ಬಡವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅಭಿವೃದ್ದಿ ಪಥದತ್ತ ಮುನ್ನಡೆಸುವ ಸಂಕಲ್ಪ: ವಿ.ಸೋಮಣ್ಣ

ಚಾಮರಾಜನಗರ, ಏ.22:- ಬಡವರನ್ನು ಸಮಾಜದ ಮುಖ್ಯವಾಹಿನಿಗೆ ಕೊಂಡೊಯ್ಯುವ ಕಾರ್ಯಕ್ರಮಗಳನ್ನು ರೂಪಿಸಿ. ಅವರನ್ನು ಅಭಿವೃದ್ದಿ ಪಥದತ್ತ ಮುನ್ನಡೆಸಬೇಕು ಎಂಬುದು ನನ್ನ ದೃಢವಾದ ಸಂಕಲ್ಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದರು.
ತಾಲೂಕಿನ ಮಾದಾಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮಾದಾಪುರ, ಬದನಗುಪ್ಪೆ, ಮಂಗಲ, ಬೋಗಾಪುರ ಸೇರಿದಂತೆ 21 ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದ ಅವರು, ಬಡವ ಬಡವನಾಗಿ ಉಳಿಯಬಾರದು. ಬಡವನ ಮಕ್ಕಳು ಸಹ ರಾಷ್ಟ್ರದ ಮುಖ್ಯವಾಹಿನಿಗೆ ಬರಬೇಕು ಎಂಬ ಸಂಕಲ್ಪದಿಂದ ರಾಜಕಾರಣ ಮಾಡುತ್ತಿರುವವನು ವ್ಯಕ್ತಿ. ಒಮ್ಮೆ ಗೋವಿಂದರಾಜನಗರದಲ್ಲಿ ಮಾಡಿರುವ ಅಭಿವೃದ್ದಿಯನ್ನು ನೋಡಿ ಬನ್ನಿ. ಅಲ್ಲಿ ಬಡವ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಕೋಚಿಂಗ್ ಸೆಂಟರ್‍ಗಳನ್ನು ಆರಂಭಿಸಿದ್ದೇನೆ. ಶಿಕ್ಷಣ, ಆರೋಗ್ಯ, ಮೂಲಸೌಲಭ್ಯಕ್ಕೆ ಆದ್ಯತೆ ನೀಡಿ, ನನ್ನ ಹೆಜ್ಜೆ ಗುರುತುಗಳನ್ನು ಅಲ್ಲಿವೆ. ಒಮ್ಮೆ ನೋಡಿ ಬನ್ನಿ ಎಂದರು.
ನಾನು ಎಂದು ಸಹ ಜಾತಿ ರಾಜಕಾರಣ ಮಾಡಿದವಲ್ಲ. ನನ್ನ ಕ್ಷೇತ್ರದಲ್ಲಿ ನನ್ನ ಸಮುದಾಯದವರು ಕಡಿಮೆ ಇದ್ದರು. ಎಲ್ಲ ಜನಾಂಗದವರ ವಿಶ್ವಾಸವನ್ನು ಗಳಿಸಿ, ಗೆಲ್ಲುತ್ತಾ ಬಂದಿದ್ದೇನೆ. ದೇವರು ಹಾಗೂ ಹೈಕಮಾಂಡ್ ಆಶಯದಂತೆ ಇಲ್ಲಿಗೆ ಬಂದಿದ್ದೇನೆ. ಯಾವುದೇ ಆಸೆ ಇಟ್ಟುಕೊಂಡು ಇಲ್ಲಿಗೆ ಬಂದಿಲ್ಲ. ಅಭಿವೃದ್ದಿ ನನ್ನ ಮಂತ್ರವಾಗಿದೆ. ಕ್ಷೇತ್ರದ ಜನರು ಬಹಳ ಬುದ್ದಿವಂತರು, ಮುಗ್ದರು, ಸ್ವಾಭಿಮಾನಿಗಳು ಆಗಿದ್ದೀರಿ. ನಿಮ್ಮ ಒಂದು ಮತ ಅಭಿವೃದ್ದಿಗಾಗಿ ಎಂದು ಭಾವಿಸಿ, ನಿಮ್ಮ ಸೋಮಣ್ಣನಿಗೆ ಒಂದು ಮತ ನೀಡಿ ನೋಡಿ ಎಂದು ಮನವಿ ಮಾಡಿದರು.
