ಬಡ,ನಿರ್ಗತಿಕರಿಗೆ ಉಚಿತ ಆಹಾರ ವಿತರಣೆ

ರಾಯಚೂರು, ಜೂ.೧೦- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಬಡ ಮತ್ತು ನಿರ್ಗತಿಕರಿಗೆ ಉಚಿತ ಆಹಾರ ವಿತರಣೆಯನ್ನು ಮಾಡಲಾಯಿತು.
ನಗರದ ಮಂಗಳವಾರಪೇಟೆ ಯಲ್ಲಿ ಆಹಾರವನ್ನು ತಯಾರಿಸಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಇಲಾಖೆ ಅಧ್ಯಕ್ಷ ವೈ ಸಯೀದ್ ಅಹ್ಮದ್ ಜಿ,
ಅಲ್ಪಸಂಖ್ಯಾತ ಇಲಾಖೆ ಕೆಪಿಸಿಸಿ ರಾಜ್ಯ ಕೋ-ಆರ್ಡಿನೇಟರ್ ಮೊಹಮ್ಮದ್ ಫಿರೋಜ್ ಹಮ್ರಾಜ್,ಸೇರಿದಂತೆ ಇತರರು ಉಪಸ್ಥಿತರಿದ್ದರು.