ಬಡತನ ಶಾಪವಲ್ಲ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದೇಗೌಡ

ಕೆಜಿಎಫ್: ಆ:೫- ವರಮಹಾಲಕ್ಷ್ಮಿ ಹಬ್ಬವು ಹಿಂದೆ ಶ್ರೀಮಂತರ ಹಬ್ಬವೆಂಬ ಪ್ರತೀತಿ ಇತ್ತು ಆದರೆ ಡಿಸಿಸಿ ಬ್ಯಾಂಕ್ ವರಮಹಾಲಕ್ಷ್ಮಿ ಹಬ್ಬವು ಕೇವಲ ಶ್ರೀಮಂತರ ಹಬ್ಬವಲ್ಲ ಬಡ ಕುಟುಂಬಗಳು ಸಹ ವರಮಹಾಲಕ್ಷ್ಮಿ ದೇವಿಯ ಆರಾಧನೆಯನ್ನು ವಿಶಿಷ್ಠವಾಗಿ ಮಾಡಬೇಕು ಎಂಬ ದೃಷ್ಠಿಯಿಂದ ಬಡ ಕುಟುಂಬಗಳಿಗೆ ಡಿಸಿಸಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ ನಮ್ಮ ಸೇವೆ ಕಟ್ಟಕಡೆಯ ಕುಟುಂಭ ಆರ್ಥಿಕತೆಯಿಂದ ಉನ್ನತಮಟ್ಟಕ್ಕೆ ತಲುಪವವರೆಗೂ ನಿರಂತರವಾಗಿ ಮುಂದುವರೆಯಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿಗೋವಿಂದೇಗೌಡ ಹೇಳಿದರು.
ಅವರು ನಗರಸಭೆ ಸಭಾಂಗಣದಲ್ಲಿ ಕೆಂಪಾಪುರ ವ್ಯವಸಾಯ ಸೇವಾ ಸಂಘದ ವ್ಯಾಪ್ತಿಯಲ್ಲಿ ೧೧ ಸ್ರೀ ಶಕ್ತಿ ಸಂಘಗಳಿಗೆ ೫೫ ಲಕ್ಷ ಸಾಲವನ್ನು ವಿತರಿಸಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಮಹಿಳೆಯರು ಆರ್ಥಿಕವಾಗಿ ಮುಂದುವೆಯುವ ನಿಟ್ಟಿನಲ್ಲಿ ನೂರಾರು ಕೋಟಿ ಸಾಲವನ್ನು ವಿತರಿಸಲಾಗಿದೆ ಬ್ಯಾಂಕ್‌ನಿಂದ ಸಾಲ ಪಡೆದ ಮಹಿಳೆಯರು ಸುಳ್ಳು ಅಪಪ್ರಚಾರಗಳಿಗೆ ಕಿವಿಗೊಡದೆ ಪ್ರಮಾಣಿಕವಾಗಿ ಮರು ಪಾವತಿ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಸ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳಿಗೆ ಮುಂದಿನ ದಿನಗಳಲ್ಲಿ ೧ ಲಕ್ಷ ಸಾಲವನ್ನು ನೀಡುವ ಯೋಜನೆ ಹಾಕಿಕೊಳ್ಳಲಾಗಿದ್ದು ಸಾಲ ಪಡೆದ ಮಹಿಳೆಯರು ಸ್ವಾವಂಲಭನೆ ಬದುಕು ನಡೆಸುವಂತೆ ಕಿವಿ ಮಾತುಗಳನ್ನು ಹೇಳಿದರು.
