ಬಡತನ ನಿವಾರಣೆಗೆ ಎಂಜಿನಿಯರಿಂಗ್ ತಂತ್ರಜ್ಞಾನದ ಅಗತ್ಯವಿದೆ

 ಚಿತ್ರದುರ್ಗ. ಸೆ.೧೭; ಬಡವರ ಕುಸಿಯುತ್ತಿರುವ ಮನೇಗೆ ಎಂಜಿನಿಯರ್‌ಗಳ ಸಹಾಯ ಅಗತ್ಯವಾಗಿದೆ, ಗುಡಿಸಲಲ್ಲಿರುವ ಸಾವಿರಾರು ಕುಟುಂಬಗಳಿಗೆ ಬದುಕಲು ಮನೆಗಳಿಲ್ಲದೆ, ಅನಾಥರಾಗಿ ರಸ್ತೆ ಬದಿಯಲ್ಲಿ, ಟೆಂಟ್‌ಗಳಲ್ಲಿ ಗುಡಿಸಲುಗಳಲ್ಲಿ ವಾಸವಾಗಿರುವವರನ್ನು, ಕನಿಷ್ಠ ಮೂಲ ಸೌಕರ್ಯಗಳೊಂದಿಗೆ ವಾಸಿಸುವಂತಹ ಮನೆ ನಿರ್ಮಾಣ ಮಾಡಿ, ಕಡಿಮೆ ವೆಚ್ಚದಲ್ಲಿ ಅವರನ್ನು ಮೇಲೆತ್ತುವ ದಾರಿಗಳನ್ನು ಇಂಜಿನಿಯರ್‌ಗಳು ಮಾಡಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷರಾದ ಡಾಕ್ಟರ್ ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು. 
ಅವರು ನಗರದ ತಮಟಕಲ್ಲು ರಸ್ತೆಯಲ್ಲಿರುವ ಸುಡುಗಾಡು ಸಿದ್ಧರ ಕಾಲೊನಿಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಲ್ಪವೃಕ್ಷ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ “ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮದಿನ” ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸರ್. ಎಂ. ವಿಶ್ವೇಶ್ವರಯ್ಯನವರುÀ ಕೈಗಾರೀಕರಣ ಇಲ್ಲವೇ ವಿನಾಶ ಎಂಬ ವಿಚಾರವಾಗಿ ಸಾಕಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಗುಡಿ ಕೈಗಾರಿಕೆಗಳಿಗೂ ಸಹ ಪ್ರೋತ್ಸಾಹ ನೀಡುವಂತಹ ವ್ಯವಸ್ಥೆ ಮಾಡಿದಾಗ ಮಾತ್ರ ಪ್ರತಿಯೊಬ್ಬರಿಗೂ ಬದುಕುವ ಅವಕಾಶ ಕಲ್ಪಿಸಿದಂತಾಗುತ್ತದೆ. ಮಾನವ ಶಕ್ತಿಯನ್ನು ಉಳಿಸುವ ಪ್ರಯತ್ನದ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಹುಟ್ಟು ಹಾಕಬಾರದು ಎಂಬ ವಿಚಾರವಾಗಿ ವಿಶ್ವೇಶ್ವರಯ್ಯನವರು ಮತ್ತು ಮಹಾತ್ಮ ಗಾಂಧೀಜಿಯವರು ಬಹಳಷ್ಟು ಚಿಂತನೆಗಳನ್ನ ಮಾಡಿದರು. ವಿಶ್ವೇಶ್ವರಯ್ಯನವರ ಕೆಲಸಗಳ ಬಗ್ಗೆ ಮಹಾತ್ಮಾ ಗಾಂಧೀಜಿಯವರಿಗೆ ಕುತೂಹಲ ತುಂಬಿತ್ತು. ಸಾಕಷ್ಟು ಬಾರಿ ಅವರು ನಿಮ್ಮ ಕೆಲಸಗಳನ್ನು ತಿಳಿಸಿ ಎಂದು ಪತ್ರ ವ್ಯವಹಾರ ಮಾಡಿದ್ದರು ಎಂದರು.