ಬಡವರಾಗಿ ಹುಟ್ಟಿ ಬಡವರಾಗಿ ಬದುಕಬಾರದು

ಬೆಂಗಳೂರು,ಜು. ೨೨- ಅಖಿಲ ಕರ್ನಾಟಕ ವಿ.ಸೋಮಣ್ಣ ಅಭಿಮಾನಿ ಬಳಗದ ವತಿಯಿಂದ ವಸತಿ ಸಚಿವರಾದ ವಿ.ಸೋಮಣ್ಣರವರು ಮತ್ತು ರಾಜ್ಯ ಬಿ.ಜೆ.ಪಿ.ಯುವ ಮುಖಂಡರಾದ ಡಾ. ಅರುಣ್ ಸೋಮಣ್ಣರವರ ಹುಟ್ಟುಹಬ್ಬದ ಪ್ರಯುಕ್ತ ಸುಮನಹಳ್ಳಿ ಪರಿಹಾರ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಅಗತ್ಯ ವಸ್ತುಗಳು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಸತಿ ಸಚಿವರಾದ ವಿ.ಸೋಮಣ್ಣ, ರಾಜ್ಯ ಬಿ.ಜೆ.ಪಿ.ಯುವ ಮುಖಂಡರಾದ ಡಾ.ಅರುಣ್ ಸೋಮಣ್ಣ, ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ, ಬಿ.ಜೆ.ಪಿ. ಮುಖಂಡರಾದ ವೇಣುಗೌಡ ನಿರಾಶ್ರಿತರಿಗೆ ಅಗತ್ಯ ವಸ್ತುಗಳಾದ ಹಾಸಿಗೆ, ಬೆಡ್ ಶೀಟ್, ಸೋಪ್, ಹಣ್ಣುಗಳು ದಿನಬಳಕೆ ವಸ್ತುಗಳನ್ನು ವಿತರಿಸಿದರು. ವಸತಿ ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ನಡೆದಾಡುವ ದೇವರು ಶ್ರೀ ಶಿವಕುಮಾರ ಮಹಾಸ್ವಾಮೀಜಿ ಮತ್ತು ಬಾಲಗಂಗಾಧರನಾಥ ಸ್ವಾಮೀಜಿರವರು ಆದರ್ಶ ಸಿದ್ದಾಂತ, ಮಾರ್ಗದರ್ಶನದಲ್ಲಿ ಜನರ ಸೇವೆ ಮಾಡುತ್ತಿದ್ದೇನೆ.
ಬಡವರಾಗಿ ಹುಟ್ಟಿರಬಹುದು ಅದರೆ ಬಡವರಾಗಿ ಜೀವನ ಸಾಗಿಸಬಾರದು ಎಂಬ ಉದ್ದೇಶದಿಂದ ನಮ್ಮ ಪ್ರತಿಯೊಂದು ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ಸಮಾಜವನ್ನು ಸಮಾಜದ ಮುಖ್ಯವಾಹಿನಿ ತರಬೇಕು ಅವರ ಸಹ ಸಮಾಜದಲ್ಲಿ ಉತ್ತಮ ಜೀವನ ಸಾಗಿಸಬೇಕು ಎಂದು ವಸತಿ ಇಲಾಖೆ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಜೀವನಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಶಿಕ್ಷಣ,ಆರೋಗ್ಯ ಪರಿಸರದ ಬಗ್ಗೆ ಗಮನಹರಿಸಿ ಗರ್ಭಿಣಿ ಸ್ತ್ರಿಯರು ಆರೋಗ್ಯ ತಪಾಸಣೆ ಮತ್ತು ಹೆರಿಗೆಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿತು.
ನಮ್ಮ ಕ್ಷೇತ್ರದಲ್ಲಿ ರೆಫರಲ್ ಆಸ್ಪತ್ರೆಯಿಂದ ೫೦೦ರೂಪಾಯಿ ವೆಚ್ಚದಲ್ಲಿ ಗರ್ಭಿಣಿ ಸ್ತ್ರಿಯರ ಚಿಕಿತ್ಯೆ,ತಪಾಸಣೆ ಮತ್ತು ಪ್ರಸವ ಮಾಡಿಸಲಾಗುತ್ತಿದೆ
ಪ್ರಾಥಮಿಕ ಆರೋಗ್ಯ ಕೇಂದ್ರ ಎಲ್ಲ ವಾರ್ಡ್ ಗಳಲ್ಲಿ ಸ್ಥಾಪನೆ.ಪ್ರತಿ ವಾರ್ಡ್ ನಲ್ಲಿ ಯೋಗ ಕೇಂದ್ರ,ವ್ಯಾಯಾಮ ಕೇಂದ್ರ ಆರಂಭಿಸಲಾಗಿದೆ.ಶಿಕ್ಷಣದ ಬಗ್ಗೆ ಗಮನಹರಿಸಿ ಪ್ರತಿ ವಾರ್ಡ್ ನಲ್ಲಿ ಹೈಟೆಕ್ ಗ್ರಂಥಾಲಯ ಮತ್ತು ಐ.ಎ.ಎಸ್.ಮತ್ತು ಐ.ಪಿ.ಎಸ್.ಹಾಗೂ ಕೆ.ಎ.ಎಸ್.ಪರೀಕ್ಷೆ ಕೇಂದ್ರ ಆರಂಭಿಸಲಾಗಿದೆ.
ಪರಿಸರ ಉಳಿಸಲು ೫೦ಕ್ಕೂ ಹೆಚ್ಚು ಉದ್ಯಾನವನ ನವೀಕರಣ ಮಾಡಲಾಗಿದೆ ಎಂದು ತಿಳಿಸಿದರು.

ನಿರಾಶ್ರಿತರ ಪರಿಹಾರ ಕೇಂದ್ರದ ಕಾರ್ಯದರ್ಶಿ ಅರ್ಚನಾ,ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಾಗೇಶ್ ಹಾಗೂ ಬಿ.ಜೆ.ಪಿ.ಯುವ ಮುಖಂಡ ಬಿ.ಎಂ.ರಾಜಪ್ಪ, ಕನಕಪುರದ ರಾಜಣ್ಣರವರು ಭಾಗವಹಿಸಿದ್ದರು.