ಹೊರಡಿಸಿದ 14 ದಿನ ಕಟ್ಟು ನಿಟ್ಟಿನ ಲಾಕ್ ಡೌನ್ ಆದೇಶ ಜಾರಿಗೊಳಿಸಿದ್ದೆವೆ.ಕಾಲೇೂನಿಯ ಸದಸ್ಯರಿಗೂ ಹಾಗೂ ಸಾರ್ವಜನಿಕರಿಗೂ ತಮ್ಮ ತಮ್ಮ ಮನೆಯಲ್ಲಿಯೇ ಇದ್ದು ಸ್ಯಾನಿಟೈಜರ ಬಳಸಿ, ಮಾಸ್ಕ ಹಾಕಿಕೊಂಡು,ಸಾಮಾಜಿಕ ಅಂತರ ಕಾಪಾಡಲು ವಿನಂತಿ ಮಾಡಿದ್ದಾರೆ.