ಬ್ಯಾಂಕ್ ಎಂಬುದು ದೇವಾಲಯ ವಿದ್ದಂತೆ ಎಂಬುದನ್ನು ಅರಿತಿರುವ ಮಹಿಳೆಯರು ತಮ್ಮ ಕುಟುಂಬವನ್ನು ಉನ್ನತಮಟ್ಟಕ್ಕೆ ಕೊಂಡ್ಯುಯುವ ನಿಟ್ಟಿನಲ್ಲಿ ಉತ್ತಮ ಮಾರ್ಗದಲ್ಲಿ ಮುನ್ನೆಡೆಯುತ್ತಿದ್ದಾರೆ ಮಹಿಳೆಯರು ಸ್ವಂತ ಗುಡಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಇಚ್ಚಿಸಿದರೆ ಅವರಿಗೆ ಡಿಸಿಸಿ ಬ್ಯಾಂಕ್ ಸಾಲ ನೀಡಿ ಮಾರ್ಗದರ್ಶನವನ್ನು ನೀಡಲಿದೆ ಎಂದು ಹೇಳಿದರು.
ಶಾಸಕಿ ರೂಪಕಲಾಶಶಿಧರ್ ಮಾತನಾಡಿ ದೇಶದಲ್ಲೇ ಡಿಸಿಸಿ ಬ್ಯಾಂಕ್ ಮಾತ್ರ ಯಾವುದೆ ದಾಖಲೆಗಳನ್ನು ಪಡೆಯದೆ ಮಹಿಳೆಯರ ಪ್ರಮಾಣಿಕತೆಯನ್ನು ನಂಬಿ ಸಾಲವನ್ನು ಮನೆ ಭಾಗಿಲಿಗೆ ತಲುಪಿಸಿದ್ದು ಹಲವು ಜನರು ಹಲವು ಬಗೆಯ ಮಾತುಗಳನ್ನು ಆಡಿದರು ಮಹಿಳೆಯರು ಪ್ರಮಾಣಿಕವಾಗಿ ಪಡೆದ ಸಾಲವನ್ನು ಮರು ಪಾವತಿ ಮಾಡುತ್ತಿರುವುದು ಸಂತೋಷಕಾರಿ ಸಂಗತಿಯಾಗಿದೆ ಇದರಿಂದ ಇನ್ನು ಹೆಚ್ಚಿನ ಮಹಿಳೆಯರಿಗೆ ಸಾಲ ನೀಡಲು ಉತ್ತೇಜನ ನೀಡಿದಂತೆ ಆಗಿದೆ ಕ್ಷೇತ್ರ ಪ್ರತಿ ಬಡ ಕುಟುಂಬಗಳ ಹೆಣ್ಣು ಮಗಳಿಗೆ ಸಾಲವನ್ನು ನೀಡುವ ಮೂಲಕ ತನ್ನ ಸ್ವಂತ ಕಾಲ ಮೇಲೆ ನಿಲ್ಲುವಂತೆ ಮಾಡಲಾಗುತ್ತಿದೆ ಡಿಸಿಸಿ ಬ್ಯಾಂಕ್ ನೀಡುತ್ತಿರುವ ಸಾಲ ಯೋಜನೆಯಲ್ಲಿ ಜಾತಿ ಧರ್ಮ ಪಕ್ಷ ಭೇದವಿಲ್ಲದೆ ಎಲ್ಲಾ ವರ್ಗದ ಜನರಿಗೂ ಸಾಲವನ್ನು ನೀಡಲಾಗುತ್ತಿದ್ದು ಬಡ ಕುಟುಂಬಗಳು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ನಂತರ ೬ ರಂದು ಜನಸ್ಪಂದನ ಸಭೆ ನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಾರ್ವಜನಿಕರಿಗೆ ಶಾಸಕರು ಕೊರಿದರು.

ಈ ವೇಳೆ ನಗರಸಭೆ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ,ಉಪಾಧ್ಯಕ್ಷೆ ದೇವಿಗಣೇಶ್,ನಗರಸಭೆ ಸದಸ್ಯರಾದ ಕರುಣಕರನ್,ಜರ್ಮನ್, ವೇಣುಗೋಪಾಲ್,ಪ್ರವೀಣ್,ಇಂದಿರಗಾಂಧಿದಯಾಶಂಕರ್ ಹಾಗೂ ಇತರರು ಹಾಜರಿದ್ದರು.