ಬಡತನ ನಿರ್ಮೂಲನೆಗೆ ಬಡ್ಡಿ ರಹಿತ ಸಾಲ ವಿತರಣೆ : ಸಂತೋಷಿರಾಣಿ ಆರ್

ಸೇಡಂ, ನ,12: ಕಲಬುರ್ಗಿ ಯಾದಗಿರಿ ಡಿ.ಸಿ.ಸಿ ಬ್ಯಾಂಕ್ ರಾಜಕುಮಾರ್ ಪಾಟೀಲ್ ತೇಲ್ಕೂರ ಅಧ್ಯಕ್ಷರಾದ ಮೇಲೆ ಬಡ ರೈತರ ಹಾಗೂ ಮಹಿಳೆಯರ ಬಡತನ ನಿರ್ಮೂಲನೆಗೆ ಹೆಚ್ಚಿನ ಆದಾಯ ಗಳಿಸಲು ಬಡ್ಡಿ ರಹಿತ ಸಾಲ ವಿತರಣೆ ಪ್ರಾರಂಭಿಸುವ ಮೂಲಕ ಸೇಡಂ ತಾಲೂಕಿನ ಚಿತ್ರಣವನ್ನು ಬದರಿಸಲು ಹೊರಟಿದ್ದಾರೆ ಅದಕ್ಕೆ ಪೂರಕವಾಗುವಂತೆ ಮಹಿಳೆಯರು ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದೇವೆ ಇದರ ಸದುಪಯೋಗ ತೆಗೆದುಕೊಂಡು ನಿಮ್ಮ ಕೈಯೊಳಗೆ ಕೆಲಸ ಮಾಡುವರನ್ನು ಇಟ್ಟುಕೊಳ್ಳುವಂತವರಾಗಿ ಎಂದು

ಸೇಡಂ ಕೃ.ಪ.ಸ.ಸಂಘದ ಅಧ್ಯಕ್ಷರಾದ ಶ್ರೀಮತಿ ಸಂತೋಷಿರಾಣಿ ರಾಜಕುಮಾರ ಪಾಟೀಲ್ ತೇಲ್ಕೂರ ಹೇಳಿದರು.

ತಾಲೂಕಿನ ಮಳಖೇಡ ಗ್ರಾಮದಲ್ಲಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಡಿ.ಸಿ.ಸಿ ಬ್ಯಾಂಕ್ನಿಂದ ಬಡ್ಡಿ ರಹಿತ ಸಾಲ ವಿತರಿಸಿ ಅವರು ಮಾತನಾಡಿದರು. ಈಗಾಗಲೇ ತಾಲೂಕಿನಾದ್ಯಂತ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಮಾಡಲಾಗಿದೆ ಆದ್ದರಿಂದ ಮಹಿಳೆಯರು ತಾವೇ ಸ್ವತಃ ಮುಂದೆ ಬಂದು ಇದರ ಸದುಪಯೋಗ ಪಡೆದುಕೊಳ್ಳಬೇಕು ಡಿ.ಸಿ.ಸಿ ಬ್ಯಾಂಕ್ ಯಾವುದೇ ಪಕ್ಷ ಜಾತಿ ಧರ್ಮ ನೋಡದೆ ಪ್ರತಿಯೊಬ್ಬ ಮಹಿಳೆಯರಿಗೆ ಸಾಲ ನಿಡುತ್ತಿದ್ದು ಆದ್ದರಿಂದ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳು ಆಸಕ್ತಿ ತೋರಿ ಎಂದು ಮನವಿ ಮಾಡಿದರು.ಈ ವೇಳೆಯಲ್ಲಿ ಸೇಡಂ ಪುರಸಭೆ ಅಧ್ಯಕ್ಷರಾದ ಶ್ರೀಮತಿ ಶೋಭಾ ಹೂಗಾರ,ವಿಜಯಲಕ್ಷ್ಮೀ ಕೋಬ್ರಿ,ಸುಲೋಚನಾ ಬಿಬ್ಬಳ್ಳಿ, ವಿಜಯಲಕ್ಷ್ಮೀ ವಿಶ್ವಕರ್ಮ,ಶೈಲಜಾ ಹಿತ್ತಲ್,ಮಹಾನಂದ ಸಾಹು ,ಮಳಖೇಡನ ಬಿಜೆಪಿ ಯುವ ಮುಖಂಡರು ಸೇರಿದಂತೆ ಅನೇಕ ಮಹಿಳೆಯರು ಉಪಸ್ಥಿತರಿದ್ದರು.