ವಿಶ್ವೇಶ್ವರಯ್ಯನವರAತೆ ಪ್ರಾಮಾಣಿಕವಾಗಿ ಕೆಲಸ ಮಾಡುವಂಥ ಇಂಜಿನಿಯರ್‌ಗಳ ಅವಶ್ಯಕತೆ ಇಂದು ಹೆಚ್ಚಾಗಿದೆ. ಸಾಮಾಜಿಕ ಕಳಕಳಿಯುಳ್ಳಂಥವರು, ರೈತರ ಸಮಸ್ಯೆಗಳಿಗೆ ಸ್ಪಂದಿಸುವAಥವರು, ರಸೆ,್ತ ಸಾರಿಗೆ, ಕಟ್ಟಡಗಳ ನಿರ್ಮಾಣ, ಹಾಸ್ಟೆಲ್‌ಗಳ ನಿರ್ಮಾಣ, ನೀರಿನ ಟ್ಯಾಂಕರ್‌ಗಳ ನಿರ್ಮಾಣ, ನೀರು ಕಾಲುವೆಗಳ ನಿರ್ಮಾಣಕ್ಕೆ, ಪ್ರಾಮಾಣಿಕವಾಗಿ ಕೆಲಸ ಮಾಡುವಂತಹ ಎಂಜಿನಿಯರ್‌ಗಳನ್ನು ಭಾರತ ನಿರೀಕ್ಷಿಸುತ್ತಿದೆ ಎಂದರು.ಬಡತನ ನಿವಾರಣೆಗೆ ಎಂಜಿನಿಯರ್‌ಗಳು ಪ್ರಯತ್ನಪಟ್ಟು, ಅವರ ದುಡಿಮೆಗೆ ಅನುಕೂಲವಾಗುವಂತಹ ಎಲ್ಲಾ ಏರ್ಪಾಡುಗಳನ್ನು ಮಾಡಿಕೊಡಬೇಕಾಗಿದೆ. ಪಾಶ್ಚಿಮಾತ್ಯ ದೇಶಗಳಂತೆ ಮಾನವಶಕ್ತಿಯನ್ನು ಉಳಿಸುವಂತಹ, ತಾಂತ್ರಿಕ ಜ್ಞಾನದಿಂದ ಭಾರತಕ್ಕೆ ದೊಡ್ಡ ಆಘಾತವಾಗುತ್ತದೆ ಎಂದು ಗಾಂಧೀಜಿಯವರು ನುಡಿದಿದ್ದರು. ಹೆಚ್ಚು ಜನಸಂಖ್ಯೆ ಇರುವ ದೇಶದಲ್ಲಿ ಮಾನವಶಕ್ತಿ ಬಳಕೆಯ ಬಗ್ಗೆ ತಾಂತ್ರಿಕ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು, ಮನುಷ್ಯರನ್ನ ಬೀದಿಗೆ ತಳ್ಳುವಂತಹ ತಾಂತ್ರಿಕ ಜ್ಞಾನವನ್ನು ನಾವು ಕಡಿಮೆ ಮಾಡಿಕೊಳ್ಳಬೇಕಾಗಿದೆ ಎಂದರು,ಜನರನ್ನು ಉಪವಾಸ ಕೆಡವಿ ನಾವು ಅಭಿವೃದ್ಧಿಯನ್ನು ಮಾಡಲಸಾಧ್ಯವಿಲ್ಲ, ಕಟ್ಟಕಡೆಯವನಿಗೂ ಸಹ ಬದುಕುವಂಥ ಅವಕಾಶವನ್ನು ನಾವು ತಾಂತ್ರಿಕ ಜ್ಞಾನವನ್ನ ನೀಡಬೇಕಾಗಿದೆ. ವಿಶ್ವೇಶ್ವರಯ್ಯನವರ ನಮ್ಮ ಎಲ್ಲ ಕೆಲಸಗಳಿಗೂ ದಾರಿದೀ¥ವನ್ನಾಗಿ ಮಾಡಿಕೊಂಡು, ಸಮಾಜಸೇವೆಯನ್ನ ವಿಸ್ತರಿಸಬೇಕಾಗಿದೆ. ತಾಂತ್ರಿಕ ಜ್ಞಾನ ಹೆಚ್ಚಾಗಿ, ಇಂದು ಎಂಜಿನಿಯರ್‌ಗಳಿಗೆ ನಿರುದ್ಯೋಗ ಸಮಸ್ಯೆ ಕಾಡುವಂತಾಗಿದೆ ಎಂದರು.ಮಕ್ಕಳು ಸರ್. ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಘೋಷಣೆಗಳನ್ನು ಕೂಗಿ, ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಕೆಜೆವಿಎಸ್ ಉಪಾಧ್ಯಕ್ಷಕರಾದ ಶ್ರೀ ಜಯದೇಯ ಮೂರ್ತಿ, ಸವಿತ, ಗೌರಮ್ಮ, ಸಿಂಹಾದ್ರಿ, ಶಿವಕುಮಾರ, ರವಿ, ರಕ್ಷಿತ ಶಿವಕುಮಾರ ಹಾಜರಿದ್ದರು.