ಬಡವರಿಗಾಗಿ ಕೋಟ್ಯಂತರ ರೂ ಖರ್ಚು ಮಾಡಿದ ನಟ ಸೋನು ಸೂದ್

ಮುಂಬೈ, ಜು ೩೦- ನಿಜ ಜೀವನ ನಾಯಕನಾಗಿರುವ ಬಹುಬಾಷಾ ನಟ ಸೋನು ಸೂದ್ ಕೊರೊನಾ ಲಾಕ್‌ಡೌನ್ ಸಮಯದಿಂದ ಇದುವರೆಗೂ ಬರೋಬ್ಬರಿ ೧೫ ಕೋಟಿ ರೂ ಖರ್ಚು ಮಾಡುವ ಮೂಲಕ ಬಡವರಿಗೆ ನೆರವಾಗಿದ್ದಾರೆ ಎನ್ನಲಾಗಿದೆ.
ನಟ ಸೋನು ಸೂದ್ ಕಷ್ಟದ ಸಮಯದಲ್ಲಿ ಸಾವಿರಾರು ಜನರಿಗೆ ನೆರವಾದರು.. ವಲಸೆ ಕಾರ್ಮಿಕರು ಊರು ಸೇರಲು ನೆರವಾದರು.. ಕೊರೊನಾ ವಾರಿಯರ್ಸ್ ಗಾಗಿ ತಮ್ಮ ಹೊಟೆಲ್ ಅನ್ನೇ ಬಳಸಿಕೊಳ್ಳಿ ಎಂದಿದ್ದರು..
ಇಷ್ಟೆಲ್ಲಾ ಸಹಾಯ ಮಾಡುತ್ತಿರುವ ಸೋನು ಸೂದ್ ಅವರ ಆಸ್ತಿ ಎಷ್ಟಿದೆ ಎಂಬ ಕುತೂಹಲ ಇದ್ದೇ ಇರುತ್ತದೆ
ಹೌದು ನಟ ಸೋನು ಅವರು ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.. ಆನಂತರ ಎಲ್ಲರಿಗೂ ತಿಳಿದಿರುವಂತೆ ಅರುಂಧತಿ ಸಿನಿಮಾ ಅವರಿಗೆ ದೊಡ್ಡ ಬ್ರೇಕ್ ನೀಡಿತು..
ಆ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡರು.. ಕನ್ನಡದಲ್ಲಿ ವಿಷ್ಣುವರ್ಧನ ಸಿನಿಮಾ ಹಾಗೂ ಕುರುಕ್ಷೇತ್ರ ಸಿನಿಮಾದಲ್ಲಿ ಅರ್ಜುನನಾಗಿ ಕಾಣಿಸಿಕೊಂಡಿದ್ದಾರೆ.. ಇನ್ನು ಸೋನುಸೂದ್ ಅವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎರಡು ಕೋಟಿ ರೂಪಾಯಿಗಳು ಆಗಿದೆ.
ಸೋನು ಸೂದ್ ಅವರು ಚಿತ್ರರಂಗದಿಂದ ಗಳಿಸಿದ ಬಳಿಕ ಅವರು ಮುಂಬೈ ನಲ್ಲಿ ಶಕ್ತಿ ಸಾಗರ್ ಎಂಬ ಹೋಟೆಲ್ ಉದ್ಯಮವನ್ನು ಪ್ರಾರಂಭಿಸಿದರು. ಅವರ ತಂದೆಯ ಹೆಸರು ಶಕ್ತಿ ಸಾಗರ್..
ಅದೇ ಹೆಸರಿನಲ್ಲಿ ನಂತರ ಸಿನಿಮಾ ನಿರ್ಮಾಣ ಸಂಸ್ಥೆಯೊಂದನ್ನೂ ಸಹ ಪ್ರಾರಂಭಿಸಿದರು. ಸದ್ಯ ಅವರ ಒಟ್ಟು ಆಸ್ತಿಯ ಮೌಲ್ಯ ೧೩೦ ಕೋಟಿ ಎನ್ನಲಾಗಿದೆ.
ಆದರೆ ಅದಾಗಲೇ ಕೊರೊನಾ ಸಮಯದಿಂದೀಚೆಗೆ ಲಾಕ್ ಡೌನ್ ಹಾಗೂ ಆನಂತರವೂ ಬಡ ಜನರಿಗೆ ನೆರವಾಗುವ ಸಲುವಾಗಿ ೧೫ ಕೋಟಿ ಅಷ್ಟು ಹಣವನ್ನು ಖರ್ಚು ಮಾಡಿದ್ದಾರೆ ಎನ್ನಲಾಗಿದೆ.
ಸೋನು ಸೂದ್ ಅವರ ಈ ಸಮಾಜ ಸೇವೆಗೆ ಪತ್ನಿಯ ಸಂಪೂರ್ಣ ಸಹಕಾರವಿದ್ದು ಬೆಂಬಲವಾಗಿ ನಿಂತಿದ್ದಾರೆ.