ನಾನಾಗಿ ಇಲ್ಲಿಗೆ ಬಂದವನಲ್ಲ. ಹೈಕಮಾಂಡ್ ನಾಯಕರು ಚಾ.ನಗರಕ್ಕೆ ಹೋಗುವಂತೆ ಸೂಚನೆ ಕೊಟ್ಟು, ಪಕ್ಷದ ಸಂಘಟನೆಯಾಗುತ್ತದೆ. ಶಕ್ತಿ ಬರುತ್ತದೆ ಎಂದರು. ಹೀಗಾಗಿ ನಿಮ್ಮ ಬಳಿ ಮತಯಾಚನೆ ಮಾಡುತ್ತಿದ್ದೇನೆ. ನಾನು ಜಾತಿವಾದಿಯಲ್ಲ. ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ದುಡಿಯುತ್ತಿರುವವನು. ನೀವು ಗೆಲ್ಲಿಸಿದರೆ ಚಾಮರಾಜನಗರ ಚಿತ್ರಣ ಬದಲಾಗುತ್ತದೆ. ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಿದೆ. ರೈತರ ಭೂಮಿಗಳಿಗೆ ಬೆಲೆ ತಂದು ಕೊಟ್ಟಿದ್ದೇನೆ.
ಅಪ್ಪು ಅಸ್ಪತ್ರೆ ನೆನಪಿನ ಕಾಣಿಕೆ ನೀಡಿದ ಮಂಗಲ ಗ್ರಾಮಸ್ಥರು :
ಮತಯಾಚನೆಗೆ ಆಗಮಿಸಿದ ವಿ. ಸೋಮಣ್ಣ ಅವರನ್ನು ಅರತಿ ಎತ್ತಿ ಸ್ವಾಗತಿಸಿದ ಮುಖಂಡರು ಹಾಗೂ ಮಹಿಳೆಯರು ಗೋವಿಂದರಾಜನಗರದಲ್ಲಿ ಸಚಿವ ವಿ. ಸೋಮಣ್ಣ ಪುನೀತ್‍ರಾಜ್‍ಕುಮಾರ್ ನೆನಪಿನಾರ್ಥ ನಿರ್ಮಿಸಿರುವ ಸೂಪರ್ ಸÉ್ಪಷಾಲಿಟಿ ಅಸ್ಪತ್ರೆ ಚಿತ್ರದಲ್ಲಿರುವ ಅಪ್ಪು ಹಾಗೂ ಸೋಮಣ್ಣ ಅವರ ಭಾವಚಿತ್ರವಿರುವ ಪೋಟೊವನ್ನು ನೀಡಿ, ಶಾಲು ಹೊದಿಸಿ, ನೆನಪಿನ ಹೂವಿನ ಹಾರವನ್ನು ಅಪ್ಪಟ ಪುನಿತ್ ಅಭಿಮಾನಿ ಗ್ರಾಮದ ಹೋಟೆಲ್ ರಾಜು ಅವರು ಹಾಕಿದರು. ಭಾವಚಿತ್ರವನ್ನು ಸ್ವೀಕರಿಸಿ ಒಂದು ಕ್ಷಣ ಭಾವುಕರಾದ ಸೋಮಣ್ಣ, ಮಂಗಲ ಗ್ರಾಮಸ್ಥರ ಚಿಂತನೆಯನ್ನು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಹೊಟೆಲ್ ರಾಜು, ಮಾಲಂಗಿ ಮೂರ್ತಿ, ಪ್ರಭುಸ್ವಾಮಿ,ಗ್ರಾ.ಪಂ. ಸದಸ್ಯ ಸುರೇಶ್ ಮೊದಲಾಧವರು ಇದ್ದರು.
ಈ ಸಂದರ್ಭದಲ್ಲಿ ಕೇಂದ್ರ ಬರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರು, ಮುಖಂಡರಾದ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್, ಜಿ.ಪಂ. ಮಾಜಿ ಅಧ್ಯಕ್ಷ ಆಲೂರು ನಟರಾಜು, ಮಾಜಿ ಸದಸ್ಯರಾದ ಆರ್. ಬಾಲರಾಜು, ಸಿ.ಎನ್. ಬಾಲರಾಜು, ಅಮ್ಮನಪುರ ಮಲ್ಲೇಶ್, ದಲಿತ ಮುಖಂಡ ವೆಂಕಟರಮಣಸ್ವಾಮಿ ಪಾಪು, ಕೆ. ವೀರಭದ್ರಸ್ವಾಮಿ, ಮಾದಾಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಭೋಗಾಪುರ ಕುಮಾರಸ್ವಾಮಿ, ಮಂಡಲದ ಅಧ್ಯಕ್ಷ ಬಸವಣ್ಣ, ಪ್ರಧಾನ ಕಾರ್ಯದರ್ಶಿ ನಲ್ಲೂರು ಶ್ರೀನಾಥ್, ಮುಡ್ಲೂಪುರ ಮಂಜೇಶ್, ಮುಖಂಡರು ಮೊದಲಾದವರು ಇದ್ದರು.